Published
6 months agoon
By
UNI Kannadaಬೆಂಗಳೂರು, ಜನವರಿ 1 (ಯು.ಎನ್.ಐ.) ರಾಜ್ಯದಲ್ಲಿ ಮೇಕೆದಾಟು ಪಾದಯಾತ್ರೆ ಮೂಲಕ ರಾಜಕೀಯ ಪ್ರಬಲ ಅಸ್ತಿತ್ವ ಕಾಣಲೆತ್ನಿಸುತ್ತಿರುವ ವಿಪಕ್ಷ ಕಾಂಗ್ರೆಸ್ ಸರ್ಕಾರದಲ್ಲಿದ್ದಾಗ ಮೇಕೆದಾಟು ಹೊಣೆಗೇಡಿತನವೆಸಗಿರುವ ಬಗ್ಗೆ ಕೆಲವೇ ದಿನಗಳಲ್ಲಿ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾರಜೋಳ, ರಾಜ್ಯದ ಹಿತದೃಷ್ಠಿಯಿಂದ ಮತ್ತು ರಾಜ್ಯದ ಜನತೆಗೆ ಕಾಂಗ್ರೆಸ್ನ ಸತ್ಯ ಗಮನಕ್ಕೆ ತರಲಾಗುವುದು. ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಮತ್ತು ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ. ಜನವರಿ 7, 2013 ರಿಂದ ಜನವರಿ 14, 2013ರವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ರಾಜಕೀಯ ಗಿಮಿಕ್ ಮಾಡಿದ್ದರು ಎಂದು ಟೀಕಿಸಿದರು.
ಅಧಿಕಾರದಲ್ಲಿದ್ದಾಗ ಆಲಸ್ಯತನ ತೋರುವುದು, ಕಡತ ಯಜ್ಞ ಮಾಡದೇ ಕಾಲಹರಣ ಮಾಡುವುದು, ವಿರೋಧಪಕ್ಷದಲ್ಲಿ ಬಂದಾಗ ಅನಗತ್ಯವಾದ ಆಂದೋಲನಗಳನ್ನು ಕೈಗೊಳ್ಳುವುದು ಕಾಂಗ್ರೆಸ್ ನವರ ಜಾಯಮಾನ ಎಂದು ಸಚಿವರು ವ್ಯಂಗ್ಯವಾಡಿದರು. ತಾವು ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರ ಮತ್ತು ಜನಹಿತದ ಕೆಲಸಗಳನ್ನು ವಿಳಂಬ ದ್ರೋಹದ ಮೂಲಕ ಮುಂದೂಡಿ ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡುವುದು ಜನರಿಗೆ ತಿಳಿಯುತ್ತದೆ ಎಂದು ಸಚಿವರು ವಿವರಿಸಿದರು.
“ಡಿಕೆಶಿ ಮಾತಾಡಲು ಅವಕಾಶ ಕೊಟ್ಟಿಲ್ಲ” – ಶಿಸ್ತು ಸಮಿತಿ ನೋಟಿಸ್ಗೆ ಲಕ್ಷ್ಮೀನಾರಾಯಣ ಟೀಕಾಪ್ರಹಾರ
ರಾಜ್ಯದಲ್ಲಿ ಮಳೆ ಆರ್ಭಟ: ನಾಳೆ ಸಭೆ ಕರೆದ ಮುಖ್ಯಮಂತ್ರಿ ಬೊಮ್ಮಾಯಿ
“ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು” – ಸಿಎಂ ಬೊಮ್ಮಾಯಿ
45.56 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ, ಜೀರ್ಣೋದ್ಧಾರ
ವಿದ್ಯುತ್ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ : ಬೆಸ್ಕಾಂ ಸ್ಪಷ್ಟನೆ
‘ವೀರೇಂದ್ರ ಹೆಗ್ಗಡೆಯವರ ಅನುಭವ ಇಡೀ ದೇಶಕ್ಕೆ ಲಾಭ ತಂದುಕೊಡಲಿದೆ’