Published
5 months agoon
ಬೆಳಗಾವಿ: (ಸುವರ್ಣಸೌಧ) ಡಿಸೆಂಬರ್ ೧೬ (ಯು.ಎನ್.ಐ.) ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಶೇಕಡ ೪೦ರಷ್ಟು ಪರ್ಸೆಂಟೇಜ್ ಆರೋಫದ ಬಗ್ಗೆ ನ್ಯಾಯಾಂಗ ತನಿಖೆ ಮಾಡ್ಬೇಕಾ ಅಥವಾ ಸುಪ್ರೀಂ ಕೋರ್ಟ್ ಜಡ್ಜ್ ಮೂಲಕ ತನಿಖೆಯಾಗ್ಬೇಕಾ ಆಗ್ಲಿ ಎಂದು ಸಚಿವ ಈಶ್ವರಪ್ಪ ಹೇಳಿದರು.
ಅವರಿಂದು ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರದ ವಿರುದ್ದ 40 ಪರ್ಸೇಂಟೇಜ್ ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ನವ್ರು ಬದುಕಿದ್ದಾರೆ ಎಂದು ತೋರಿಸಲು ಹೀಗೆ ಮಾಡ್ತಿದ್ದಾರೆ. ಅಸೋಸಿಯೇಷನ್ ನವ್ರು ಪತ್ರ ಬರೆದಿದ್ದಾರೆ. ನಾವು ತನಿಕೆಯನ್ನ ಸ್ವಾಗತ ಮಾಡ್ತಿವಿ, ತನಿಖೆಯಿಂದ ಯಾರ್ ಯಾರು ಎಷ್ಟು ಪರ್ಸೆಂಟೆಜ್ ತೆಗೆದುಕೊಂಡಿದ್ದಾರೋ ಗೊತ್ತಾಗುತ್ತದೆ. ಕಾಂಗ್ರೆಸ್ ನವ್ರೇ ಸಿಕ್ಕಿಬಿಳ್ತಾರೆ ಎಂದು ಪ್ರತಿಕ್ರಿಯಿಸಿದರು,
ಈ ಬಗ್ಗೆ ಅಧಿವೇಶನದಲ್ಲಿ ಅವ್ರು ಚರ್ಚೆ ಮಾಡಲಿ. ಸರ್ಕಾರ ಚರ್ಚೆಗೆ ಸಿದ್ದವಿದೆ. ಯಾವ ಇಲಾಖೆ ಯಾವ ಯೋಜನೆಗೆ ಎಷ್ಟು ಕೊಟ್ಟಿದ್ದಾರೆ ಅಂತ ಹೇಳಿದ್ದಾರಾ..? ಆದರೆ ಕಾಂಗ್ರೆಸ್ ನವ್ರು ಟ್ರ್ಯಾಕ್ಟರ್ ರ್ಯಾಲಿ ಮಾಡ್ತಿರೋದು ನಾಟಕ ಅಷ್ಟೇ ಎಂದು ವ್ಯಂಗ್ಯವಾಡಿದರು.
ಈ ಪರ್ಸೆಂಟೇಜ್ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ನವ್ರು ಕೇಳ್ತಿದ್ದಾರೆ ಈ ಬಗ್ಗೆ ಮುಖ್ಯಮಂತ್ರಿ ಗಳು ತೀರ್ಮಾನ ಮಾಡ್ತಾರೆ. ಆದರೆ ಈ ಬಗ್ಗೆ ತನಿಖೆ ಆದರೆ ಕಾಂಗ್ರೆಸ್ ನವರಿಗೆ ಶಿಕ್ಷೆ ಆಗೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಅಶೋಕ್ ಪ್ರತಿಕ್ರಿಯೆ: ಪ್ರತಿಭಟನೆ ನಡೆಸಲು ಕಾಂಗ್ರೆಸ್ ನವರಿಗೆ ನೈತಿಕ ಅಧಿಕಾರ ಇಲ್ಲ. ಅವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗಿದೆ. ಅವರೇ ದೊಡ್ಡ ಭ್ರಷ್ಟಾಚಾರದ ಪಿತಾಮಹರು. ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರ ರಹಿತವಾದ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಇದ್ದಾಗ ಹಲವು ಭ್ರಷ್ಟಾಚಾರ ಪ್ರಕರಣ ಗಳು ಬೆಳಕಿಗೆ ಬಂದಿವೆ ಅವ್ರು ಮಾಡುವ ಆರೋಪ ಗಳಿಗೆ ಯಾವುದೇ ದಾಖಲೆ ಇಲ್ಲ
ಕಾಂಗ್ರೆಸ್ ನವ್ರೆ ಪರ್ಸೆಂಟೇಜ್ ಬಗ್ಗೆ ದೂರು ಕೊಡಿಸಿರೋದು. ಕಾಂಗ್ರೆಸ್ ಬುದ್ದಿಯೇ ಗಾಳಿಯಲ್ಲಿ ಗುಂಡಿ ಹೊಡೆಯೋದು. ಅವ್ರು ಆರೋಪಕ್ಕೆ ತಕ್ಮಂತೆ ಸೂಕ್ತ ದಾಖಲೆ ಕೊಡಲಿ. ಅವ್ರು ದಾಖಲೆ ಕೊಟ್ರೆ, ಅವ್ರ ಬಣ್ಣವೇ ಬಯಲು ಆಗುತ್ತೆ ಎಂಬ ಭಯ ಅವರಿಗಿದೆ.ಬಿಟ್ ಕಾಯಿನ್ ಅಂತಿದ್ರು, ಬಿಟ್ಟೂ, ಇಲ್ಲ ಕಾಯಿನ್ನೂ ಇಲ್ಲ. ಅವ್ರು ಸದನದಲ್ಲಿ ಮಾತಾಡಿದ್ತೆ, ನಾವು ಕೂಡ ಸದನದಲ್ಲಿ ಅವ್ರ ಆಡಳಿತದಲ್ಲಿನ ಪರ್ಸೆಂಟೇಜ್ ದಾಖಲೆ ಬಿಡುಗಡೆ ಮಾಡ್ತೇವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಓವೈಸಿ.. ಕೇಳಿಸಿಕೊಳ್ಳಿ, ನಾಯಿ ಕೂಡ ಔರಂಗಜೇಬನ ಗೋರಿ ಮೇಲೆ ಮೂತ್ರ ಮಾಡಲ್ಲ: ದೇವೇಂದ್ರ ಫಡ್ನವೀಸ್
ಕೇಜ್ರಿವಾಲ್, ಶರದ್ ಪವಾರ್ ಮೇಲೆ ಸಚಿವ ಧರ್ಮೇಂದ್ರ ಪ್ರಧಾನ್ ‘ಕಪಾಳಮೋಕ್ಷ’
ದೆಹಲಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ; ಸ್ವತಂತ್ರ ಭಾರತದ ದೊಡ್ಡ ವಿನಾಶ ಎಂದ ಕೇಜ್ರಿವಾಲ್
ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲವೇ ; ಹೆಚ್ಡಿಕೆ ಪ್ರಶ್ನೆ
ರಾಷ್ಟ್ರವನ್ನು ದಾರಿತಪ್ಪಿಸುವ ನಕಲಿ ಹಿಂದುತ್ವ ಪಕ್ಷವಿದೆ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ
ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ್ದ ನಟಿಯ ಬಂಧನ