Connect with us


      
ವಿದೇಶ

ಗ್ರ್ಯಾಮಿ ಅವಾರ್ಡ್ ಸಮಾರಂಭ ಮುಂದೂಡಿಕೆ

Vanitha Jain

Published

on

ಲಾಸ್ ಏಂಜಲ್ಸ್: ಜನೆವರಿ 06 (ಯು.ಎನ್.ಐ)ಕೊರೋನಾ ಹಾಗೂ ಒಮೈಕ್ರಾನ್ ಕಾರಣ ಹಲವು ಸಮಾರಂಭಗಳು, ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಗ್ರ್ಯಾಮಿ ಅವಾರ್ಡ್.

ಲಾಸ್ ಏಂಜಲ್ಸ್‍ನಲ್ಲಿ ಜನವರಿ 31ರಂದು ನಡೆಯಬೇಕಿದ್ದ ಗ್ರ್ಯಾಮಿ ಅವಾರ್ಡ್  2022 ಸಮಾರಂಭವನ್ನು ಒಮೈಕ್ರಾನ್ ಕಾರಣ ಮುಂದೂಡಲಾಗಿದೆ.
ಸಂಘಟಕರು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, 64ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಮತ್ತು ಸಂಗೀತ ವಲಯದಲ್ಲಿರುವವರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಗ್ರ್ಯಾಮಿ ಅವಾಡ್ರ್ಸ್ 2022 ರದ್ದಾಗಿರುವುದು ಇದೇ ಮೊದಲಲ್ಲ, ಕಳೆದ ವರ್ಷವೂ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಮಾರಂಭವನ್ನು ಮುಂದೂಡಲಾಯಿತು.

ಗ್ರ್ಯಾಮಿ ಅವಾಡ್ರ್ಸ್ 2022ರ ಹೊರತಾಗಿ, ಸ್ಲ್ಯಾಮ್‍ಡಾನ್ಸ್ ಫಿಲ್ಮ್ ಫೆಸ್ಟಿವಲ್, ರೋಟರ್‍ಡ್ಯಾಮ್ ಫಿಲ್ಮ್ ಫೆಸ್ಟಿವಲ್, ಕ್ರಿಟಿಕ್ಸ್ ಚಾಯ್ಸ್ ಅವಾಡ್ರ್ಸ್, ಎಎಫ್‍ಐ ಅವಾಡ್ರ್ಸ್, ಬಫ್ತಾ ಟೀ ಪಾರ್ಟಿ, ಹೆಚ್‍ಸಿಎ ಫಿಲ್ಮ್ ಅವಾಡ್ರ್ಸ್ ಸಮಾರಂಭ, ಪಾಮ್ ಸ್ಪ್ರಿಂಗ್ಸ್, . ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಪ್ರಶಸ್ತಿಗಳ ಗಾಲಾ, ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ಸಮಾರಂಭ ಮುಂತಾದ ಅನೇಕ ಪ್ರತಿಷ್ಠಿತ ಪ್ರಶಸ್ತಿ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

Share