Connect with us


      
ಕರ್ನಾಟಕ

ಗ್ರೇಟ್ ಬೆಂಗಳೂರು 10 ಕೆ ಮ್ಯಾರಾಥಾನ್ ಆಯೋಜನೆ

Kumara Raitha

Published

on

ಬೆಂಗಳೂರು: ಸೆಪ್ಟೆಂಬರ್ 22 (ಯು.ಎನ್.ಐ.) ಮಹಾನಗರದಲ್ಲಿ ಗ್ರೇಟ್ ಬೆಂಗಳೂರು 10 ಕೆ ಮ್ಯಾರಾಥಾನ್ ಕೆ. ಆಯೋಜಿಸಲಾಗಿದೆ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.

ಅವರಿಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.  ಜನವರಿ 8 ರಂದು ಈ ಮ್ಯಾರಾಥಾನ್ ನಡೆಯಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ ಶುರುವಾಗಿ ವಿಧಾನಸೌಧ,ಎಂ ಜಿ ರಸ್ತೆ ಮೂಲಕ ಹಾದು ಹೋಗಲಿರುವ ಮ್ಯಾರಾಥಾನ್ ಕಂಠೀರವ ಕ್ರೀಡಾಂಗಣದಲ್ಲಿ ಅಂತ್ಯವಾಗಲಿದೆ

ವೀಲ್ ಚೇರ್ ಅಥ್ಲೆಟಿಕ್ಸ್ 5 K ರನ್ ಕೂಡ ಆಯೋಜಿಸಲಾಗುತ್ತದೆ. 10 ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಕೇಂದ್ರ ಸರ್ಕಾರದಿಂದ ಅಕ್ಟೋಬರ್ 2 ರಿಂದ 31 ರ ವರೆಗೂ ಫಿಟ್ ಇಂಡಿಯಾ ಫ್ರೀಡಮ್ ರನ್ ನಡೆಯಲಿದೆ. ಬ್ರಾಂಡ್ ಅಂಬಾಸಿಡರ್ ಆದಷ್ಟು ಬೇಕು ನಿರ್ಧಾರವಾಗಲಿದೆ ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಲು ಈ ಮ್ಯಾರಥಾನ್ ನಡೆಸಲಾಗುತ್ತದೆ ಎಂದು ಕೆ.ಸಿ.ನಾರಯಣಗೌಡ ಹೇಳಿದ್ದಾರೆ

Share