Published
5 months agoon
By
Vanitha Jainನವದೆಹಲಿ, ಡಿಸೆಂಬರ್ 15(ಯು.ಎನ್.ಐ) ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರನ್ನು ಬಲಿತೆಗೆದುಕೊಂಡ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಿಸಲ್ಪಟ್ಟಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬುಧವಾರ ಬೆಳಿಗ್ಗೆ ನಿಧನರಾದರು.
ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರನ್ನು ತಮಿಳುನಾಡಿನ ಕೂನೂರಿನ ಅಪಘಾತದ ಸ್ಥಳದಿಂದ ಸ್ಥಳಾಂತರಿಸಿದ ನಂತರ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಾಯಗೊಂಡಿದ್ದ ಅವರು ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ.
ಡಿಸೆಂಬರ್ 8 ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಕೆಚ್ಚೆದೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಐಎಎಫ್ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ದುಃಖ ಸಾಗರದಲ್ಲಿ ಮುಳುಗಿರುವ ಅವರ ಕುಟುಂಬಕ್ಕೆ ಐಎಎಫ್ ಬೆಂಬಲವಾಗಿ ನಿಲ್ಲುತ್ತದೆ ಎಂದು ಐಎಎಫ್ ಟ್ವೀಟ್ ಮಾಡಿದೆ.
“ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ರಾಷ್ಟ್ರದ ಹೆಮ್ಮೆ. ಇವರು ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಹಿರಂಗ ಕ್ಷಮೆಯಾಚಿಸುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ ಎಎಪಿ ಶಾಸಕ
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ
ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ; ಖಾಕಿ ಅತಿಥಿಯಾದ ಯುವಕ
ಬೆಚ್ಚಿಬೀಳಿಸುವ ಪ್ಲಾನ್!; ಮನೆಯನ್ನೇ ಗ್ಯಾಸ್ ಚೇಂಬರ್ ಮಾಡಿಕೊಂಡು ಮೂವರ ಆತ್ಮಹತ್ಯೆ!
ಥಾಮಸ್ ಕಪ್ ವಿಜೇತ ಲಕ್ಷ್ಯಸೇನ್ ಬಳಿ ‘ಆ ಸ್ವೀಟ್’ ತರಲು ಹೇಳಿದ್ದರಂತೆ ಪ್ರಧಾನಿ ಮೋದಿ
ರಾಂಬನ್-ಬನಿಹಾಲ್ ಸುರಂಗ ಕುಸಿತ: ತನಿಖೆಗೆ ಕೇಂದ್ರದಿಂದ ಸಮಿತಿ ರಚನೆ