Connect with us


      




ಸಾಮಾನ್ಯ

ಟೀಂ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೌರವರಕ್ಷೆ!

Iranna Anchatageri

Published

on

ಹೊಸದಿಲ್ಲಿ: ಮಾರ್ಚ್ 05 (ಯು.ಎನ್.ಐ.) ಮೊಹಾಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಿತ್ತು. ವಿರಾಟ್ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯ ಇದಾಗಿದ್ದು, ಇದನ್ನು ವಿಶೇಷಗೊಳಿಸಲು ಟೀಂ ಇಂಡಿಯಾ ವಿಶಿಷ್ಠ ವಿಧಾನ ಅಳವಡಿಸಿಕೊಂಡಿತ್ತು. ಭಾರತ ತಂಡ ತನ್ನ ಇನಿಂಗ್ಸ್ ಮುಗಿದ ನಂತರ ಫೀಲ್ಡಿಂಗ್‌ಗೆ ಬಂದಾಗ ಕಿಂಗ್ ಕೊಹ್ಲಿಗೆ ತಂಡದ ಆಟಗಾರರು ಗೌರವ ರಕ್ಷೆ ನೀಡಿದರು.

ಮೊಹಾಲಿ ಟೆಸ್ಟ್‌ನಲ್ಲಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 574 ಸ್ಕೋರ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಟೀಂ ಇಂಡಿಯಾ ಫೀಲ್ಡಿಂಗ್ ಆರಂಭಿಸಿತು. ಟೀಂ ಇಂಡಿಯಾ ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದ ವೇಳೆ ಆಟಗಾರರೆಲ್ಲಾ ಮುಖಾಮುಖಿಯಾಗಿ ನಿಂತು ವಿರಾಟ್ ಕೊಹ್ಲಿಗೆ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಿದರು. ವಿರಾಟ್ ಕೊಹ್ಲಿಗೆ ಈ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದರು.

ಅದರಲ್ಲಿ ವಿರಾಟ್ ಕೊಹ್ಲಿ ಕೂಡ ಖುಷಿಯಿಂದಲೇ ಆಗಮಿಸಿ ಎಲ್ಲ ಆಟಗಗಾರಿಗೂ ಧನ್ಯವಾದ ಹೇಳಿದರು. ನಂತರ ವಿರಾಟ್ ಕೊಹ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ಅಪ್ಪಿಕೊಂಡು ಥ್ಯಾಂಕ್ಯು ಎಂದರು. ಈ ಅಮೋಘ ಕ್ಷಣವನ್ನು ಪ್ರೇಕ್ಷಕರು ಸಂತಸದಿಂದಲೇ ಕಣ್ತುಂಬಿಕೊಂಡರು.

ಪಂದ್ಯಕ್ಕೂ ಮುನ್ನ ಸನ್ಮಾನ
ಮೊಹಾಲಿ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಭಾರತ ತಂಡವು ವಿರಾಟ್ ಕೊಹ್ಲಿಯನ್ನು ಗೌರವಿಸಿತು. ಕೋಚ್ ರಾಹುಲ್ ದ್ರಾವಿಡ್ ವಿರಾಟ್‌ಗೆ ವಿಶೇಷ ಕ್ಯಾಪ್ ನೀಡಿದರು. ಅದರಲ್ಲಿ ಅವರ ಹೆಸರು ಮತ್ತು ಟೆಸ್ಟ್ ಸಂಖ್ಯೆಯನ್ನು ಮುದ್ರಿಸಲಾಗಿತ್ತು. ಈ ವೇಳೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾನದಲ್ಲಿದ್ದರು.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಆಡಿದ 12ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಅವರು ವಿಶ್ವ ಕ್ರಿಕೆಟ್‌ನಲ್ಲಿ 71ನೇ ಕ್ರಿಕೆಟಿಗರಾಗಿದ್ದಾರೆ. “ಇದು ನನಗೆ ಗೌರವ ಮತ್ತು ಕನಸುಗಳ ಈಡೇರಿಕೆಯ ವಿಷಯವಾಗಿದೆ. ನಾನು ಈ ಪಂದ್ಯವನ್ನು ಆಡಲು ಕ್ರೀಜ್ ಗೆ ಇಳಿದಾಗ ಚೊಚ್ಚಲ ಪಂದ್ಯವನ್ನು ಮಾಡಲಿದ್ದೇನೆ ಎಂದು ನನಗೆ ಅನಿಸಿತು” ಎಂದು ಕೊಹ್ಲಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಮೊಹಾಲಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 45 ರನ್ ಗಳಿಸಿದರು, ಜೊತೆಗೆ ಅವರ ಟೆಸ್ಟ್ ವೃತ್ತಿಜೀವನದ 8000 ರನ್‌ಗಳನ್ನು ಪೂರೈಸಿದರು. ಕಳೆದ ಎರಡೂವರೆ ವರ್ಷಗಳಿಂದ ವಿರಾಟ್ ಕೊಹ್ಲಿ ಅವರ ಬ್ಯಾಟ್ ನಿಂದ ಶತಕ ಹೊರಹೊಮ್ಮಿಲ್ಲ. ಈ ವಿಶೇಷ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಖಂಡಿತಾ ಶತಕದ ಬರ ಪೂರೈಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ 45 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು.

Share