Connect with us


      
ದೇಶ

ಗುಜರಾತ್;‌ ರಾಸಾಯನಿಕ ಅನಿಲ ಸೋರಿಕೆ ಐವರು ಸಾವು

UNI Kannada

Published

on

ಅಹಮದಾಬಾದ್‌, ಗುಜರಾತ್‌ ಜ 6 (ಯುಎನ್‌ ಐ) – ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಅನಿಲ ತುಂಬಿದ್ದ ಟ್ಯಾಂಕರ್ ಸೋರಿಕೆಯಾಗಿದ್ದು, ಇದರಿಂದ ಐವರು ಉಸಿರು ಕಟ್ಟಿ ಸಾವನ್ನಪ್ಪಿದ್ದು, 20 ಮಂದಿ ಅಸ್ವಸ್ಥಗೊಂಡಿರುವ ಘಟನೆ ಸೂರತ್‌ ನಲ್ಲಿ ನಡೆದಿದೆ.

ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿ ಐ ಡಿ ಸಿ ಯ ರಾಜ ಕಮಲ್ ಚಿಕ್ಕಡಿ ಪ್ಲಾಟ್ ನಂ.362ರ ಹೊರಗೆ ನಿಂತಿದ್ದ ರಾಸಾಯನಿಕ ಅನಿಲ ಟ್ಯಾಂಕರ್‌ ಸಮೀಪದಲ್ಲಿಯೇ ಎಲ್ಲ ಕಾರ್ಮಿಕರು ಮಲಗಿದ್ದರು. ಏಕಾಏಕಿ ಟ್ಯಾಂಕರ್​ ​ನಿಂದ ಅನಿಲ ಸೋರಿಕೆಯಾಗಿದ್ದು, ಇದರಿಂದ ಮಲಗಿದ್ದ ಕಾರ್ಮಿಕರು ಹಾಗೂ ಸಮೀಪದ ಕಾರ್ಖಾನೆಯ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Share