Connect with us


      




ಅಪರಾಧ

ಅಪ್ರಾಪ್ತೆಯರ ಮೇಲೆ ಅತ್ಯಾಚಾರ: ಆರೋಪಿಯನ್ನು ಬಂಧಿಸಿದ ಪೊಲೀಸರು

Bindushree Hosuru

Published

on

ಗಾಂಧಿನಗರ: ನ. 8 (ಯುಎನ್ಐ) ಮೂರರಿಂದ ಏಳು ವರ್ಷದೊಳಗಿನ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 26 ವರ್ಷದ ಕಾರ್ಮಿಕನನ್ನು ಗುಜರಾತ್‌ನ ಗಾಂಧಿನಗರ ಜಿಲ್ಲಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹತ್ತು ದಿನದಲ್ಲಿ ಅವರಲ್ಲಿ ಒಬ್ಬಳನ್ನು ಆರೋಪಿ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಆರೋಪಿ ವಿಜಯ್ ಠಾಕೂರ್ ಕೊಂದಿರುವ ಮೂರು ವರ್ಷದ ಬಾಲಕಿಯನ್ನು ಕೊಂದ ನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಆತ ಆಕೆಯ ಶವವನ್ನು ಮೋರಿಗೆ ಎಸೆದಿದ್ದಾನೆ ಎಂದು ಪೊಲೀಸ್ ಮಹಾನಿರೀಕ್ಷಕ ಅಭಯ್ ಚುಡಾಸಮಾ ತಿಳಿಸಿದ್ದಾರೆ.

ಆರೋಪಿಯು ಮದುವೆಯಾಗಿದ್ದು, ಮಗಳೂ ಕೂಡ ಇದ್ದಾಳೆ. ಆತನಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟವಿತ್ತು. ಇದರಿಂದ ಈ ರೀತಿಯ ವಿಕೃತ ಮನಸ್ಥಿತಿ ಬಂದಿದೆ. ಇದುವರೆಗೆ 3, 5 ಮತ್ತು 7 ವರ್ಷದ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಒಬ್ಬಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನವೆಂಬರ್ 11 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಐಜಿಪಿ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನವೆಂಬರ್ 4 ರಂದು ಅಪರಿಚಿತ ವ್ಯಕ್ತಿಯೊಬ್ಬ ನನ್ನ ಐದು ವರ್ಷದ ಮಗಳನ್ನು ಅಪಹರಿಸಿ, ಅದೇ ದಿನ ಏಕಾಂತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಆರೋಪಿಸಿ ಗಾಂಧಿನಗರ ಜಿಲ್ಲೆಯ ಸಂತೇಜ್ ಪೊಲೀಸರು ರಾಂಚರ್ಡಾ ಗ್ರಾಮದ ಬಳಿ ವಾಸಿಸುವ ಮಹಿಳೆ ಇಂದ ದೂರು ಸ್ವೀಕರಿಸಿದ್ದರು.

ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ.
ಎರಡು ದಿನಗಳ ನಂತರ, ಸಂತೇಜ್ ಪೊಲೀಸರಿಗೆ ಮತ್ತೊಂದು ದೂರು ಬಂದಿದ್ದು, ನವೆಂಬರ್ 5 ರಂದು ರಾತ್ರಿ ಖತ್ರಾಜ್ ಕ್ರಾಸ್‌ರೋಡ್ ಬಳಿಯ ತಾತ್ಕಾಲಿಕ ಗುಡಿಸಲುಗಳಿಂದ 3 ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಹೇಳಿದ್ದಾರೆ.

ಐದು ವರ್ಷದ ಬಾಲಕಿ ಹಾಗೂ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಐಜಿಪಿ ತಿಳಿಸಿದ್ದಾರೆ.

ಮೂರು ವರ್ಷದ ಬಾಲಕಿ ಹೆಚ್ಚು ಕೂಗುತ್ತಿದ್ದ ಕಾರಣ ಠಾಕೂರ್ ಆಕೆಯನ್ನು ಕೊಂದು ನಂತರ ಆಕೆಯ ದೇಹವನ್ನು ಮೋರಿಯಲ್ಲಿ ಎಸೆಯುವ ಮೊದಲು ಅತ್ಯಾಚಾರವೆಸಗಿದ್ದಾನೆ ಎಂದು ಅವರು ಹೇಳಿದರು. ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಯು ಐದು ವರ್ಷದ ಸಂತ್ರಸ್ತೆಗೆ ಹೊಸ ಬಟ್ಟೆ ಖರೀದಿಸುವುದಾಗಿ ಆಮಿಷವೊಡ್ಡಿದ್ದ ಎಂದು ಚುಡಾಸಮಾ ಹೇಳಿದ್ದಾರೆ. ಎರಡನೇ ಪ್ರಕರಣದಲ್ಲಿ, ರಾತ್ರಿ ಎಲ್ಲರೂ ಮಲಗಿದ್ದಾಗ ಠಾಕೂರ್ ಮೂರು ವರ್ಷದ ಬಾಲಕಿ ಇದ್ದ ಗುಡಿಸಲನ್ನು ಪ್ರವೇಶಿಸಿ ಅವಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಅವರು ಹೇಳಿದರು.

Share