Connect with us


      
ದೇಶ

ಗುಜರಾತ್ ಕರಾವಳಿಯಲ್ಲಿ ಪಾಕ್‌ ಬೋಟ್ ವಶ

UNI Kannada

Published

on

ಅಹಮದಾಬಾದ್, ಜ 10(ಯುಎನ್‌ ಐ) – ಗುಜರಾತ್ ಸಮೀಪ ಅರಬ್ಬಿ ಸಮುದ್ರದಲ್ಲಿ ಭಾರತದ ಜಲ ಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ದೋಣಿ ಹಾಗೂ ಅದರಲ್ಲಿದ್ದ 10 ಮಂದಿ ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ವಶಕ್ಕೆ ಪಡೆದುಕೊಂಡಿದೆ. ಶನಿವಾರ ಮಧ್ಯರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಪಾಕಿಸ್ತಾನಕ್ಕೆ ಸೇರಿದ ಯಾಸೀನ್ ಹೆಸರಿನ ದೋಣಿ ಭಾರತದ ಜಲಗಡಿದಾಟಿ 11 ಕಿಲೋಮೀಟರ್ ದೂರ ಅತಿಕ್ರಮವಾಗಿ ಪ್ರವೇಶಿಸಿರುವುದನ್ನು ಐಸಿಜಿ ಪತ್ತೆ ಮಾಡಿದೆ.

ಕೂಡಲೇ ದೋಣಿಯಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದೆ. ಆದರೆ ಸರಿಯಾದ ಉತ್ತರ ನೀಡದೆ, ಅವರು ಪಾಕ್ ಜಲ ಪ್ರದೇಶಕ್ಕೆ ಪರಾರಿಯಾಗಲು ಪ್ರಯತ್ನಿಸಿದರು. ಕೂಡಲೇ ಜಾಗೃತಗೊಂಡು ದೋಣಿಯನ್ನು ತಡೆದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಐಸಿಜಿ ತಿಳಿಸಿದೆ. ಪಾಕಿಸ್ತಾನದ ಕಟಿಬಂದರ್‌ನಲ್ಲಿ ನೋಂದಾಯಿಸಲಾದ ದೋಣಿಯಿಂದ 2,000 ಕೆ ಜಿ ಮೀನು, 600 ಲೀಟರ್ ಡೀಸೆಲ್ ವಶಪಡಿಸಿಕೊಳ್ಳಲಾಗಿದೆ ಪೋರಬಂದರ್ ನಲ್ಲಿ ದೋಣಿ ನಿಲ್ಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Share