Connect with us


      




ನ್ಯಾಯಾಲಯ

ಜ್ಞಾನವಾಪಿ ಮಸೀದಿ; ಮೂರನೇ ದಿನಕ್ಕೆ ಸರ್ವೇ

Kumara Raitha

Published

on

ವಾರಣಾಸಿ: ಮೇ ೧೬(ಯು.ಎನ್.‌ಐ.) ಕಾಶಿ ವಿಶ್ವನಾಥ ದೇಗುಲದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ಕಾರ್ಯ ಮೂರನೇ ದಿನಕ್ಕೆ ಅಡಿಯಿರಿಸಿದೆ.

ನ್ಯಾಯಾಲಯದ ಆದೇಶದ ಅನ್ವಯ ನಡೆಯುತ್ತಿರುವ ವಿಡಿಯೋ ಸಹಿತ ಸಮೀಕ್ಷೆ ಕಾರ್ಯಕ್ಕೆ ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಈಗಾಗಲೇ ಸಂಕೀರ್ಣದ ಶೇಕಡ ೬೫ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. ಭಾನುವಾರವೂ ಸಮೀಕ್ಷೆ ಕಾರ್ಯ ನಡೆದಿದೆ. ಇಂದು ಬೆಳಗ್ಗೆ ಎಂಟು ಗಂಟೆಯಿಂದಲೇ ಕೆಲಸ ಶುರುವಾಗಿದೆ.

ಸಂಬಂಧಿಸಿದ ಎಲ್ಲ ಪಕ್ಷಗಳು ಸಮೀಕ್ಷಾ ಕಾರ್ಯದ ಸಂದರ್ಭ ಹಾಜರಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಮಸೀದಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದು ಸಮೀಕ್ಷಾ ಕಾರ್ಯಕ್ಕೆ ಅಗತ್ಯವಾದ ಸಹಕಾರ ನೀಡುತ್ತಿದ್ದಾರೆ. ನೆಲಮಾಳಿಗೆಯ  ಕೊಠಡಿಗಳ ಬೀಗ ತೆರೆದು  ಸಮೀಕ್ಷೆಗೆ ಅನುವು ಮಾಡಿಕೊಟ್ಟಿದ್ದಾರೆ.

ನ್ಯಾಯಾಲಯದಿಂದ ನೇಮಕಗೊಂಡ ಮೂವರು ಅಡ್ವೊಕೇಟ್ ಕಮಿಷನರ್‌ಗಳು, ಎರಡು ಕಡೆಯಿಂದ ತಲಾ ಐವರು ವಕೀಲರು ಮತ್ತು ವೀಡಿಯೋಗ್ರಫಿ ತಂಡದ ಜೊತೆಗೆ ಸಹಾಯಕರು ಸಮೀಕ್ಷೆ ನಡೆಸುತ್ತಿದ್ದಾರೆ.

ಕಳೆದ ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ಯಥಾಸ್ಥಿತಿಯ ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿದೆ. ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ವಿರುದ್ಧ ಮುಸ್ಲಿಂ ಪಕ್ಷದ ಮನವಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿದೆ ಎಂಬುದನ್ನು ಸ್ಮರಿಸಬಹುದು

Share