Published
6 days agoon
ವಾರಣಾಸಿ: ಮೇ ೧೪ (ಯು.ಎನ್.ಐ.) ಇಲ್ಲಿನ ವಿವಾದಿತ ಜ್ಞಾನವಾಪಿ ಮಸೀದಿಯ ಸಮೀಕ್ಷಾ ಕಾರ್ಯ ಮುಂದುವರಿದಿದೆ. ಇದುವರೆಗೂ ಇಲ್ಲಿನ ಎರಡು ನೆಲಮಾಳಿಗೆಗಳ ಸಮೀಕ್ಷೆ ಪೂರ್ಣಗೊಂಡಿದೆ.
ನ್ಯಾಯಾಲಯ ಸೂಚಿಸಿದ ಸಮೀಕ್ಷಾ ಸಮಿತಿ ತನ್ನ ಕಾರ್ಯ ಮುಂದುವರಿಸಲು ಮಸೀದಿ ಸಮಿತಿ ಸಹಕಾರ ನೀಡಿದೆ. ಇಂದು ಬೆಳಿಗ್ಗೆ ಸಮೀಕ್ಷೆ ಆರಂಭಿಸಿದ ಸಮಿತಿಜ್ಞಾನವಾಪಿ-ಗೌರಿ ಶೃಂಗಾರ್ ಸಂಕೀರ್ಣದಲ್ಲಿ ಎರಡು ನೆಲಮಾಳಿಗೆಗಳ ವಿಡಿಯೋ ಚಿತ್ರೀಕರಣ ಮಾಡಿದೆ.
ನೆಲಮಾಳಿಗೆಯಲ್ಲಿರುವ ಮೂರು ಕೊಠಡಿಗಳು ಮುಸ್ಲಿಮರ ಪಾಲಿಗೆ ಸೇರಿದ್ದು, ಅವುಗಳಿಗೆ ಬೀಗ ಹಾಕಲಾಗಿತ್ತು. ಮಸೀದಿ ಆಡಳಿತ ಸಮಿತಿಯವರು ಮುಚ್ಚಿದ ಕೊಠಡಿಗಳನ್ನು ತೆರೆದು ಸಮೀಕ್ಷೆಯನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟರು. ನಾಲ್ಕನೇ ಕೊಠಡಿ ಹಿಂದೂಗಳ ಪಾಲಿಗೆ ಸೇರಿದ್ದು, ಬಾಗಿಲು ಇಲ್ಲದ ಕಾರಣ ಅಡೆತಡೆಯಿಲ್ಲದೆ ಸರ್ವೆ ನಡೆದಿದೆ.
ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮಸೀದಿಯ ಸಮೀಪದ ಮಾರ್ಗಗಳಲ್ಲಿ ಬ್ಯಾರಿಕೇಡ್ಗಳನ್ನು ಇಡಲಾಗಿದೆ.
ಜ್ಞಾನವಾಪಿ ಮಸೀದಿ ಸಮೀಕ್ಷೆ; ಕೊಳದಲ್ಲಿ ಶಿವಲಿಂಗ ಪತ್ತೆ: ವಕೀಲರ ಹೇಳಿಕೆ
ಜ್ಞಾನವಾಪಿ ಮಸೀದಿ; ಮೂರನೇ ದಿನಕ್ಕೆ ಸರ್ವೇ
ಜ್ಞಾನವಾಪಿ ಶೃಂಗಾರ್ ಗೌರಿ ಸಂಕೀರ್ಣ ಸಮೀಕ್ಷೆ ತಡೆಗೆ ಸುಪ್ರೀಂ ನಿರಾಕರಣೆ
ತಾಜ್ಮಹಲ್ ಕೊಠಡಿ ಸಮೀಕ್ಷೆ; ಅರ್ಜಿ ತಿರಸ್ಕರಿಸಿದ ಕೋರ್ಟ್
ಜ್ಞಾನವಾಪಿ ಮಸೀದಿ ; ಮೇ ೧೭ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ: ನ್ಯಾಯಾಲಯ
ವೈವಾಹಿಕ ಅತ್ಯಾಚಾರ; ನ್ಯಾಯಮೂರ್ತಿಗಳ ಭಿನ್ನ ನಿಲುವು