Published
7 months agoon
By
prathamಬೆಂಗಳೂರು: ಅಕ್ಟೋಬರ್ 29 (ಯು.ಎನ್.ಐ.) ಖ್ಯಾತನಟ ಪುನೀತ್ ರಾಜ್ ಕುಮಾರ್ ಅವರಿಗೆ ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದೆ. ಆದರೂ ಅವರು ಬೆಳಗ್ಗೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದ್ದಾರೆ. ಅರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಾಗಲೂ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ್ದೇ ತಪ್ಪಾಯ್ತಾ ? ಇದೊಂದು ಪ್ರಶ್ನೆ ಉದ್ಬವಿಸಿದೆ.
ಪುನೀತ್ ರಾಜ್ ಕುಮಾರ್ ಮನೆಯಲ್ಲಿಯಲಿರಲಿ, ಶೂಟಿಂಗ್ ನಲ್ಲಿರಲಿ, ಪ್ರವಾಸದಲ್ಲಿರಲಿ ಎಂದಿಗೂ ವ್ಯಾಯಾಮವನ್ನು ತಪ್ಇಸುತ್ತಿರಲಿಲ್ಲ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜಿಮ್ ಗಳು ಬಾಗಿಲು ಹಾಕಿದ್ದರೂ ಕೂಡ ಮನೆಯಲ್ಲಿಯೇ ಇರುವ ಸುಸಜ್ಜಿತ ವ್ಯಾಯಾಮಶಾಲೆಯಲ್ಲಿ ಅವರು ವರ್ಕ್ ಔಟ್ ಮಾಡುತ್ತಿದ್ದರು.
ಅವರು ಸಮರಕಲೆಗಳನ್ನು ಕಲಿತವರು. ಇದರಿಂದಾಗಿ ಅವರ ಆರೋಗ್ಯ, ಮೈಕಟ್ಟು ಅತ್ಯುತ್ತಮವಾಗಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದರು. ಇದರ ಗುಟ್ಟು ಅವರು ನಿತ್ಯ ಅನುಸರಿಸುತ್ತಿದ್ದ ವ್ಯಾಯಾಮಶೈಲಿಯೇ ಕಾರಣವಾಗಿತ್ತು. ಇವರು ವ್ಯಾಯಾಮ ಮಾಡುತ್ತಿರುವ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಎಂಥವರಿಗೂ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಸಂದರ್ಭ. ಇಂಥ ಸನ್ನಿವೇಶದಲ್ಲಿ ಮುಂಜಾಗ್ರತೆ ಅಗತ್ಯ. ಪುನೀತ್ ಅವರು ಆರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಾಗ ಜಿಮ್ ಗೆ ಹೋಗಬಾರದಾಗಿತ್ತು. ಇಂಥ ಸಂದರ್ಭದಲ್ಲಿ ತೀವ್ರ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ಮತ್ತಷ್ಟೂ ಒತ್ತಡ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಕೂಡ ಹೃದಯಾಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
UNI, KR