Connect with us


      




ಕರ್ನಾಟಕ

ಆಡಳಿತ, ರಾಜಕಾರಣ ಜನಪರವಿದ್ದರೆ ಪ್ರಜಾಪ್ರಭುತ್ವ ಯಶಸ್ವಿ: ಸಿಎಂ ಬೊಮ್ಮಾಯಿ

Kumara Raitha

Published

on

ಬೆಂಗಳೂರು: ಮೇ ೧೩ (ಯು.ಎನ್.‌ಐ.) ಆಡಳಿತ, ರಾಜಕಾರಣ ಜನಪರವಿದ್ದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಎಸ್.‌ ಬೊಮ್ಮಾಯಿ ಪ್ರತಿಪಾದಿಸಿದರು.

ಅವರಿಂದು ವಿಧಾನಸೌಧದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಲೋ ಕಂದಾಯ ಸಚಿವರೆ ( ೭೨ ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ) ಸಹಾಯ ವಾಣಿಯನ್ನು ಲೋಕಾರ್ಪಣೆ ಮಾಡಿ, ಮಾತನಾಡಿದರು. ಎರಡು ರೀತಿಯ ರಾಜಕಾರಣ ಇರುತ್ತದೆ. ಒಂದು ಪೀಪಲ್ಸ್ ಪೊಲಿಟಿಕ್ಸ್ ಇನ್ನೊಂದು ಪವರ್ ಪೊಲಿಟಿಕ್ಸ್.  ಜಜನರ ಸಮಸ್ಯೆಗಳಿಗೆ ಸ್ಪಂದಿಸಿದವರನ್ನು ಜನರು ನೆನಪಿಡುತ್ತಾರೆ. ನಾವು ಬಿಸಲರಿ ನೀರು ಕುಡಿದು ಜನರ ಕುಡಿಯುವ ನೀರಿನ ಬಗ್ಗೆ ಚರ್ಚೆ ಮಾಡುತ್ತೇವೆ. ಎಸಿ ರೂಮಿನಲ್ಲಿ ಕುಳಿತು ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇವೆ. ನಿರಂತರ ಜನರ ಮಧ್ಯೆ ಇದ್ದರೆ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜನರನ್ನು ಮನದಲ್ಲಿ ಇಟ್ಟುಕೊಂಡು ಆಡಳಿತ ಮಾಡಿದರೆ ಜನರ ಮನಸ್ಸು ಮುಟ್ಟಲು ಸಾಧ್ಯ. ಪಿಂಚಣಿ ವ್ಯವಸ್ಥೆ ಸರಿ ಇದ್ದಿದ್ದರೆ ಈಗ ಬದಲಾವಣೆ ಮಾಡುವ ಅಗತ್ಯ ಇರಲಿಲ್ಲ. ಈಗ ಕಂದಾಯ ಇಲಾಖೆಯಲ್ಲಿ ಬದಲಾವಣೆ ತಂದು ಜನರ ಮನೆ ಬಾಗಿಲಿಗೆ ತಲುಪುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಜನಪರ ಸರ್ಕಾರ ಎಂದು ಕರೆಯುತ್ತೇವೆ. ನಾನು ಅಧಿಕಾರಕ್ಕೆ ಬಂದು ರೈತರಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ. ಇನ್ನೊಂದು ಅಸಹಾಯಕರಿಗೆ 200. ರೂ. ಮಾಸಾಶನ ಹೆಚ್ಚಳ ಮಾಡಿದೆ ಎಂದು ವಿವರ ನೀಡಿದರು.
ಪುರುಷ ಪ್ರಧಾನ ಸಮಾಜ ಆ್ಯಸಿಡ್ ದಾಳಿ ಮಾಡಿರುವುದು ನಾವೆಲ್ಲ ತಲೆ ತಗ್ಗಿಸುವ ವಿಷಯ. ಅವರಿಗೆ 3000 ರದಿಂದ
10000 ಕ್ಕೆ ಹೆಚ್ಚಳ ಮಾಡಿದ್ದೇನೆ. ಆಸಿಡ್ ದಾಳಿಗೊಳಗಾದ ಎಲ್ಲರಿಗೂ ಮನೆ ಕಟ್ಟಿಸಿಕೊಡಲು ಆದೇಶ ಹೊರಡಿಸಲಾಗುವುದು. ಅಲ್ಲದೇ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಸ್ವ ಉದ್ಯೋಗ ಕಂಡುಕೊಳ್ಳಲು 5 ಲಕ್ಷ ಸಹಾಯಧನ ನೀಡಲು ತೀರ್ಮಾನಿಸಲಾಗುವುದು ಎಂದರು.
ಉಚಿತ ಡಯಾಲಿಸಿಸ್, ಕಿಮೊ ಥೆರಪಿ, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ನೀಡಲು ತೀರ್ಮಾನ ಮಾಡಿದ್ದೇವೆ. ಇದು ಮಾನವೀಯತೆ ಇರುವ ಸರ್ಕಾರ. ಜನರಿಗೆ ನಮ್ಮ ಬಗ್ಗೆ ವಿಶ್ವಾಸ ಮೂಡುವಂತೆ ಮಾಡುತ್ತದೆ. ಆಡಳಿತ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಆತ್ಮಶುದ್ದಿಯಿಂದ ಆಡಳಿತ ಮುಂದುವರೆಸುತ್ತೇವೆ ಎಂದರು.

ಪ್ರತಿ ವರ್ಷ 10 ಸಾವಿರ ಕೋಟಿ ಪಿಂಚಣಿ ನೀಡುತ್ತೇವೆ. 72 ಲಕ್ಷ ಜನರಿಗೆ ಪಿಂಚಣಿ ನೀಡಲಾಗುತ್ತಿದೆ. ಆದರೆ ನಿಜವಾದ ಅರ್ಹರಿಗೆ ಪಿಂಚಣಿ ಸಿಗುವಂತೆ ಮಾಡಲು ಹಲೋ ಕಂದಾಯ ಸಚಿವರೆ ಯೋಜನೆ ಜಾರಿಗೆ ತರಲಾಗಿದೆ. ಫಲಾನುಭವಿ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ದಾಖಲೆ, ಫೊನ್ ನಂಬರ್ ನೀಡಿದರೆ,ಗ್ರಾಮ ಲೆಕ್ಕಾಧಿಕಾರಿ ಅವರ ಮನೆಗೆ ಹೋಗಿ ಫೊಟೊ ತೆಗೆದು. ಅವರ ಮಾಹಿತಿ ಸಂಗ್ರಹಿಸಿ ಅಪ್ ಲೋಡ್ ಮಾಡುತ್ತಾರೆ.ನೇರ ಫಲಾನುಭವಿಗಳ ಅಕೌಂಟ್ ಗೆ ಹಣ ವರ್ಗಾವಣೆ ಆಗುತ್ತದೆ. ಮೊದಲು 100 ರೂ ಕಳುಹಿಸಿದರೆ 65 ರೂ ಅವರ ಮನೆಗೆ ಹೋಗುತ್ತಿತ್ತು. ಈಗ ಮೋದಿ, ಬೊಮ್ಮಾಯಿ ಅವರ ಅಧಿಕಾರದಲ್ಲಿ ಎಲ್ಲವೂ ಫಲಾನುಭವಿಗಳಿಗೆ ತಲುಪಲಿದೆ ಎಂದರು.
ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಕ್ರಮ ಮಾಡಿಕೊಡಲಾಗುತ್ತಿದೆ. ರೈತರ ಜಮೀನಿನ ದಾಖಲೆಯನ್ನು ಆ್ಯಪ್ ಮೂಲಕ ಅಪ್ ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ಪರಿಹಾರವಾಗಿ 1270 ಕೋಟಿ ರೂ. ಪರಿಹಾರ ನೀಡಲಾಗಿದೆ. ಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತಿದ್ದೇವೆ. ಡೀಮ್ಡ್ ಫಾರೆಸ್ಟ್ ಉಳುಮೆ ಮಾಡುತ್ತಿರುವ ರೈತರಿಗೆಭೂಮಿ  ನೀಡಲು  ತೀರ್ಮಾನ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಂದಾಯ ಅಚಿವ ಆರ್.‌ ಅಶೋಕ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share