Published
5 months agoon
By
Vanitha Jainಹೈದರಾಬಾದ್, ಡಿಸೆಂಬರ್ 14(ಯು.ಎನ್.ಐ) ತೆಲುಗು ನಟ ರಾಣಾ ದಗ್ಗುಬಾಟಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದು, ಟಾಲಿವುಡ್ ಕಾಲಿವುಡ್ ಸೇರಿದಂತೆ ನಟ ನಟಿಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಬಾಹುಬಲಿಯ ಬಲ್ಲಳದೇವನಾಗಿ ಕಾಣಿಸಿಕೊಂಡಿದ್ದ ರಾಣಾ ಗದ್ದುಬಾಟಿ ವಿರಾಟ ಪರ್ವಂ, ಅರಣ್ಯ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತಮ್ಮ ನಟನೆಯನ್ನು ಮತ್ತೊಮ್ಮೆ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ.
ಕಾಲಿವುಡ್, ಬಾಲಿವುಡ್ನಲ್ಲಿಯೂ ಮಿಂಚುತ್ತಿರುವ ದಗ್ಗುಬಾಟಿ ಅವರ ಬಾಲಿವುಡ್ ಸಿನಿಮಾ ದಮ್ ಮಾರೋ ದಮ್ ದಲ್ಲಿನ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲೀಡರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ದಗ್ಗುಬಾಟಿ ತದನಂತರ ನೇನೆ ರಾಜು ನೇನೆ ಮಂತ್ರಿ, ಕೃಷ್ಣಂ ವಂದೇ ಜಗದ್ಗುರುಂ ಹೀಗೆ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಾಹುಬಲಿಯ ಬಲ್ಲಳದೇವನ ಪಾತ್ರ ಮಾತ್ರ ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿತು.