Connect with us


      




ಕ್ರೀಡೆ

ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಮಗಳು ವಮಿಕಾಗೆ ಮೊದಲನೇ ವರ್ಷದ ಹುಟ್ಟುಹಬ್ಬ

Vanitha Jain

Published

on

ಮುಂಬೈ: ಜನೆವರಿ 11 (ಯು.ಎನ್.ಐ.) ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕಟಿಗ ವಿರಾಟ್ ಕೊಹ್ಲಿ ದಂಪತಿ ಮಗಳು ವಮಿಕಾ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ.

ಹುಟ್ಟುಹಬ್ಬದ ಸಂತಸದಲ್ಲಿರುವ ವಮಿಕಾಳ ಮುಖ ತೋರುವ ಫೋಟೋವನ್ನು ಅನುಷ್ಕಾ ಆಗಲಿ ಮತ್ತು ವಿರಾಟ್ ಆಗಲಿ ಇದುವರೆಗೂ ಎಲ್ಲಿಯೂ ಹಂಚಿಕೊಂಡಿಲ್ಲ.

ಈ ಹಿಂದೆ ತಮ್ಮ ಮಗಳ ಫೋಟೋವನ್ನು ಕ್ಲಿಕಿಸದಂತೆ ಫೋಟೋಗ್ರಾಫರ್‍ಗಳಲ್ಲಿ ಇವರಿಬ್ಬರು ವಿನಂತಿಸಿಕೊಂಡಿರ್ದರು. ಆದರೆ ಕೊಹ್ಲಿ ಮತ್ತು ಅನುಷ್ಕಾ ಮಗಳ ಜೊತೆಗಿನ ತುಂಟಾಟದ, ತಬ್ಬಿರುವ, ಮುತ್ತಿಕ್ಕುತ್ತಿರುವ ಹೀಗೆ ವಿಧವಿಧದ ಫೋಟೋಗಳನ್ನು ಹಂಚಿಕೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಹ್ಯಾಪಿಬರ್ತಡೇವಮಿಕಾ ಎಂಬ ಹ್ಯಾಶ್ ಟ್ಯಾಗ್ ಅಡಿ ಮಗುವಿನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಹೊಸ ವರ್ಷದ ವೇಳೆ ಅನುಷ್ಕಾ ಹಂಚಿಕೊಂಡಿದ್ದ ಒಂದು ವಿಡಿಯೋದಲ್ಲಿ ವಮಿಕಾ ಮಮ್ಮ ಎಂದು ಹೇಳಿರುವುದು ಕೇಳುತ್ತಿತ್ತು. ಈ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Share