Connect with us


      




ಕ್ರೀಡೆ

ಹಾರ್ದಿಕ್ ಪಾಂಡ್ಯ ಅಜ್ಜಿಯನ್ನು ಬಿಡದ “ಪುಷ್ಪ” ಪ್ರಭಾವ !

UNI Kannada

Published

on

ಜನೆವರಿ 26 (ಯು.ಎನ್.ಐ.) ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ “ಪುಷ್ಪ” ಸಿನಿಮಾ ಜಗತ್ತನ್ನು ಮಾತ್ರವಲ್ಲದೆ ಇಡೀ ಪ್ರಪಂಚದಲ್ಲೇ ತನ್ನ ಹವಾ ಎಬ್ಬಿಸಿದೆ. ಸಿನಿಮಾ ತಾರೆಯರು, ಸೆಲೆಬ್ರಿಟಿಗಳು, ದೇಶ-ವಿದೇಶದ ಸಾಮಾನ್ಯ ಜನರಿಂದ ಸ್ಟಾರ್ ಕ್ರಿಕೆಟಿಗರು ಬಹುತೇಕ ಎಲ್ಲರಿಗೂ ಈಗ ಪುಷ್ಪ ಪ್ರಭಾವ ಶುರುವಾಗಿದೆ. ಈ ಸಿನಿಮಾದ ಹಾಡು, ಡೈಲಾಗ್ , ಡ್ಯಾನ್ಸ್ ಗಳಿಗೆ ಅಡಿಕ್ಟ್ ಆಗಿರುವವರು ಸಂದರ್ಭವನ್ನು ಲೆಕ್ಕಿಸದೆ, ಎಲ್ಲೆಂದರಲ್ಲಿ ತಮ್ಮ ಪ್ರತಿಭೆಗೆ ಕೆಲಸ ನೀಡಿ ಮಜಾ ಮಾಡುತ್ತಿದ್ದಾರೆ.

ಇಷ್ಟಕ್ಕೇ ನಿಲ್ಲದೆ ತಮ್ಮ ಡ್ಯಾನ್ಸ್, ಡೈಲಾಗ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಜ್ಜಿಯೊಬ್ಬಳು ತಾನೂ  ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಅಜ್ಜಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಜ್ಜಿ.  ವಯಸ್ಸು ಸಹಕರಿಸದಿದ್ದರೂ ತುಂಬಾ ಉತ್ಸಾಹದಿಂದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರ ಪಕ್ಕದಲ್ಲಿ ಹಾರ್ದಿಕ್ ಪಾಂಡ್ಯ ಇದ್ದರು. “ಅವರ್ ಓನ್ ಪುಷ್ಪಾ ನಾನಿ” ಎಂದು ಹಾರ್ದಿಕ್ ಪೋಸ್ಟ್‌ಗೆ ಶೀರ್ಷಿಕೆ ಸೇರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜ್ಜಿ ಡ್ಯಾನ್ಸ್ ಗೆ ನೆಟಿಜನ್ ಗಳು ಫಿದಾ ಆಗಿದ್ದಾರೆ.

https://www.instagram.com/reel/CZL7EjEl2cL/?utm_source=ig_web_copy_link

Share