Connect with us


      
ಸಾಮಾನ್ಯ

ರಣಜಿ ಟ್ರೋಫಿಯಿಂದ ಹಿಂದೆ ಸರಿದ ಹಾರ್ದಿಕ್ ಪಾಂಡ್ಯ 

UNI Kannada

Published

on

ಅಹಮದಾಬಾದ್ : ಫೆಬ್ರವರಿ 08 (ಯು.ಎನ್.ಐ.) ಇನ್ನೆರಡು ದಿನಗಳಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿಯಿಂದ ಬರೋಡಾ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ನತ್ತ ಗಮನ ಹರಿಸಿರುವ ಹಾರ್ದಿಕ್ ತಂಡಕ್ಕೆ ಮರಳುವ ಭರವಸೆಯಲ್ಲಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆ ಹಾರ್ದಿಕ್ ಪಾಂಡ್ಯ ರಣಜಿ ಟ್ರೋಫಿಯಲ್ಲಿ ಆಡಲಿದ್ದಾರೆ ಎಂದು ಘೋಷಿಸಿದ್ದರು.

ಆಲ್ ರೌಂಡರ್ ಕೋಟಾದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಬೆನ್ನುಮೂಳೆಯ ಗಾಯದಿಂದಾಗಿ ಬೌಲಿಂಗ್‍ನಿಂದ ಹಿಂದೆ ಸರಿದಿದ್ದರು. ಕೇವಲ ಬ್ಯಾಟಿಂಗ್‍ನತ್ತ ಗಮನಹರಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಆಡದೇ ತಂಡದಿಂದ ಹೊರಗುಳಿಯುವಂತಾಗಿತ್ತು.

 ಈ ಹಿನ್ನೆಲೆಯಲ್ಲಿ ಹಾರ್ದಿಕ್ ಮತ್ತೆ ಬೌಲಿಂಗ್‍ನತ್ತ ಗಮನ ಹರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಹಾರ್ದಿಕ್ ಬದಲಿಗೆ ವೆಂಕಟೇಶ್ ಅಯ್ಯರ್‍ ನನ್ನ ಆಯ್ಕೆ ಮಾಡಲಾಗಿತ್ತು ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೆ ವಿಫಲವಾಗಿರುವುದು ಹಾರ್ದಿಕ್ ಗೆ ಮತ್ತೊಮ್ಮೆ ಹಾದಿ ಸುಗಮವಾಗಿದೆ,

ಮತ್ತೊಂದೆಡೆ, ಈ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿರುವ ಅಹಮದಾಬಾದ್ ಫ್ರಾಂಚೈಸಿಗೆ ಹಾರ್ದಿಕ್ ಪಾಂಡ್ಯ ನಾಯಕರಾಗಿರುತ್ತಾರೆ. ಇದೇ ತಿಂಗಳ 10ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಗೆ ಹಾರ್ದಿಕ್ ಪಾಂಡ್ಯ ಬದಲಿಗೆ ಕೇದಾರ್ ದೇವಧರ್ ಬರೋಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Share