Connect with us


      
ಕ್ರೀಡೆ

IPL 2022: ಶ್ರೇಯಸ್‌ಗೆ ಆಘಾತ.. ಹಾರ್ದಿಕ್ ಸೇರಿ ಮತ್ತಿಬ್ಬರ ಆಯ್ಕೆ ಮಾಡಿಕೊಂಡ ಅಹಮದಾಬಾದ್

UNI Kannada

Published

on

ನವದೆಹಲಿ, ಜ 18(ಯುಎನ್‌ ಐ) – ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿಯಾಗಿರುವ ಅಹಮದಾಬಾದ್‌, ತಾನು ಆಯ್ಕೆ ಮಾಡಿಕೊಂಡಿರುವ ಮೂವರು ಕ್ರಿಕೆಟಿಗರ ಹೆಸರನ್ನು ಬಿ ಸಿ ಸಿ ಐಗೆ ಸಲ್ಲಿಸಿದೆ. ಈಗಾಗಲೇ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿರುವ ಅಹಮದಾಬಾದ್, ಮೂರನೇ ಆಟಗಾರನಾಗಿ ಭಾರತದ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಸೇರಿಸಿಕೊಳ್ಳಲು ನಿರ್ಧರಿಸಿದೆ. ಮುಂಬೈ ಇಂಡಿಯನ್ಸ್‌ ಮಾಜಿ ಸದಸ್ಯ ಇಶಾನ್ ಕಿಶನ್ ಅವರನ್ನು ತೆಗೆದುಕೊಳ್ಳಲು ಅಹಮದಾಬಾದ್‌ ಭಾರಿ ಪ್ರಯತ್ನದ ಹೊರತಾಗಿಯೂ ಇಶಾನ್ ಆಸಕ್ತಿ ತೋರದ ಕಾರಣ ಫ್ರಾಂಚೈಸಿ ಗಿಲ್ ಕಡೆಗೆ ವಾಲಿದೆ.

ಅಹಮದಾಬಾದ್‌ಗೆ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ರೂ. 15 ಕೋಟಿ … ಗಿಲ್‌ ಗೆ ರೂ 7 ಕೋಟಿ ಪಾವತಿದೆ ಎಂಬುದು ಮಾಹಿತಿ. ಪಂಜಾಬ್‌ನ 22 ವರ್ಷದ ಶುಭ್‌ಮಾನ್ ಗಿಲ್ ಭಾರತ ಪರ 10 ಟೆಸ್ಟ್ , 3 ಏಕದಿನ ಪಂದ್ಯಗಳನ್ನು ಆಡಿದ್ದರೂ, ಅಂತರರಾಷ್ಟ್ರೀಯ ಟಿ- 20ಗೆ ಇನ್ನೂ ಪಾದಾರ್ಪಣೆ ಮಾಡಿಲ್ಲ. 2018 ರಿಂದ 2021 ರವರೆಗೆ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಗಿಲ್ 58 ಪಂದ್ಯಗಳನ್ನು ಆಡಿದ್ದು, 10 ಅರ್ಧಶತಕ ಸೇರಿದಂತೆ ಒಟ್ಟು 1,417 ರನ್ ಗಳಿಸಿದ್ದಾರೆ.

Share