Connect with us


      




ಟಿ-20 ವಿಶ್ವಕಪ್; 90 ಕೆಜಿ ತೂಕದ ವ್ಯಕ್ತಿಗೆ ಡಿಕ್ಕಿ ಹೊಡೆದ ಪಾಂಡ್ಯ!

Iranna Anchatageri

Published

on

ಅಬುಧಾಬಿ, ನ 4 (ಯುಎನ್ಐ) ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪೆಟ್ಟು ತಿಂದಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ಶಹಜಾಜ್ ಗೆ ಹಾರ್ದಿಕ್ ಪಾಂಡ್ಯ ಡಿಕ್ಕಿ ಹೊಡೆದಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿನ್ನೆಯ ಪಂದ್ಯದ ವೇಳೆ, ನವೀನ್ ಉಲ್ ಹಕ್ ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಈ ವೇಳೆ ಫೀಲ್ಡಿಂಗ್ ನಲ್ಲಿದ್ದ ಅಫ್ಘಾನಿಸ್ತಾನದ ಆಟಗಾರ ನಜೀಬುಲ್ಲಾ, ಚೆಂಡನ್ನು ಕೈಚೆಲ್ಲಿದ್ರು. ಈ ವೇಳೆ ರನ್ ಗಳಿಸುವ ಭರದಲ್ಲಿದ್ದ ಪಾಂಡ್ಯ ವೇಗವಾಗಿ ಓಡಿ ಬಂದು 90 ಕೆಜಿ ತೂಕದ ವ್ಯಕ್ತಿಯಾಗಿರುವ ಮೊಹಮ್ಮದ್ ಶಹಜಾಜ್ ಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.
ಈ ಘಟನೆ ನಂತರ ಫಿಸಿಯೋ ಗ್ರೌಂಡ್ ಗೆ ಬಂದರು. ಅಲ್ಲದೆ, ಹಾರ್ದಿಕ್ ಪಾಂಡ್ಯಗೆ ಚಿಕಿತ್ಸೆ ನೀಡಿದ್ರು. ಇಬ್ಬರು ಆಟಗಾರರಿಗೆ ಹೆಚ್ಚೇನೂ ತೊಂದರೆಯಾಗಲಿಲ್ಲ. ನಂತರ ನಗು-ನಗುತಲೇ ಮತ್ತೆ ಪಂದ್ಯದಲ್ಲಿ ಇಬ್ಬರು ತಲ್ಲೀಣರಾದರು.

Continue Reading
Share