Connect with us


      
ದೇಶ

21‌ ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ

Vidyashree S

Published

on

ನವದೆಹಲಿ: ಇಸ್ರೇಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್‌ ಸಂಧು ಅವರು “ಭುವನ ಸುಂದರಿ 2021” ಆಗಿ ಆಯ್ಕೆಯಾಗಿದ್ದಾರೆ.
ಇಪ್ಪತ್ತೊಂದು ವರ್ಷದ ಹರ್ನಾಜ್‌ 21 ವರ್ಷಗಳ ಬಳಿಕ ಭಾರತಕ್ಕೆ ಈ ಕಿರೀಟವನ್ನು ತಂದುಕೊಟ್ಟಿದ್ದಾರೆ. 2000 ಇಸವಿಯಲ್ಲಿ ಲಾರಾ ದತ್ತಾ “ಮಿಸ್‌ ಯೂನಿವರ್ಸ್‌ʼ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

“ಮಿಸ್‌ ಯೂನಿವರ್ಸ್‌” ವೆಬ್‌ಸೈಟ್‌ ಪ್ರಕಾರ, ಹಿಂದಿನ ಭುವನ ಸುಂದರಿ ಮೆಕ್ಸಿಕೊದ ಆಂಡ್ರಿಯಾ ಮೆಜಾ ಅವರು ಹರ್ನಾಜ್‌ ಅವರಿಗೆ ಭುವನ ಸುಂದರಿ ಕಿರೀಟವನ್ನು ಹಸ್ತಾಂತರಿಸಿದರು.

ಹರ್ನಾಜ್‌ ಸಂಧು ಕುರಿತು: ರೂಪದರ್ಶಿ ಹರ್ನಾಜ್‌ ಚಂಡೀಗಡ ಮೂಲದವರು. ಹಲವು ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿರುವ ಅವರು, ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪಂಜಾಬಿ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ʼಟೈಮ್ಸ್‌ ಫ್ರೆಶ್‌ ಫೇಸ್‌ ಮಿಸ್‌ ಚಂಡೀಗಡ 2017ʼ, ʼಮಿಕ್ಸ್‌ ಮ್ಯಾಕ್ಸ್‌ ಎಮರ್ಜಿಂಗ್‌ ಸ್ಟಾರ್‌ ಇಂಡಿಯಾ 2018ʼ ಮತ್ತು ʼಫೆಮಿನಾ ಮಿಸ್‌ ಇಂಡಿಯಾ ಪಂಜಾಬ್‌ 2019ʼ ಗರಿಮೆಯೂ ಹರ್ನಾಜ್‌ ಬತ್ತಳಿಕೆಯಲ್ಲಿದೆ.

Share