Connect with us


      
ಕರ್ನಾಟಕ

ವಿಧಾನಸಭೆ: ಹಿಜಾಬ್ ವಿಷಯವನ್ನು ಎಚ್‌ಡಿಕೆ ಗುತ್ತಿಗೆ ಪಡೆದಿದ್ದಾರಾ?- ಜಮೀರ್ ಪ್ರಶ್ನೆ

Iranna Anchatageri

Published

on

ವಿಧಾನಸಭೆ/ಬೆಂಗಳೂರು: ಮಾರ್ಚ್ 14 (ಯು.ಎನ್.ಐ.) ರಾಜ್ಯದಲ್ಲಿ ಸಮವಸ್ತ್ರ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆ ಸಂಬಂಧ ಚರ್ಚೆಗೆ ವಿಧಾನಸಭೆಯಲ್ಲಿ ‌ನಿಲುವಳಿ ಸೂಚನೆಯನ್ನು ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದರು.

ರಾಜ್ಯದ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿರುವ ಘಟನೆಗಳು ನಡೆಯುತ್ತಿದೆ. ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಆಗುತ್ತಿದೆ. ಈ ನಿಟ್ಟಿನಲ್ಲಿ ನಿಲುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ  ಎಚ್ ಡಿಕೆ ಅವಕಾಶ ಕೋರಿದರು. ಕುಮಾರಸ್ವಾಮಿ ಅವರ ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ ಸಭಾಧ್ಯಕ್ಷ ಕಾಗೇರಿ, ನಿಯಮ 69 ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ. ಇಂದು ಬಜೆಟ್ ಮೇಲೆ ಚರ್ಚೆ ನಡೆಯುತ್ತಿರುವುದರಿಂದ ನಾಳೆ ನಾಡಿದ್ದು ಸಮಯ ನೋಡಿ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದರು.

ಇದೇ ವೇಳೆ ಎಚ್ ಡಿ ಕೆ ನಿಲುವಳಿ ಸೂಚನೆಗೆ ಜಮೀರ್ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಸಾರ್ವಜನಿಕ ಮಹತ್ವದ ವಿಚಾರ. ಇದನ್ನು ಶೂನ್ಯವೇಳೆಯಲ್ಲಿ ಯಾಕೆ ತರ್ತಿದಾರೆ.. ಹಿಜಾಬ್ ವಿಷಯವನ್ನು ಎಚ್ಡಿಕೆ ಗುತ್ತಿಗೆ ಪಡೆದಿದ್ದಾರಾ? ಕುಮಾರಸ್ವಾಮಿ ಅವರಿಗೆ ಇದ್ದಕಿದ್ದ ಹಾಗೆ ಹಿಜಾಬ್ ಯಾಕೆ ನೆನಪಾಯ್ತು? ಇವತ್ತು ಯಾಕೆ ಏಕಾಏಕಿ ಈ ವಿಚಾರ ಚರ್ಚೆ ಮಾಡ್ತಿದಾರೆ ಎಂದು ಎಚ್ ಡಿಕೆ ವಿರುದ್ಧ ಶಾಸಕ ಜಮೀರ್ ಅಹ್ಮದ್ ಕಟುಕಿದರು.

ಜಂಟಿ ಅಧಿವೇಶನದಲ್ಲೇ ಇದರ ಬಗ್ಗೆ ಚರ್ಚೆ ಮಾಡಲು ಮುಂದಾಗಿದ್ವಿ. ಆದ್ರೆ ಅಧಿಕೃತ ವಿರೋಧ ಪಕ್ಷಕ್ಕೆ ಅವಕಾಶ ಮಾಡಿಕೊಡಲು ಆಗ ನಮ್ಮ ನಿಲುವಳಿಗೆ ಸ್ಪೀಕರ್ ತಡೆ ಕೊಟ್ಟಿದ್ರು. ಇತ್ತೀಚೆಗೆ ಕೆಲವ ಧಾರ್ಮಿಕ ಮುಖಂಡರು ನನ್ನ ಭೇಟಿ ಮಾಡಿದ್ರು. ಶಿಕ್ಷಣ ಕ್ಷೇತ್ರದಲ್ಲಿ ಸಾಮರಸ್ಯ ನೆಲೆಸಬೇಕು. ಎರಡು ತಿಂಗಳಿಂದ ನಡೆದ ಘಟನೆಗಳ ಬಗ್ಗೆ ಕೆಲ ನಿರ್ಣಯಗಳಾಗಬೇಕಾಗಿದೆ. ಈ ವಿಷಯದಿಂದ ನನಗೆ ಬೇರೆ ಉದ್ದೇಶ ಇಲ್ಲ. ಚುನಾವಣಾ ಲಾಭಕ್ಕೆ ಮಾತಾಡ್ತಿಲ್ಲ ಎಂದು ಎಚ್ಡಿಕೆ ಜವಾಬ್ ನೀಡಿದರು.

ಎಚ್ಡಿಕೆ ನಿಲುವಳಿ ಸೂಚನೆಗೆ ಸ್ಪೀಕರ್, ಕಾನೂನು ಸಚಿವ ಮಾಧುಸ್ವಾಮಿ ಸಲಹೆ ಕೇಳಿದರು. ಈ ನಿಲುವಳಿ ನಿಯಮದಡಿ ಬರಲ್ಲ. ಘಟನೆ ನಡೆದ ಸಮೀಪದ ಸಂದರ್ಭದಲ್ಲಿ ಇದರ ಚರ್ಚೆ ನಡೆಯಬೇಕು. ಇದು ಬಜೆಟ್ ಅಧಿವೇಶನ, ಇಲ್ಲಿ ಅವಕಾಶ ಇರುವ ವಿಷಯಗಳನ್ನ ಚರ್ಚೆ ಮಾಡಬೇಕು. ಸಮವಸ್ತ್ರ ಪ್ರಕರಣ‌ ಕೋರ್ಟಿನಲ್ಲಿದೆ. ಹೀಗಾಗಿ ಸದನದಲ್ಲಿ ಚರ್ಚಿಸಲು ಆಗಲ್ಲ ಎಂದು ಸ್ಪೀಕರ್‌ ಗೆ ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.

ಎಚ್ಡಿಕೆ ಹೇಳಿದ ವಿಷಯ  ಹಾಗೂ ಅದರ ಸೂಕ್ಷ್ಮತೆ ಹಿನ್ನೆಲೆಯಲ್ಲಿ ನಿಲುವಳಿ ಸೂಚನೆಯೊಳಗೆ ಬರಲ್ಲ. ಆದ್ರೆ ಇದರ ಪ್ರಸ್ತುತತೆ ಹಿನ್ನೆಲೆಯಲ್ಲಿ ನಿಯಮ 69 ರಡಿ ಚರ್ಚೆಗೆ ಅವಕಾಶ ಮಾಡಿಕೊಡ್ತೇನೆ. ನಾಳೆ ಅಥವಾ ನಾಡಿದ್ದು ಇದರ ಚರ್ಚೆಗೆ ಅವಕಾಶ ಕೊಡ್ತೇನೆ ಎಂದು ಸ್ಪೀಕರ್ ಕಾಗೇರಿ ಸದನದಲ್ಲಿ ಹೇಳಿದರು.

Share