Published
8 months agoon
By
UNI Kannadaಬೆಂಗಳೂರು : ಜನವರಿ 04 (ಯು.ಎನ್.ಐ.) ರಾಮನಗರದಲ್ಲಿ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧದ ಕಾಂಗ್ರೆಸ್ ನಾಯಕರ ಹಲ್ಲೆಯನ್ನು ಬಿಜೆಪಿ ಬಹಳ ಗಂಭೀರವಾಗಿ ಪರಿಣಮಿಸಿದ್ದು, ಒಕ್ಕಲಿಗರ ಪಾರುಪತ್ಯದ ರಾಮನಗರ ಸೇರಿದಂತೆ ಬೆಂಗಳೂರು, ತಾಲೂಕು ಜಿಲ್ಲಾ ಕೇಂದ್ರಗಳಲ್ಲಿಯೂ ಬಿಜೆಪಿ ಪ್ರತಿಭಟಿಸುತ್ತಿದೆ.
ಈ ಗಲಾಟೆಯನ್ನು ರಾಜಕೀಯವಾಗಿ ಮಾಡಿಕೊಳ್ಳಲೆತ್ನಿಸುತ್ತಿರುವ ಬಿಜೆಪಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ದಬ್ಬಾಳಿಕೆಯನ್ನು ಇನ್ನೂ ಹೆಚ್ಚೆಚ್ಚು ಖಂಡಿಸಲು ನಿರ್ಧರಿಸಿದೆ. ಈಗಾಗಲೇ ಬಿಜೆಪಿಯ ಸಚಿವರ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ #ಕಾಂಗ್ರೆಸ್ ಗೂಂಡಾಗರಿ ಹ್ಯಾಷ್ ಟ್ಯಾಗ್ ಬಳಸುವ ಮೂಲಕ ಪ್ರತಿಭಟಿಸುತ್ತಿರುವ ಬಿಜೆಪಿಯ ಈ ಕಾಂಗ್ರೆಸ್ ಗೂಂಡಾಗಿರಿಯ ಹ್ಯಾಷ್ ಟ್ಯಾಗ್ ಇಂಡಿಯಾ ಟ್ರೆಂಡಿಗ್ನಲ್ಲಿ ಮಂಗಳವಾರ ಬೆಳಗಿನಷ್ಟೊತ್ತಿಗೆ ನಾಲ್ಕನೇಸ್ಥಾನ ಪಡೆದಿದೆ.
ಇನ್ನು ಮುಂದುವರೆದು ಸಂಸದ ಡಿ.ಕೆ.ಸುರೇಶ್ ಭಾವಚಿತ್ರಗಳನ್ನು ವಿವಿಧ ಭಂಗಿಗಳಲ್ಲಿ ಟ್ರೋಲ್ ಮಡುತ್ತಿರುವ ಬಿಜೆಪಿ ಕಾರ್ಯಕರ್ತರು, ಡಿ.ಕೆ.ಸುರೇಶ್ ಭಾವಚಿತ್ರಗಳನ್ನು ಪೋಸ್ಟರ್ ಗಳಿಗೆ ಕೆಸರು, ಸಗಣಿ, ಮಣ್ಣು ಬಳಿಯುತ್ತಿದ್ದಾರೆ. ಇನ್ನೊಂದೆಡೆ ಹೆಣ್ಣುಮಕ್ಕಳ ಧಿರಿಸು ಧರಿಸಿರುವ ಡಿ.ಕೆ.ಸುರೇಶ್, ನಗ್ನ ಭಂಗಿಗಳಲ್ಲಿಯೂ ಸುರೇಶ್ ಪೋಸ್ಟರ್ಗಳು ಅಲ್ಲಲ್ಲಿ ಬಿತ್ತಿಪತ್ರವಾಗಿ ಗೋಡೆಗಳ ಮೇಲೆ ಅಂಟಿದ್ದು ಕಂಡುಬಂದಿದೆ.
ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಡಾ. ರಾಜ್ ಕುಟುಂಬ
ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದ; ಓರ್ವನಿಗೆ ಚಾಕು ಇರಿತ
ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಧೈರ್ಯ ಎಲ್ಲಾ ಯುವಜನರಿಗೂ ಬರಬೇಕು: ಸಿಎಂ
ಕಾಂಗ್ರೆಸ್ #FreedomMarch: ಇಂದಿನ ಬೃಹತ್ ನಡಿಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಹೆಜ್ಜೆ!
ತ್ಯಾಗ ಬಲಿದಾನದ ಫಲ ಸ್ವಾತಂತ್ರ್ಯ : ಸಿದ್ದರಾಮಯ್ಯ
ಕೆಯುಡಬ್ಲ್ಯೂಜೆ ಮನೆಯಂಗಳದಲ್ಲಿ ಗೌರವ ಕಾರ್ಯಕ್ರಮ..