Connect with us


      




ಕರ್ನಾಟಕ

ಸದನದಲ್ಲಿ ಮುಂದುವರಿದ ಈಗಲ್ಟನ್‌ ಹಗರಣ ಚರ್ಚೆ

Kumara Raitha

Published

on

ಬೆಂಗಳೂರು: ಮಾರ್ಚ್‌ ೧೦ (ಯು.ಎನ್.‌ಐ.) ಈಗಲ್ಟನ್‌ ಪ್ರಕರಣದಲ್ಲಿ ಆದ ಕಾನೂನು ತೊಡಕುಗಳ ಬಗ್ಗೆ ಜೆಡಿಎಸ್‌ ಮುಖಂಡ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ ಮುಂದುವರಿಸಿದರು.

ಅವರಿಂದು ವಿಧಾನಸಭೆಯಲ್ಲಿ ಮಾತನಾಡಿದರು. ನಿನ್ನೆಯೂ ಈಗಲ್ಟನ್‌ ಪ್ರಕಣದ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ ಇಂದು ಸಹ ಅದರ ಬಗ್ಗೆ ಪ್ರಸ್ತಾಪಿಸಿರು. ಈ ಪ್ರಕರಣದಲ್ಲಿನ ಬೆಳವಣಿಗೆ,  ಕಾನೂನು ತೊಡಕುಗಳ ಬಗ್ಗೆ ವಿವರಿಸಿದರು.

ಎಂಟು ತಿಂಗಳಲ್ಲಿ ಮೊದಲ ಡಿಸಿ ಕೊಟ್ಟ ವರದಿ ಮುಖ್ಯ ಕಾರ್ಯದರ್ಶಿ ಅವರ ಮುಂದೆ 2011ರಲ್ಲಿ ಮಂಡಿತವಾಗಿದೆ. ಈ ಅಂತರದಲ್ಲಿ ಯಾಕೆ ತಡ ಆಯಿತು. ಇದರ ಹಿಂದೆ ಇದ್ದ ಉದ್ದೇಶ ಏನಿತ್ತು ಎಂಬುದನ್ನು ಇದನ್ನು ಕಂದಾಯ ಸಚಿವರು ನೋಟ್ ಮಾಡಿಕೊಳ್ಳಬೇಕು.

ಈ ವಿಷಯವನ್ನು ಕೆವಲ ಚರ್ಚೆಗಾಗಿ ತಂದಿಲ್ಲ. ಎನೇನು ನಡೆದಿದೆ ಎಂದು ನ್ಯಾಯಾಂಗ ತನಿಖೆ ಮಾಡಬೇಕಾಗುತ್ತದೆ ಮೂರು ಕೋಟಿಯಿಂದ 82 ಕೋಟಿಗೆ ಹೋಗಿರುತ್ತದೆ. ಇದರ ಮೇಲೆ‌ ಮತ್ತೊಮ್ಮೆ ಕೋರ್ಟ್ಗೆ ಹೋಗಿರುತ್ತಾರೆ ಇದರ ಮಧ್ಯದಲ್ಲಿ ಮೂರನೇ ಡಿಸಿ ಬರ್ತಾರೆ ಮೂರನೇ ಡಿಸಿ ಬಂದು ಮೂರು ಕೆಟಗರಿ ಮಾಡ್ತಾರೆ ಎಂದು ವಿವರಿಸಿದರು.

ಅಗ್ರಿಕಲ್ಚರ್ ಗೈಡ್ ಲೈನ್ಸ್ ಪ್ರಕಾರ 17 ಕೋಟಿ ಹಾಕ್ತಾರೆ ಗೈಡ್ ಲೈನ್ಸ್ ವ್ಯಾಲೂ 93 ಕೋಟಿ ಹಾಕ್ತಾರೆ. ಬೆಸ್ಡ್ ಆನ್ 1560 ಸ್ವ್ಕೇರ್ ಫಿಟ್ ಲೆಕ್ಕದಲ್ಲಿ 526 ಕೋಟಿ ಹಾಕ್ತಾರೆ. ಇದರ ಲೆಕ್ಕದಲ್ಲಿ 50% ರಷ್ಟು ಕಟ್ಟಲಿ ಎಂದು ಮೂರನೇ ಡಿಸಿ ಹೇಳಿದ್ದಾರೆ. 2014 ರಲ್ಲಿ 980 ಕೋಟಿ ಬಂತು. 98 ಸಾವಿರ ಬಿಲ್ ಗೆ 980  ಕೋಟಿ ಹಾಕಿದ್ರು ಡಿಸಿ ಕರೆದು ಕಾರಣ ಕೇಳಿದಾಗ ಅವರು ಆಕಾಶವೇ ಪರಿಮಿತಿ ಎಂದು  ಹೇಳಿದ್ದರಂತೆ ಎಂದು ವಿವರಿಸಿದರು.

ದೇಶದಲ್ಲಿ  ಈ ರೀತಿ ತೀರ್ಮಾನ ಮಾಡಲು ಸಾಧ್ಯನಾ ಎಂದ ಅವರು ಒಂದು ಕಡೆ ನೀವು ಟೂರಿಸಂನತ್ತ ಸೆಳೆಯಬೇಕು ಅಂತಿರಾ, ಮತ್ತೊಂದೆಡೆ ಪರಿಸರ ಇಲಾಖೆಯಲ್ಲಿ ಈ ರೀತಿ ಅಗುತ್ತಿದೆ. ಸುಪ್ರೀಂ ನಲ್ಲಿ ರಾಜ್ಯ ಸರ್ಕಾರದ ವಕೀಲರು ಹೇಳಿದ್ದಾರೆ. 28 ಎಕರೆ ಭೂಮಿ ವಶಪಡಿಸಿಕೊಳ್ಳಲು ಆದೇಶ ಮಾಡಿ ಎಂದು ಕೇಳ್ತಾರೆ. ದರ ನಿಗದಿ ಮಾಡಲು 3 ಕೋಟಿಯಿಂದ 980 ಕೋಟಿ ಇದಿಯಲ್ಲ. ಇದನ್ನು ನಿಗದಿ ಮಾಡಲು ಸಬ್ ಕಮಿಟಿಗೆ ಅನುಮತಿ ಕೊಡಿ ಎಂದು ಕೇಳ್ತಾರೆ ಅದರ ನೇಲೆ ಮೇಲೆ 16-01- 14 ಕ್ಕೆ ಕೋರ್ಟ್ ಆದೇಶ ಮಾಡುತ್ತದೆ. ಎಂದು ಕುಮಾರಸ್ವಾಮಿ ವಿವರಿಸಿದರು.

ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ:

ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಅಂತ ಕುಮಾರಸ್ವಾಮಿ ಪ್ರಶ್ನೆ ಮಾಡಿದಾಗ ಅವರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು. ಈಗಲ್ಟನ್ ಪರ ಮಾತಾಡ್ತಿದ್ದೀರಲ್ಲ ನೀವು ಯಾವ ಪರ್ಸಂಟೇಜ್ ತಗೋಂಡಿದ್ದೀರಾ ಎಂದು ಮರುಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಮಾನವೀಯತೆಯ ಪರ್ಸಂಟೇಜ್, ತಾಯಿ ಹೃದಯದ ಪರ್ಸಂಟೇಜ್ ಎಂದು ಹೇಳಿದರು.

ನೀವು ಅಧಿಕಾರದಲ್ಲಿ ಇದ್ದಾಗಲೂ ಆ ಭೂಮಿ ಲೀಸ್ ನಲ್ಲಿತ್ತು, ಯಾಕೆ ನೀವು ಆಗ ಕ್ರಮ ಕೈಗೊಳ್ಳಲಿಲ್ಲ, ನೀವು ಈಗಲ್ಟನ್ ಪರ ವಕಾಲತ್ತು ಹಾಕ್ತಾ ಇದ್ದೀರಾ, ಇದಕ್ಕೂ ಬಜೆಟ್ ಗೂ ಸಂಬಂಧವೇ ಇಲ್ಲ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

Share