Connect with us


      
ಕರ್ನಾಟಕ

ಎಚ್‌ಡಿಕೆ ಭೇಟಿಯಾದ 20ಕ್ಕೂ ಹೆಚ್ಚು ಮಠಾಧೀಶರು

Iranna Anchatageri

Published

on

ಬಿಡದಿ: ಮಾರ್ಚ್ 05 (ಯು.ಎನ್.ಐ.) ಸಣ್ಣಪುಟ್ಟ ಸಮುದಾಯಗಳ ಇಪ್ಪತ್ತಕ್ಕೂ ಹೆಚ್ಚು ಪೀಠಗಳ ಸ್ವಾಮೀಜಿಗಳು ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆಶೀರ್ವದಿಸಿದರು.

ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ಮಾಜಿ ಮುಖ್ಯಮಂತ್ರಿಗಳ ತೋಟಕ್ಕೆ ಭೇಟಿ ನೀಡಿ ಎಲ್ಲ ಶ್ರೀಗಳು, ತಮ್ಮ ಸಮುದಾಯಗಳ ಸ್ಥಿತಿಗತಿಗಳು, ಸಮಸ್ಯೆಗಳು, ಸವಾಲುಗಳು ಸೇರಿದಂತೆ ರಾಜ್ಯದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದರು.

ದೊಡ್ಡಬಳ್ಳಾಪುರದ ವಾಲ್ಮೀಕಿ ಗುರು ಪೀಠದ ಶ್ರೀ ಬ್ರಹ್ಮಾನಂದ ಗುರೂಜಿ, ಈಡಿಗ ಗುರುಪೀಠದ ರಾಣಿಬೆನ್ನೂರು ಶ್ರೀ ಪ್ರಣವಾನಂದ ಸ್ವಾಮಿ ಅವರು, ಚಿತ್ರದುರ್ಗದ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ವಾಡಿಯ ಸವಿತಾ ಸಮಾಜ ಗುರುಪೀಠ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಹಿರಿಯೂರಿನ ಅರಳಯ್ಯ ಗುರುಪೀಠದ ಶ್ರೀ ಅರಳಯ್ಯ ಮಹಾಸ್ವಾಮೀಜಿ, ಕಲಬುರ್ಗಿಯ ಪಿಂಜಾರ ಗುರುಪೀಠದ ಶ್ರೀ ಸಿದ್ದಬಸವ ಕಭೀರಾನಂದ ಸ್ವಾಮೀಜಿ, ಕಲಬುರ್ಗಿಯ ಶ್ರೀ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ವರಲಿಂಗ ಸ್ವಾಮೀಜಿ, ಹರಿಹರದ ಕೇದಾರ ಗುರು ಪೀಠದ ಶಾಖಾ ಮಠ ಶ್ರೀ ಸಿದ್ದಲಿಂಗ ಶಿವಾಚರ್ಯ ಸ್ವಾಮೀಜಿ, ಅಗಡಿಯ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಗಂಗಾಧರೇಶ್ವರ ಶ್ರೀಗಳು, ಶಿವಮೊಗ್ಗದ ರುದ್ರಾಕ್ಷಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೆಂಗಳೂರಿನ ಪಿಂಜಾರ ಗುರುಪೀಠದ ಶ್ರೀ ಸಂಗಮಾನಾಥ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಇನ್ನೂ ಅನೇಕ ಸ್ವಾಮೀಜಿಗಳು ಈ ಭೇಟಿಯಲ್ಲಿ ಇದ್ದರು.

Share