Connect with us


      




ಆರೋಗ್ಯ

ದೇಶದಲ್ಲಿ ಕೊರೊನಾ ಅವಾಂತರ… 24 ಗಂಟೆಗಳಲ್ಲಿ 1.68 ಲಕ್ಷ ಹೊಸ ಪ್ರಕರಣ

UNI Kannada

Published

on

ನವದೆಹಲಿ, ಜ 11 (ಯುಎನ್‌ ಐ) ದೇಶದಲ್ಲಿ ಕೊರೊನಾ ಪ್ರಸರಣ ತೀವ್ರಗೊಂಡಿದೆ. ಕಳೆದ 24 ಗಂಟೆಗಳಲ್ಲಿ 1,68,063 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 69,959 ಮಂದಿ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಅದೇ ರೀತಿ ಕೋವಿಡ್‌ ಸಾಂಕ್ರಾಮಿಕದಿಂದ 277 ಜನರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಪ್ರಸ್ತುತ, 8,21,446 ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಹೆಲ್ತ್‌ ಬುಲೆಟಿನ್ ನಲ್ಲಿ ತಿಳಿಸಿದೆ. ಪ್ರಸ್ತುತ ಪಾಸಿಟಿವಿಟಿ ದರ ಶೇ 10.64 ರಷ್ಟಿದ್ದು, ಮತ್ತೊಂದೆಡೆ, ಓಮಿಕ್ರಾನ್ ಪ್ರಕರಣಗಳು ಸಹ ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,461 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

Share