Connect with us


      




ಆರೋಗ್ಯ

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩೭ ಸಾವಿರ ಕೋವಿಡ್ ಪ್ರಕರಣಗಳು ಪತ್ತೆ

UNI Kannada

Published

on

ನವದೆಹಲಿ, ಜ ೪(ಯುಎನ್ ಐ) ದೇಶಾದ್ಯಂತ ಕೈಗೊಂಡಿರುವ ಲಸಿಕೆ ಅಭಿಯಾನದಡಿ ಈವರೆಗೆ ೧೪೬ ಕೋಟಿ ೭೦ ಲಕ್ಷ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೯ ಲಕ್ಷ ೨೭ ಸಾವಿರ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಒಟ್ಟು ೩೭ ಸಾವಿರದ ೩೭೯ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಪ್ರಸ್ತುತ ದೇಶದಲ್ಲಿ ಒಂದು ಲಕ್ಷ ೭೧ ಸಾವಿರದ ೮೩೦ ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡ ೧ಕ್ಕಿಂತಲೂ ಕಡಿಮೆ ಇದೆ. ಪ್ರಸ್ತುತ ಅದು ೦.೪೯ರಷ್ಟಿದೆ. ಚೇತರಿಕೆ ಪ್ರಮಾಣ ಶೇಕಡ ೯೮.೧೩ರಷ್ಟಿದ್ದು, ಕಳೆದ ೨೪ ಗಂಟೆಗಳಲ್ಲಿ ಒಟ್ಟು ೧೧ ಸಾವಿರದ ೭ ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಇದರಿಂದ ದೇಶದಲ್ಲಿ ಈವರೆಗೆ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ೩ ಕೋಟಿ ೪೩ ಲಕ್ಷ ೬ ಸಾವಿರಕ್ಕೆ ತಲುಪಿದೆ.
ವಾರದ ಪಾಸಿಟಿವಿಟಿ ದರ ಪ್ರಸ್ತುತ ಶೇಕಡ ೨.೦೫ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ದರ ಶೇಕಡ ೩.೨೪ರಷ್ಟಿದೆ. ದೇಶದಲ್ಲಿ ಈವರೆಗೆ ಸುಮಾರು ೬೮ ಕೋಟಿ ೨೪ ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ೧೧ ಲಕ್ಷ ೫೪ ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Share