Connect with us


      




ಆರೋಗ್ಯ

ದೇಶದಲ್ಲಿ ಅಬ್ಬರಿಸುತ್ತಿರುವ ಕೊರೊನಾ .. ದಾಖಲೆ ಮಟ್ಟದಲ್ಲಿ ಪ್ರಕರಣಗಳು

UNI Kannada

Published

on

ನವದೆಹಲಿ, ಜ 8(ಯುಎನ್‌ ಐ) – ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಹೊಸದಾಗಿ ಕಳೆದ 24 ಗಂಟೆಗಳಲ್ಲಿ 1,41,986 ಕೊರೊನಾ ವೈರಸ್‌ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೊರಡಿಸಿದ ಹೆಲ್ತ್‌ ಬುಲೆಟಿನ್ ನಲ್ಲಿ ತಿಳಿಸಿದೆ . ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 40,895 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು, ದೇಶದಲ್ಲಿ ಈವರೆಗೆ 3,44,12,740 ಮಂದಿ ಕೊರೊನಾದಿಂದ ಗುಣಮುಖಗೊಂಡಿದ್ದಾರೆ.

ಕೊರೊನಾ ಸೋಂಕಿನಿಂದ 285 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ 4,72,169 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ. ಪಾಸಿಟಿವಿಟಿ ದರ ಶೇ 9.28 ರಷ್ಟಿದ್ದು, ಹೊಸದಾಗಿ ಸಂಭವಿಸಿರುವ 285 ಸಾವುಗಳೊಂದಿಗೆ ಈವರೆಗೆ ಭಾರತದಲ್ಲಿ ಒಟ್ಟು ಸಾವಿನ ಸಂಖ್ಯೆ 4,83,178 ತಲುಪಿದೆ, ಈವರೆಗೆ ದೇಶದಲ್ಲಿ 150.06 ಕೋಟಿ ಕೋವಿಡ್‌ ಲಸಿಕೆ ಡೋಸ್‌ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Share