Connect with us


      
ಸಿನೆಮಾ

“ಕಟ್ಟಪ್ಪ” ಸತ್ಯರಾಜ್ ಗೆ ಅಮರಿಕೊಂಡ ಕೊರೊನಾ… ಆಸ್ಪತ್ರೆಗೆ ದಾಖಲು

UNI Kannada

Published

on

ಚೆನ್ನೈ, ಜ 8(ಯುಎನ್‌ ಐ) – ಸಿನಿಮಾ ರಂಗದಲ್ಲಿ ಕೊರೊನಾ ಭಾರಿ ಸದ್ದು ಮಾಡುತ್ತಿದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನ ಟಾಪ್ ಹೀರೋಯಿನ್‌ಗಳು ಒಬ್ಬರ ನಂತರ ಮತ್ತೊಬ್ಬರು ಎಂಬಂತೆ ಸೋಂಕಿಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಟಾಲಿವುಡ್ ಸೂಪರ್‌ಸ್ಟಾರ್‌ಗಳಾದ ಮಹೇಶ್ ಬಾಬು, ಮಂಚು ಮನೋಜ್, ಲಕ್ಷ್ಮಿ ಸಂಗೀತ ನಿರ್ದೇಶಕ ತಮನ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈಗ ಹೊಸದಾಗಿ ನಟ ಬಾಹುಬಲಿ ಕಟ್ಟಪ್ಪ ಸತ್ಯರಾಜ್ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕೋವಿಡ್‌ ಪಾಸಿಟಿವ್‌ ಕಂಡುಬಂದ ನಂತರ ಕುಟುಂಬ ಸದಸ್ಯರು ಅವರನ್ನು ನಿನ್ನೆ ಸಂಜೆ ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ

ಇದಕ್ಕೂ ಮುನ್ನ ತಮಿಳು ಚಿತ್ರರಂಗದ ಹಾಸ್ಯನಟರಾದ ವಡಿವೇಲು, ಚಿಯಾನ್ ವಿಕ್ರಮ್, ಅರ್ಜುನ್, ಕಮಲ್ ಹಾಸನ್ ಮತ್ತಿತರರು ಕೊರೊನಾ ಸೋಂಕಿಗೆ ಒಳಗಾಗಿದ್ದರು. , ತಮಿಳುನಾಡಿನಲ್ಲಿ, ಓಮಿಕ್ರಾನ್ ಜೊತೆಗೆ ಕೊರೊನಾ ಹೊಸ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಇದರೊಂದಿಗೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಇದೇ ಭಾನುವಾರ ಲಾಕ್‌ ಡೌನ್ ಕೂಡ ವಿಧಿಸಲಾಗುತ್ತಿದೆ. ಕೊರೊನಾ ಪ್ರಕರಣಗಳ ತೀವ್ರತೆಗೆ ಅನುಗುಣವಾಗಿ, ಸರ್ಕಾರ ಇನ್ನೂ ಹೆಚ್ಚಿನ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ.

Share