Connect with us


      
ದಿಟನುಡಿ – ರವಿ ಹಂಜ್

ಸೂಕ್ತ ಕಾನೂನಿನ ಕೊರತೆಯೂ ಆರೋಗ್ಯ ವಿಮೆ ಸ್ಕೀಮುಗಳೂ

Published

on

ರವಿ ಹಂಜ್

ಅಂಕಣ: ದಿಟನುಡಿ -೧

ಆಧುನಿಕತೆಯ ಹೆಸರಿನಲ್ಲಿ ಇಂದಿನ ಬದುಕು ಜೇಡರಬಲೆಯಂತಾಗಿದೆ. ಬಿಡಿಸಿಕೊಳ್ಳುವ ಪರಿಯೆಂತು ಎನ್ನುವಂತಾಗಿದೆ. ಅವಶ್ಯಕತೆ ಯಾವುದು ಅನವಶ್ಯಕತೆ ಯಾವುದು ಅರಿಯದಂತೆ ಮಾಡುವಲ್ಲಿ ಜಾಹಿರಾತುಗಳು ಯಶಸ್ವಿಯಾಗಿವೆ. ಇವುಗಳ ಹೆವಿ ವೊಲ್ಟೇಜ್‌ ಬೆಳಕಿನಲ್ಲಿ ಜ್ಞಾನದ ಕಣ್ಣು ಮಂಜಾಗಿದೆ. ಇರಲಿ ಇದರ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡೋಣ. ಅಷ್ಟಕ್ಕೂ ನಾನು ಈಗ ಹೇಳ ಹೊರಟಿರುವುದು ಆರೋಗ್ಯವಿಮೆ ಸ್ಕೀಮುಗಳ ಬಗ್ಗೆ. ಇದರ ಬಗ್ಗೆ ಸೂಕ್ತ ಕಾನೂನೇ ಇಲ್ಲದಿದ್ದ ಪರಿಸ್ಥಿತಿಯಲ್ಲಿ ಈ ಸ್ಕೀಮುಗಳಿಂದ ಆಗುವ ಅನುಕೂಲ – ಅನಾನುಕೂಲಗಳ ಬಗ್ಗೆ.

ಬಹಳ ದೂರವೇನು ಹೋಗಬೇಕಾಗಿಲ್ಲ. ಕೇವಲ ಎರಡು ದಶಕದ ಹಿಂದೆ ಆರೋಗ್ಯವಿಮೆ ಬಗ್ಗೆ ಯಾರೂ ಗಮನ ನೀಡುತ್ತಿರಲಿಲ್ಲ. ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ಹೋಗುವುದು ಚಿಕಿತ್ಸೆ ಪಡೆದು ಜೇಬಿನಲ್ಲಿ ತೆಗೆದುಕೊಂಡು ಹೋದ ಒಂದಷ್ಟು ಫೀಸು ಕೊಟ್ಟು ಬರುವುದು ಸಾಮಾನ್ಯವಾಗಿತ್ತು. ದುಬಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಬೆರಳೆಣಿಕೆಯಷ್ಟೂ ಇರಲಿಲ್ಲ. ಅಂದು ವೈದ್ಯಕೀಯ ಚಿಕಿತ್ಸೆ ದುಬಾರಿ ಬಾಬತ್ತೇನೂ ಆಗಿರಲಿಲ್ಲ. ಆದರೆ ಇಂದೇನಾಗಿದೆ. ಸಣ್ಣಪುಟ್ಟ ದೈಹಿಕ ತೊಂದರೆಗಳಿಗೂ ಲಕ್ಷಾಂತರ ರೂ ವ್ಯಯಿಸಬೇಕಾದಂಥ ಕಾಲಘಟ್ಟದಲ್ಲಿ ನಿಂತಿದ್ದೇವೆ. ಇಂಥ ಸ್ಥಿತಿಗೆ ಯಾರು ಹೊಣೆ ? ಜನ ಅಥವಾ ಸರ್ಕಾರ ಅಥವಾ ವೈದ್ಯಕೀಯ ರಂಗ ?

ದೇಶದ ತುಂಬೆಲ್ಲಾ ಆರೋಗ್ಯ ವಿಮೆ ಸ್ಕೀಮುಗಳು ಕಾಲಿಟ್ಟು ಹೆಮ್ಮಾರವಾಗುತ್ತಿದ್ದಂತೆಯೇ ಅದರೊಟ್ಟಿಗೇ ಕಾಲಿಟ್ಟ ಮೆಡಿಕಲ್ malpractice ಸಹ ಹೆಮ್ಮರವಾಗಿ ಬೆಳೆದುಬಿಟ್ಟಿದೆ. ಡಾಕ್ಟರರು, ಬೀದಿಬೀದಿಯಲ್ಲಿಯೂ ಇರುವ ನರ್ಸಿಂಗ್ ಹೋಮುಗಳು ( ಎಲ್ಲ ನರ್ಸಿಂಗ್‌ ಹೋಮುಗಳ ಬಗ್ಗೆಯೂ ನಕಾರಾತ್ಮಕವಾಗಿ ಮಾತನಾಡಲು ಆಗುವುದಿಲ್ಲವಾದರೂ ಒಳಿತು – ಕೆಡುಕನ್ನು ಗುರು ತಿಸಲಾಗದಷ್ಟು ಸ್ಥಿತಿ ಆಯೋಮಯವಾಗಿದೆ ಎಂಬುದಂತೂ ದಿಟ) ಅವುಗಳ ಹುನ್ನಾರವನ್ನು ಜನರು ಅನುಭವಿಸಲಾರದೆ ಇಲ್ಲ. ಈ ಕುರಿತು ಸಾಕಷ್ಟು ಹಗರಣಗಳು ಸುದ್ದಿ ಮಾಡಿವೆಯಲ್ಲವೇ!

ನಾನು ಕಂಡ ದಾವಣಗೆರೆಯಲ್ಲಿ ಜನ ಎಲಿ, ನಿರ್ಮಲ ಕೇಸರಿ, ಶಫೀ, ರಂಗನಾಥ, ಶಿವಲಿಂಗಪ್ಪ ಡಾಕ್ಟ್ರು ಔಷಧಿ ಕೊಟ್ರೆ, ಕಾಫಿ ಪುಡಿ ಶೆಟ್ರು ಮಂತ್ರಿಸಿದರೆ ಸಾಕು ಎಂಬಂತಿದ್ದರು. ಇಂದು ಊರು ತುಂಬಾ ನರ್ಸಿಂಗ್ ಹೋಮ್ಗಳು, ಮಲ್ಟಿ ಸ್ಪೆಷಲ್ ಹಾಸ್ಪಿಟಲ್ಲುಗಳು ನಾಯಿಕೊಡೆಯಂತಿರುವುದಲ್ಲದೆ ಎರೆಡೆರೆಡು ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳು ಇದ್ದರೂ ಮಂಗಳೂರು, ಬೆಂಗಳೂರು  ಆಸ್ಪತ್ರೆಗಳಿಗೆ ನಿತ್ಯ ನೂರಾರು ಜನ ದೌಡಾಯಿಸುತ್ತಿದ್ದಾರೆ. ಜನರನ್ನು ಇಂಥ ಆಸ್ಪತ್ರೆಗಳಿಗೆ  ಕಳಿಸಲು ಸ್ಪೆಷಲ್ ಬಸ್ಸು ಗಳ ಉದ್ಯಮವೇ ಆರಂಭವಾಗಿದೆ ಎಂದರೆ ದಾವಣಗೆರೆ ರೋಗಿಗಳ ಬೀಡಾಗಿದೆಯೇ!?ಇದು ಕೇವಲ ದಾವಣಗೆರೆಯ ಸಮಸ್ಯೆಯಷ್ಟೇ ಅಲ್ಲ ಅನೇಕ ನಗರಗಳ ಸಮಸ್ಯೆಯಾಗಿದೆ.

ಬೆಂಗಳೂರಿನ ಒಂದು ನರ್ಸಿಂಗ್ ಹೋಮಿನಲ್ಲಿ  ಕಾರ್ಯನಿಮಿತ್ತ ಕಾಯುತ್ತಾ ಕುಳಿತಾಗ ನನಗೆ ಕೇಳಿಸಿದ್ದು, ಗ್ಯಾಸ್ ಟ್ರಬಲ್ ಅಂತ ಬಂದವನಿಗೆ ಆಂಜಿಯೋಗ್ರಾಂ ಮಾಡಿಸಲು ಡಾಕ್ಟರ್ ಹೇಳಿದರೆಂದು ಒಬ್ಬ ರೋಧಿಸುತ್ತಿದ್ದದ್ದು. ಇನ್ನೊಬ್ಬ ತಾಯಿ ತನ್ನ ಹೈಸ್ಕೂಲ್ ಮಗನಿಗೆ ಜ್ವರವೆಂದು ಬಂದರೆ, ಆತನಿಗೆ ಹೈ ಬಿಪಿ ಇದೆ, ಅಡ್ಮಿಟ್ ಮಾಡಿಸಬೇಕೆಂದು ಡಾಕ್ಟ್ರು ಹೇಳುತ್ತಿದ್ದಾರೆಂದು. ಇತ್ಯಾ ದಿ ಇತ್ಯಾದಿ ಸಂಭಾಷಣೆಗಳು ಕೇಳಿಬರುತ್ತಿದ್ದವು!

ಒಟ್ಟಾರೆ ಮೆಡಿಕಲ್ ಮಾಲ್ ಪ್ರಾಕ್ಟೀಸ್ ಬಗ್ಗೆ ಕಾನೂನು ಮಾಡದೇ ಆರೋಗ್ಯವಿಮೆ ಬಂದರೆ ಏನಾಗಬಹುದೋ ಅದೆಲ್ಲವೂ ಇಂದು ಆಗುತ್ತಿದೆ. ಇನ್ಸೂರೆನ್ಸ್ ಕೊಡುತ್ತದಲ್ಲ ನಮಗೇನು ಎಂದು ಅಂಡೆತ್ತಿ ಹೂಸುವವನು ಕೂಡ ಆಂಜಿಯೋಗ್ರಾಮ್ ಅಥವಾ ತೆರೆದೆದೆಯ ಶಸ್ತ್ರಚಿಕಿತ್ಸಗೆ ಅಂಜದೆ ಎದೆಯೊಡ್ಡುತ್ತಾನೆ. ಇನ್ಸೂರೆನ್ಸ್ ಇಲ್ಲದವರಿಗೆ ಸರ್ಕಾರಿ ಆರೋಗ್ಯಭಾಗ್ಯ, ಯಶಸ್ವಿನಿ, ಇತರೆ ವಿಮೆಗಳಿವೆ. ಹಾಗಾಗಿ ವಿಮೆ ಇಲ್ಲದವನೇ ಇಂದು ದರಿದ್ರನು.

ಎರಡು ದಶಕಗಳ ಹಿಂದೆ ಯಾರೂ ನೆಗಡಿ, ಕೆಮ್ಮು, ವಿಷಮಶೀತ ಜ್ವರ, ಟೈಫಾಯ್ಡ್ ಗಳಿಗೆ ಆಸ್ಪತ್ರೆ ಸೇರುತ್ತಿರಲಿಲ್ಲ. ಹತ್ತಿರದ ಕ್ಲಿನಿಕ್ಕಿನಲ್ಲಿ ಔಷಧಿ ಪಡೆಯುತ್ತಿದ್ದರು. ಯಾವಾಗ ಆರೋಗ್ಯವಿಮೆ, ಆರೋಗ್ಯಭಾಗ್ಯ, ಯಶಸ್ವಿನಿ ಯೋಜನೆಗಳು ಬಂದವೋ ಬಹುತೇಕ  ವೈದ್ಯರು ರೋಗಿಗಳನ್ನು ಪ್ರತಿಯೊಂದಕ್ಕೂ ಅಡ್ಮಿಟ್ ಮಾಡಿಸಿಕೊಳ್ಳಲು ಶುರುಮಾಡಿದರು. ಅವರುಗಳ ಈ ವಿಮಾಶೋಷಣೆಯ ಪರಿಣಾಮ ಇಂದು ಮಿತಿ ಮೀರಿದೆ. ಇತ್ತೀಚೆಗೆ ಕರ್ನಾಟಕ ಸರಕಾರ, ಖಾಸಗಿ ಆಸ್ಪತ್ರೆಗಳಿಗೆ ಲಗಾಮು ಹಾಕುವ ಯೋಜನೆಯೊಂದನ್ನು ಹಾಕಿಕೊಂಡಿತ್ತು. ಅದು ಹೇಗೆ ಅನುಷ್ಠಾನಗೊಂಡಿದೆಯೋ ಗೊತ್ತಿಲ್ಲ! ಆದರೆ ಇದನ್ನೇ ವಿದೇಶಗಳಲ್ಲಿ medical malpractice control ಎನ್ನು ವುದು. ಆರೋಗ್ಯ ವಿಮೆ ಇರುವೆಡೆಯೆಲ್ಲೆಲ್ಲ ಈ ರೀತಿಯ ನಿಯಂತ್ರಣ ಸೂತ್ರದ ಕಾನೂನುಗಳಿವೆ. ಹಾಗೆಂದು ಇಂತಹ ಕೇಸುಗಳನ್ನು ರಾತ್ರೋರಾತ್ರಿ ಸೃಷ್ಟಿ ಮಾಡಿದುವಲ್ಲ. ಇಂತಹ ಕಾನೂನುಗಳನ್ನು ಮೆಡಿಕಲ್‌ ಕ್ಷೇತ್ರದ್ಲಲಿ ನೋವು ಅನುಭವಿಸಿದ  ಜನರು ಕೇಸು ಗಳನ್ನು ಹಾಕಿ ವಿಕಸಿಸುತ್ತ ಸೃಷ್ಟಿಗೊಂಡವು.

ಇನ್ನು ಹೈದರಾಬಾದಿನ KIMS ಆಸ್ಪತ್ರೆಯಲ್ಲಿ ಹಿರಿಯ ಹೃದಯತಜ್ಞರಾದ ಡಾ. ನಿಸರ್ಗ ಹೀಗೆ ಹೇಳಿದ್ದಾರೆ:”ಎದೆ ನೋವು, ತುಂಬಾ ಬೆವರುವುದು, ಅತಿಯಾಗಿ ಸೋಲು ಬರುವುದು, ಉಬ್ಬಸ, ಇವೆಲ್ಲ ಖಂಡಿತಾ ಹೃದಯದ ತೊಂದರೆಯಿಂದ ಆಗುವ ಲಕ್ಷಣಗಳು. ಎಷ್ಟೇ ವಯಸ್ಸಾಗಿರಲಿ, ಈ ಮೇಲಿನ ತೊಂದರೆಗಳನ್ನ ಎಂದೂ ಕಡೆಗಣಿಸಬಾರದು.(ವೈದ್ಯರೂ ಕೂಡ).
ಹಾರ್ಟ್ ಅಟ್ಯಾಕ್ ಅಂದರೆ, ಹೃದಯಕ್ಕೇ ರಕ್ತ ಸಂಚಾರ ಮಾಡುವ coronary artery (ಸುಮಾರು 2 mm ಅಷ್ಟೇ ಗಾತ್ರದ ಚಿಕ್ಕ ರಕ್ತನಾಳಗಳು) ಮೊದಲೇ ಬ್ಲಾಕ್ ಇದ್ದು, ಅದರ ಮೇಲೆ ರಕ್ತ ಹೆಪ್ಪುಗಟ್ಟುವುದು. ಆ ರಕ್ತ ಹೆಪ್ಪುಗಟ್ಟುವಿಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಬಹುದು. ಹೆಚ್ಚಿನವರಿಗೆ ಒಂದಲ್ಲ ಒಂದು ಸೂಚನೆಯನ್ನ ಕೊಡುತ್ತದೆ. ಎದೆ ನೋವು ಇರುವ ಸಂದರ್ಭದಲ್ಲಾದರೆ ECG ವ್ಯತ್ಯಯವಾಗುತ್ತದೆ. ECG ಓದುವುದು ಅಷ್ಟು ಸುಲಭವಲ್ಲ. ಇಬ್ಬರು ಕಾರ್ಡಿಯೋಲಾಜಿಸ್ಟ್ ಗಳಲ್ಲೇ ಭಿನ್ನಾಭಿಪ್ರಾಯ ಬರುವಷ್ಟು ಕೆಲವೊಮ್ಮೆ ಕ್ಲಿಷ್ಟ. ECG ನಾರ್ಮಲ್ ಇದೆ ಅಂದರೂ ಕೂಡ. ರಕ್ತ ಪರೀಕ್ಷೆಯಲ್ಲಿ ಕಾರ್ಡಿಯಾಕ್ enzyme ಗಳು ಅನಿವಾರ್ಯವಾಗಿ ಹಾರ್ಟ್ ಅಟ್ಯಾಕ್ ನಲ್ಲಿ ಜಾಸ್ತಿ ಆಗಿರುತ್ತೆ. ಟ್ರೋಪೋನಿನ್ ಅನ್ನುವ ಈ ರಾಸಾಯನಿಕ ಪದಾರ್ಥ, ಹೃದಯದ ಸ್ನಾಯುಗಳು ಸಾಯುತ್ತಿರುವುದನ್ನ ಬಹುಬೇಗ ತೋರಿಸುತ್ತದೆ. ಕೆಲವೊಮ್ಮೆ ಕಾರ್ಡಿಯಾಕ್ enzyme ಮಾಡದೇ ಹಾರ್ಟ್ ಅಟ್ಯಾಕ್ miss ಆಗಿರುವುದೂ ಇದೆ. ECG ಚೆನ್ನಾಗಿಲ್ಲ ಅಂದರೆ ಖಂಡಿತಾ ಮಾಡಲೇಬೇಕು. ರೋಗಿಯನ್ನ ಯಾವ ಕಾರಣಕ್ಕೂ ಹೆಚ್ಚು move ಮಾಡಬಾರದು. ಸ್ವಲ್ಪವೂ strain ಆಗಬಾರದು. ಯಾಕೆಂದರೆ ಹಾಗಾದಾಗ ಹೃದಯ ಮತ್ತೂ ಹೆಚ್ಚು ಕೆಲಸ ಮಾಡಬೇಕು, ಆಗ ಸೋಲುತ್ತದೆ.
ಒಳ್ಳೆಯ gym ಮಾಡುತ್ತಿದ್ದೆ, ನಾನಿನ್ನೂ ಬಹಳ ಸಣ್ಣ ವಯಸ್ಸಿನವ ಅನ್ನುವ ಕಲ್ಪನೆಯಿಂದ ಯಾವತ್ತೂ ನೆಗ್ಲೆಕ್ಟ್ ಮಾಡಲೇ ಬಾರದು. Gym is not equivalent to TMT . TMT positive ಇರುವವರೂ ಕೂಡ TMT ಮಾಡುವಾಗ ಚೆನ್ನಾಗಿಯೇ ಓಡಿರುತ್ತಾರೆ, ಅವರಿಗೇನೂ ಎದೆನೋವು ಬಂದಿರಬೇಕೆಂದಿಲ್ಲ. Blockage ಇರುವವರು gym ನಲ್ಲಿ/ TMT ಯಲ್ಲಿ ಎದೆನೋವು, ಉಬ್ಬಸ ಕಾಣಿಸಿಕೊಳ್ಳಲೇ ಬೇಕೆಂಬ ನಿಯಮವಿಲ್ಲ.

ಇನ್ನು ಹಾರ್ಟ್ ಅಟ್ಯಾಕ್ ವಿಚಾರಕ್ಕೆ ಬರುವುದಾದರೆ, ಆ golden hour ನಲ್ಲಿ ಯಾರು ಎಷ್ಟು ಜಾಣ್ಮೆ ವಹಿಸಿ, ಹೃದಯ ದ ಸಾವನ್ನು ಕಡಿಮೆ ಮಾಡುತ್ತಾರೋ ಅವರೇ ಗೆದ್ದ ಹಾಗೆ. ಹಾರ್ಟ್ ಅಟ್ಯಾಕ್ ಆದಾಗ heart can fibrillate. ಅದು ಒಂದು pre death event. ಹೃದಯ ತನ್ನ ಪಂಪಿಂಗ್ ಮಾಡುವುದನ್ನ ನಿಲ್ಲಿಸಿ, ತರತರನೇ ನಡುಗುತ್ತಾ ಕೂರುವುದೇ fibrillation. ಆಗ ಮೆದುಳಿಗೆ/ ಬೇರೆ ಯಾವುದೇ organ ಗೆ ರಕ್ತ ಸಂಚಾರ ಇರುವುದಿಲ್ಲ. Fibrillation ಗೆ ಉತ್ತರ Defibrillation shock ಮಾತ್ರ. ಎದೆ ಒತ್ತಿ CPR ಮಾಡಿದರೂ ಉಪಯೋಗ ಆಗುವುದಿಲ್ಲ. Cardiac arrest ನಲ್ಲಿ ಮಾ ತ್ರ CPR ಖಂಡಿತಾ ಜೀವ ಉಳಿಸಬಲ್ಲದು. ಒಬ್ಬ ವ್ಯಕ್ತಿ ಹಾಗೆ ಕುಸಿದಾಗ, Fibrillation ಆಗುತ್ತಿದೆ ಅಂತ ಗೊತ್ತಾಗುವುದು ECG ಯಿಂದ ಮಾತ್ರ. ಆಂಬುಲೆನ್ಸ್ ನಲ್ಲಿ ECG monitor ಇರುತ್ತದೆ. Shock ಇರುತ್ತದೆ, ಜೀವವನ್ನ ಕೊನೇಪಕ್ಷ ಆಸ್ಪತ್ರೆ ವರೆಗೆ ಹಿಡಿದಿಡಬಹುದು. ಒಬ್ಬ technician ಕೂಡ ಇದನ್ನ ಮಾಡಬಲ್ಲ. ವೈದ್ಯರಾದವರು ಖಂಡಿತಾ ಯಾವುದೇ cardiac emergency ಯಲ್ಲಿ ambulance ನ್ನೇ prefer ಮಾಡುವುದು. There is something called VIP syndrome in medical field. ರೋಗಿ VIP ಆಗಿದ್ದರೆ ವೈದ್ಯರ ಚಿತ್ತ ಸರಿಯಾಗಿ ಕೆಲಸ ಮಾಡದೇ ಚಿಕಿತ್ಸೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇರಬಹುದೆಂದು ಆ ಸಿಂಡ್ರೋಮ್ ಹೇಳುತ್ತದೆ!”

ಹಿರಿಯ ಹೃದಯತಜ್ಞರ ಈ ಅಭಿಪ್ರಾಯದ ಹಿನ್ನೆಲೆಯಲ್ಲಿ ಪುನೀತ್ ಅವರ ವಿಚಾರದಲ್ಲಿ ಆಂಬ್ಯುಲೆನ್ಸ್ ಇಲ್ಲದ್ದು  ಮಹತ್ವದ ವಿಚಾರ ಎನಿಸುತ್ತದೆ ಅಲ್ಲವೇ ? ಆಂಬುಲೆನ್ಸ್‌ ಇದ್ದಿದ್ದರೆ, ತ್ವರಿತವಾಗಿ ಆಸ್ಪತ್ರೆ ತಲುಪಲು ಸಾಧ್ಯವಾಗಿದ್ದರೆ ಅಮೂಲ್ಯ ಜೀವ ಉಳಿಯುತ್ತಿತ್ತು ಅಲ್ಲವೇ ?

ಲೇಖಕರ ಪರಿಚಯ:

ರವಿ ಹಂಜ್‌ ಮೂಲತಃ ದಾವಣಗೆರೆಯವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕಂಫ್ಯೂಟರ್‌ ಅಪ್ಲಿಕೇಶನ್‌ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಹಾವರ್ಡ್‌ ವಿವಿಯಲ್ಲಿ ಅವಶ್ಯಕ ವ್ಯವಸ್ಥಾಪನೆ ಅಧ್ಯಯನ, ಚಿಕಾಗೋದ ಡೆಪೌಲ್‌ ವಿವಿಯಲ್ಲಿ ವೆಬ್‌ ವಾಣಿಜ್ಯ ವಿಷಯ ಅಧ್ಯಯ ಮಾಡಿದ್ದಾರೆ. ಪ್ರಸ್ತುತ ಚಿಕಾಗೋದ ಪ್ರತಿಷ್ಠಿತ ಸಂಸ್ಥೆಯಲ್ಲಿ ವ್ಯವಸ್ಥಾನಾ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದಾರೆ. ಸ್ವತಃ ಕೃತಿಗಳನ್ನು ರಚಿಸಿದ್ದಾರೆ.ಇವುಗಳಲ್ಲಿ ಹುಯೆನ್‌ ತ್ಸಾಂಗ್‌ ಮಹಾಪಯಣ, ಭಾರತ ಒಂದು ಮರುಶೋಧನೆ ಗಮನಾರ್ಹ ಎನಿಸಿಕೊಂಡಿವೆ. ಇವರ ಸ್ಥಾಯಿಗುಣ ಎಂದರೆ ಇದ್ದಿದ್ದನ್ನು ಇದ್ದಹಾಗೆ ಹೇಳುವುದು, ಅದು ಕಟುವಾದ ಭಾಷೆಯಲ್ಲಿ. ಯಾವುದೇ ಪ್ರಮುಖ ಸಂಗತಿ ನಡೆದರೂ ನನಗೇಕೆ ಬಿಡು ಎಂಬ ಜಾಯಮಾನದವರಲ್ಲ. ಈ ಕಾರಣದಿಂದಲೇ ಇವರ ದೇಹ ದೂರದ ಅಮೆರಿಕಾದ ಚಿಕಾಗೋದಲ್ಲಿದ್ದರೂ ಮನಸು ಮಾತ್ರ ಭಾರತದಲ್ಲಿಯೇ ಇದ್ದು ಇಲ್ಲಿಯ ಒಳಿತುಗಳಿಗಾಗಿ ಮಿಡಿಯುತ್ತಿರುತ್ತದೆ ಎಂಬುದು ಖಂಡಿತ ಉತ್ಪ್ರೇಕ್ಷೆಯಲ್ಲ.

Continue Reading
Click to comment

Leave a Reply

Your email address will not be published. Required fields are marked *

Advertisement
ಕರ್ನಾಟಕ5 mins ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ18 mins ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ19 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ36 mins ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ52 mins ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ56 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ1 hour ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು1 hour ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ2 hours ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ2 hours ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಟ್ರೆಂಡಿಂಗ್

Share