Connect with us


      
ದೇಶ

ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 40 ರಿಂದ 42 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ

Vanitha Jain

Published

on

ನವದೆಹಲಿ: ಏಪ್ರಿಲ್ 07 (ಯು.ಎನ್‌.ಐ.) ಮುಂದಿನ 5 ರಿಂದ 6 ದಿನಗಳಲ್ಲಿ ಗರಿಷ್ಠ ತಾಪಮಾನವು 40 ರಿಂದ 42 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ

ಈ ಹಿನ್ನೆಲೆ ದೆಹಲಿ-ಎನ್‌ಸಿಆರ್ ನಲ್ಲಿ ಶಾಖದ ಅಲೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ತಾಪಮಾನವು ಶನಿವಾರದಿಂದ ಸೋಮವಾರದವರೆಗೆ (ಏಪ್ರಿಲ್ 9 ರಿಂದ 11 ರವರೆಗೆ) ಸುಮಾರು 42 ಡಿಗ್ರಿ ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಗುರುವಾರ ಗರಿಷ್ಠ ತಾಪಮಾನವು 40 ಡಿಗ್ರಿಗಳಷ್ಟು ನೆಲೆಸಬಹುದು. ದೆಹಲಿಯಲ್ಲಿ ಕನಿಷ್ಠ ತಾಪಮಾನವು 19.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ, ಈ ಋತುವಿನಲ್ಲಿ ಸಾಮಾನ್ಯವಾಗಿದೆ.

ಏತನ್ಮಧ್ಯೆ, ಗುರುವಾರ ಬೆಳಿಗ್ಗೆ 10 ಗಂಟೆಗೆ ಗಾಳಿಯ ಗುಣಮಟ್ಟ ಸೂಚ್ಯಂಕವು 265 ರಷ್ಟಿದ್ದ ಕಾರಣ ಗಾಳಿಯ ಗುಣಮಟ್ಟವು “ಕಳಪೆ” ವಿಭಾಗದಲ್ಲಿ ನಿಂತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ.

Share