Connect with us


      
ಕರ್ನಾಟಕ

ಮಳೆಗೆ ತತ್ತರಿಸಿದ ಬೆಂಗಳೂರು

UNI Kannada

Published

on

ಬೆಂಗಳೂರು,ನ.5(ಯುಎನ್ಐ) ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರಿಸಿದ್ದು,ಇನ್ನೂ ನಾಲ್ಕು ದಿನ ಮಳೆ ಹೀಗೆ ಮುಂದುವರೆಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿದೆ.

ಬೆಂಗಳೂರಿನ ಯಾವ್ಯಾವ ಏರಿಯಾಗಳಲ್ಲಿ ಅತಿ ಹೆಚ್ಚು ಮಳೆ ಎಲ್ಲೆಲ್ಲಿ ಅಗಿದೆ ಅನ್ನೋದನ್ನ ನೋಡೋದಾದರೆ,

1. ನಾಗರಭಾವಿ – 103.5 ಮಿ.ಮೀ  2 ವಿವಿ ಪುರಂ – 137.0 ಮಿ.ಮೀ 3. ದೊಡ್ಡನಕ್ಕುಂದಿ – 127.5 ಮಿ.ಮೀ 4. ಅಗ್ರಹಾರ ದಾಸರಹಳ್ಳಿ – 40.0 ಮಿ.ಮೀ 5. ,ನಾಯಂಡನ ಹಳ್ಳಿ 87.5 ಮಿ.ಮೀ 6. ಸಂಪಗಿರಾಮನಗರ – 63.0 ಮಿ.ಮೀ 7. ಹಂಪಿ ನಗರ – 120.5 ಮಿ.ಮೀ

ರಾಮಮಂದಿರ ಮೈದಾನ ಜಲಾವೃತವಾಗಿದ್ದು,ಮೈದಾನದಲ್ಲಿ ಪಟಾಕಿ ಮಳಿಗೆಗಳಿಗೆ ಮಳೆಯಾದ ಪರಿಣಾಮ ಮಳೆ ನೀರಿಗೆ ಹಾನಿಯಾದ ಸಾವಿರಾರು ರೂಪಾಯಿ ಮೌಲ್ಯದ ಪಟಾಕಿ ನಷ್ಟವಾಗಿದೆ.

ಜೆಸಿ ರೋಡ್‌ನಲ್ಲಿ ವಾಹನ ದಟ್ಟಣೆ‌ ಹೆಚ್ಚಿದ್ದು,ಊರ್ವಶಿ ಥೀಯೇಟರ್ ರಸ್ತೆಯ ಮೇಲೆ ನಿಂತ ಮಳೆ ನೀರು ನಿಂತಿದ್ದು,ವಾಹನ ದಾಟಿಸಲು ವಾಹನ ಸವಾರರು ಇನ್ನೂ ಪರದಾಡುತ್ತಿದ್ದಾರೆ.ಕಳೆದ ರಾತ್ರಿ ಜೆ.ಸಿ ರಸ್ತೆಯ ಅಕ್ಕಪಕ್ಕದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು,ಟ್ರಾಫಿಕ್ ಜಾಮ್ ಅಲ್ಲಿ ಆ್ಯ‌ಂಬುಲೆನ್ಸ್ ಒಂದು ಸಿಲುಕಿರುವ ಬಗ್ಗೆ ವರದಿಯಾಗಿದೆ.ಇನ್ನು ಮಳೆಗೆ ರಸ್ತೆಗಳು ಕೊಚ್ಚಿಹೋಗಿದ್ದು,ಪೈಪ್ ಲೈನ್ ಕಾಮಗಾರಿ ನಡೆಸಿದ್ದ ರಸ್ತೆಗಳಲ್ಲಿ ಮಾರದ್ದು ಗುಂಡಿಗಳು ನೀರು ತುಂಬಿದ್ದವು.ಬಿಬಿಎಂಪಿ ಎಡವಟ್ಟಿಗೆ ರಸ್ತೆ ಗುಂಡಿಯಲ್ಲಿ ಎರಡು ಕಾರ್ ಗಳು ಹಾಗೇ ನಿಂತಿದ್ದು ಕ್ರೇನ್ ಮೂಲಕ ಸಂಚಾರಿ ಪೊಲೀಸರು ಕಾರನ್ನು ಮೇಲೆತ್ತಿದ್ದಾರೆ ಇದು ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ನಡೆದಿರುವ ಘಟನೆಯಾಗಿದೆ.

ಬೆಂಗಳೂರಿನ ಹಲವೆಡೆ ರಾತ್ರಿ ವೇಳೆಯಲ್ಲಿ ಭಾರಿ ಮಳೆಯಿಂದಾಗಿ ಶಾಂತಿನಗರದ ರಸ್ತೆಗಳ ತುಂಬೆಲ್ಲಾ ನೀರು ತುಂಬಿದ್ದವು.ಶಾಂತಿನಗರದ ಲಾಲ್ ಭಾಗ್ ಡಬಲ್ ರೋಡ್ ನೀರಿನಿಂದಾವೃತ್ತವಾಗಿತ್ತು.
ಹೀಗೆ ಸುರಿದ ಭಾರೀ ಮಳೆಯಿಂದಾಗಿ ನಿಂತಲ್ಲೇ ನಿಂತ ವಾಹನಗಳು ಬೆಳಗಿನ‌ಜಾವದವರೆಗೂ‌ ಕೆಲ ವಾಹನ ಸವಾರರು ರಸ್ತೆ ಹೋಗುಗರು ಮನೆ ಸೇರದೇ ಅಲ್ಲಲ್ಲಿ ಇದ್ದದ್ದು ಕಂಡುಬಂದಿತು.ಜೆ.ಸಿ ರಸ್ತೆಯ ಸುತ್ತ ಮುತ್ತ ಮೋರಿಗಳು ಕಟ್ಟಿಕೊಂಡು ರಸ್ತೆಗಳು ಕೆರೆಯಂತಾಗಿದ್ದವು.ಕಸ್ತೂರ ಬಾ ನಗರದ ಮನೆಯಲ್ಲಿ ಮುಂದುವರೆದ ನೀರು ತೆಗೆಯುವ ಕಾರ್ಯ ಬಹುತೇಕ‌ ಕಡೆ ಸಾಮಾನ್ಯವಾಗಿತ್ತು.ಕೆಲವು ಕುಟುಂಬಗಳು ಮನೆಗಳಲ್ಲಿ ರಾತ್ರಿಯಿಡಿ ನೀರು ತೆಗೆಯುತ್ತಿದ್ದವು.ಡ್ರೈನೇಜ್ ಬ್ಲಾಕ್ ನಿಂದ ಮಳೆಯ ನೀರು ಒಳಗೆ ಹರಿದುಬಮನೆಯವರೆಲ್ಲಾ ಸಂಬಂಧಿಕರ ಮನೆಗೆ ಶಿಫ್ಟ್ ಆಗಿದ್ದಾರೆ.ಚಾಂದ್ ಪಾಷ ಎಂಬುವರು ಇದಕ್ಕೊಂದು ಉದಾಹರಣೆಯಾಗಿ ಕಂಡುಬಂದು ರಾತ್ರಿ ಇಡಿ ಮನೆಯಿಂದ ನೀರು ತೆಗೆಸುವ ಕೆಲಸವನ್ನೇ ಮಾಡುತ್ತಿದ್ದರು.

Share