Published
1 month agoon
By
Vanitha Jainತಿರುವನಂತಪುರಂ: ಮೇ 17 (ಯು.ಎನ್.ಐ.) ಅರೇಬಿಯನ್ ಸಮುದ್ರದಿಂದ ದಕ್ಷಿಣ ಪೆನಿನ್ಸುಲರ್ ಭಾರತಕ್ಕೆ, ಕಡಿಮೆ ಉಷ್ಣವಲಯದ ಮಟ್ಟದಲ್ಲಿ ಬಲವಾದ ಪಶ್ಚಿಮ ಗಾಳಿಯ ಬೀಸುವಿಕೆಯಿಂದಾಗಿ ಮುಂದಿನ ಕೆಲವು ದಿನಗಳಲ್ಲಿ ಕೇರಳ ಮತ್ತು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯು ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕೇರಳದ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ದಕ್ಷಿಣ ರಾಜ್ಯದ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇನ್ನು ಕೊಟ್ಟಾಯಂನಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ ಮತ್ತು ಬೆಳೆ ಇಳುವರಿ ನಾಶವಾಗಿದೆ.
ಏತನ್ಮಧ್ಯೆ, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮುಂಗಾರು ಪೂರ್ವ ಸಿದ್ಧತೆ ಕುರಿತು ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ ಎಲ್ಲಾ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ