Connect with us


      




ದೇಶ

ಭಾರೀ ಮಳೆ: ತಮಿಳುನಾಡಿನ ನಾಲ್ಕು ಜಿಲ್ಲೆಗಳ ಶಾಲೆಗಳಿಗೆ ರಜೆ

Kumara Raitha

Published

on

ಚೆನ್ನೈ: ನವೆಂಬರ್ 08 (ಯು.ಎನ್.ಐ.)ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ತಮಿಳುನಾಡಿನ ನಾಲ್ಕು ಜಿಲ್ಲೆಗಳ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಎರಡು ದಿನಗಳ ಮಳೆ ರಜೆ ಘೋಷಿಸಿದ್ದಾರೆ.

ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್‍ಪೇಟ್ ಜಿಲ್ಲೆಗಳ ಎಲ್ಲಾ ಶಿಕ್ಷಣ ಸಂಸ್ಥೆಗಳು ಸೋಮವಾರ, (ನವೆಂಬರ್ 8) ಮತ್ತು ಮಂಗಳವಾರ, (ನವೆಂಬರ್ 9) ರಂದು ಮುಚ್ಚಲ್ಪಡುತ್ತವೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನವೆಂಬರ್ 6ರ ಶನಿವಾರ ರಾತ್ರಿಯಿಂದ ನವೆಂಬರ್ 7ರ ಭಾನುವಾರದವರೆಗೆ ಭಾರೀ ಮಳೆಯ ನಂತರ ಚೆನ್ನೈ ಮತ್ತು ನೆರೆಹೊರೆಯ ಉಪನಗರಗಳಲ್ಲಿ ಪ್ರವಾಹ ಎದುರಾಗಿದೆ. ಪುರಸಾವಲ್ಕಂ, ತಿಂಡಿವಾಕಂ, ಕೊಳತ್ತೂರ್ ಮತ್ತು ಇತರ ಪ್ರದೇಶಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ ಎಂದು ಸಿಎಂ ಸ್ಟಾಲಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಿಎಂ ಸ್ಟಾಲಿನ್ ಉತ್ತರ ಚೆನ್ನೈನಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಕೊಲತ್ತೂರ್ ಪ್ರದೇಶದಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಮತ್ತು ಆಹಾರವನ್ನು ಹಸ್ತಾಂತರಿಸಿದರು.

ನಂತರ ಮಾತನಾಡಿದ ಸಿಎಂ ಸ್ಟಾಲಿನ್, ತಾವು ಖುದ್ದಾಗಿ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದು, ಜಲಾವೃತಗೊಂಡಿರುವ ವಸತಿ ಪ್ರದೇಶಗಳಲ್ಲಿ ಮಳೆನೀರನ್ನು ಇಂಗಿಸುವಂತಹ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಇದುವರೆಗೆ 50,000 ಆಹಾರ ಪೆÇಟ್ಟಣಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ಪ್ರವಾಹ ಪೀಡಿತ 500 ಪ್ರದೇಶಗಳಿಗೆ ಪಂಪ್‍ಗಳನ್ನು ನಿಯೋಜಿಸಲಾಗಿದೆ ಮತ್ತು ನಗರದಲ್ಲಿ ಆಹಾರ, ವಸತಿ ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸುವ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಎಮದು ಹೇಳಿದ ಅವರು ಚೆನ್ನೈಗೆ ಪ್ರಯಾಣಿಸಲು ಯೋಜಿಸುತ್ತಿರುವವರು ತಮ್ಮ ಪ್ರಯಾಣವನ್ನು ಎರಡರಿಂದ ಮೂರು ದಿನಗಳವರೆಗೆ ಮುಂದೂಡುವಂತೆ ಕೇಳಿಕೊಂಡರು.

ಚೆನ್ನೈ, ಕರೂರ್, ಪುದುಕೊಟ್ಟೈ, ಶಿವಗಂಗೈ, ತಿರುಚ್ಚಿ, ನಾಮಕ್ಕಲ್, ರಾಮನಾಥಪುರಂ, ಮಧುರೈ, ವಿರುಧುನಗರ ಮತ್ತು ಈರೋಡ್ ಜಿಲ್ಲೆಗಳಲ್ಲಿ 200 ಮಿ.ಮೀ ಮಳೆಯಾಗಿದೆ. ಅಗ್ನಿಶಾಮಕ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಮತ್ತು ಗ್ರೇಟರ್ ಚೆನ್ನೈ ಪೆÇಲೀಸರನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‍ಡಿಆರ್‍ಎಫ್) ಎರಡು ಗುಂಪುಗಳ ಪರಿಹಾರ ಕಾರ್ಯಕರ್ತರನ್ನು ಮಧುರೈ ಮತ್ತು ಚೆಂಗಲ್‍ಪೇಟ್ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಇನ್ನೊಂದು ಗುಂಪನ್ನು ತ್ರಿವಲ್ಲೂರು ಜಿಲ್ಲೆಗೆ ಕಳುಹಿಸಲಾಗಿದೆ. ಸಹಾಯಕ್ಕಾಗಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, 1070ಗೆ ಕರೆ ಮಾಡುವ ಮೂಲಕ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.

Share