Connect with us


      
ಕರ್ನಾಟಕ

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಹೈಕೋರ್ಟ್ ಗರಂ

Bindushree Hosuru

Published

on

ಬೆಂಗಳೂರು: ನವೆಂಬರ್ 08 (ಯು.ಎನ್.ಐ) ವಿಕ್ಟೋರಿಯಾ ಆಸ್ಪತ್ತೆಯಲ್ಲಿ ಇದುವರೆಗೂ ಲಿವರ್ ಕಸಿ ವಿಭಾಗ ಆರಂಭಿಸದ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿರುದ್ಧ ಸಿಟ್ಟಾದರು.

ಕೋವಿಡ್ ಹಿನ್ನೆಲೆ ಆಸ್ಪತ್ರೆಯನ್ನು ಸ್ಯಾನಟೈಸ್ ಮಾಡಲು 2 ತಿಂಗಳ ಕಾಲವಕಾಶ ನೀಡಲಾಗಿತ್ತು. ಜೊತೆಗೆ ತುರ್ತಾಗಿ ಲಿವರ್ ಕಸಿ ವಿಭಾಗ ಆರಂಭಿಸಲು‌ ಸೂಚಿಸಲಾಗಿತ್ತು. ಆದರೆ ಘಟಕ ಆರಂಭವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇಂದು ಖುದ್ದು ಹಾಜರಿರಬೇಕೆಂದು ಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಗೆ ಖುದ್ದು ಹಾಜರಾಗಲೂ ಸೂಚಿಸಿದ್ರೂ ಪ್ರಧಾನ ಕಾರ್ಯದರ್ಶಿ ಹಾಜರಾಗಿರಲಿಲ್ಲ. ಇದರಿಂದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಸಿಜೆ ರಿತುರಾಜ್ ಗರಂ ಆದರು. ಕೋರ್ಟ್ ಆದೇಶಗಳನ್ನು ಪಾಲಿಸದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು. ಅಲ್ಲದೇ ಖುದ್ದು ಹಾಜರಾಗುವಂತೆ ಸೂಚಿಸಿದರು.

Share