Connect with us


      
ಕರ್ನಾಟಕ

ಕಬ್ಬನ್ ಪಾರ್ಕ್‌ ಒಳಗೆ ನಾಯಿಗಳ ಪ್ರವೇಶಕ್ಕೆ ಅವಕಾಶ ವಿಚಾರ: ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್​

Bindushree Hosuru

Published

on

ಬೆಂಗಳೂರು: ಡಿ. 09 (ಯುಎನ್ಐ) ಕಬ್ಬನ್ ಪಾರ್ಕ್‌ ಒಳಗೆ ನಾಯಿಗಳ ಪ್ರವೇಶಕ್ಕೆ ಅವಕಾಶ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಗುರುವಾರ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು.

ಕಬ್ಬನ್ ಪಾರ್ಕ್ ಒಳಗೆ ನಾಯಿಗಳನ್ನು ಬಿಡುತ್ತಿರುವುದರಿಂದ ಜನ ಪಾರ್ಕ್ ಒಳಗೆ ಓಡಾಡಲು ಕಷ್ಟವಾಗುತ್ತಿದೆ. ಬೀದಿ ನಾಯಿಗಳು ಪಾರ್ಕ್ ಪ್ರವೇಶ ಮಾಡುತ್ತಿವೆ. ಜನರು ನಾಯಿಗಳಿಗೆ ಆಹಾರ ತಂದು ಹಾಕುತ್ತಾರೆ. ಇದರಿಂದ ಊಟ ಇಲ್ಲದಾಗ ಆ ನಾಯಿಗಳು ಫಿರೋಸಿಯೆಸ್ ಆಗುತ್ತವೆ. ಇದು ಅಪಾಯಕಾರಿ‌.‌‌ ಇನ್ನೂ ಸಾಕು ನಾಯಿಗಳನ್ನು ಮಾಲೀಕರು ಕರೆತರುತ್ತಾರೆ. ಅವುಗಳು ಪಾರ್ಕ್ ಒಳಭಾಗದಲ್ಲಿಯೇ ಮಲ ವಿಸರ್ಜನೆ ಮಾಡುತ್ತಿವೆ.

ಇದರಿಂದ ಪಾರ್ಕ್ ನಲ್ಲಿ ಸಂಚರಿಸಲು ಜನರಿಗೆ ಕಷ್ಟವಾಗುತ್ತಿದೆ. ಹಾಗಾಗಿ ಬಿಬಿಎಂಪಿ ಪಾರ್ಕ್​ ಒಳಗೆ ನಾಯಿಗಳಿಗೆ ಅವಕಾಶ ಮಾಡಿಕೊಡುತ್ತಿರುವುದನ್ನು ತಡೆಯಲು ಸಮಗ್ರವಾದ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬಿಬಿಎಂಪಿ ಕ್ರಮ ಕೈಗೊಳ್ಳದಿದ್ದರೇ, ನ್ಯಾಯಾಲಯವೇ ಕಾಗ್ನಿಜೆನ್ಸ್ ತೆಗೆದುಕೊಂಡು ನೋಟಿಸ್ ಜಾರಿ ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಿತಿರಾಜ್ ಅವಸ್ಥಿ ಯಿಂದ ಬಿಬಿಎಂಪಿಗೆ ಸೂಚನೆ ನೀಡಲಾಗಿದೆ.

Share