Connect with us


      
ಕರ್ನಾಟಕ

‘ಹಿಜಾಬ್ ವಿಚಾರ ಇನ್ನು ಮುಂದೆ ತೆಗೆದುಕೊಂಡು ಹೋಗಬಾರದು” – ಬಿಎಸ್‌ವೈ

Iranna Anchatageri

Published

on

ಬೆಂಗಳೂರು: ಮಾರ್ಚ್ 15 (ಯು.ಎನ್.ಐ.) ಹಿಜಾಬ್ ವಿಚಾರವನ್ನ ಇನ್ನು ಮುಂದೆ ತೆಗೆದುಕೊಂಡು ಹೋಗಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಹಿಜಾಬ್ ಕುರಿತು ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಧರ್ಮಕ್ಕಿಂತ ದೊಡ್ಡದು ಅಂತ ಹೈಕೋರ್ಟ್ ನ ಈ ತೀರ್ಪು ಸಾಬೀತುಪಡಿಸಿದೆ. ಸಂವಿಧಾನದ ಮೇಲೆ ನಂಬಿಕೆ ಇರುವವರು, ಎಲ್ಲರೂ ಉಚ್ಚನ್ಯಾಯಾಲಯದ ತೀರ್ಪು ಗೌರವಿಸಬೇಕು. ಈ ವಿಚಾರವನ್ನ ಇನ್ನು ಮುಂದೆ ತೆಗೆದುಕೊಂಡು ಹೋಗಬಾರದು. ಎಲ್ಲರೂ ಇದನ್ನ ಗೌರವಿಸಿ, ಸ್ವಾಗತಿಸಬೇಕು ಎಂದು ಬಿಎಸ್ ವೈ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಆಯಾ ಶಾಲಾಕಾಲೇಜುಗಳು ಸೂಚಿಸುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ನ್ಯಾಯಾಲಯವು ತೀರ್ಪು ನೀಡಿದ ನಂತರ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಸಮವಸ್ತ್ರದ ವಿಚಾರದಲ್ಲಿ ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ.

ಹಿಂದೆಂದೂ ಶಾಲಾ-ಕಾಲೇಜುಗಳಲ್ಲಿ ಇಂತಹ ವಿವಾದ ಕಂಡುಬಂದಿರಲಿಲ್ಲ. ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಬೇಕೆಂದೇ ಈ ವಿವಾದವನ್ನು ಸೃಷ್ಟಿಸಿದ್ದವು. ನ್ಯಾಯಾಲಯವು ಈ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿ, ಸರಿಯಾದ ತೀರ್ಪು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಅದು ಇಂದು ತೀರ್ಪು ನೀಡಿದೆ’ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಹಿಜಾಬ್ ವಿಚಾರವಾಗಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಪರಿಷತ್ ಸದಸ್ಯ ಸಿ.ಎನ್.ರವಿಕುಮಾರ್ ಹೇಳಿದ್ದಾರೆ. ಕಾಲೇಜುಗಳಲ್ಲಿ ಮತಾಂಧತೆ, ಧರ್ಮದ ಆಚರಣೆಗಳನ್ನ ತರಬಾರದು. ಹಿಜಾಬ್ ಇಸ್ಲಾಂ ಮೂಲಭೂತ ಭಾಗವಲ್ಲ‌ ಎಂದು ತೀರ್ಪು ಬಂದಿದೆ. ಕೆಲವರು ಸುಪ್ರೀಂಕೋರ್ಟ್ ಹೋಗ್ತೀವಿ‌ ಅಂತ ಹೇಳಿದ್ದಾರೆ. ಹಿಜಾಬ್ ಗಿಜಾಬ್ ಬಿಟ್ಟು ಶಿಕ್ಣಣವೇ ಧರ್ಮ ಎಂದು ಸಾರಬೇಕು ಎಂದು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಮನವಿ ಮಾಡುತ್ತೇನೆ. ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬೇಕು. ಒಳ್ಳೆಯ ವಾತಾವಾರಣ ನಿರ್ಮಾಣ ಆಗಬೇಕು. ಇಸ್ಲಾಂ ಧರ್ಮದ ಕೆಲವರು ಗೊಡ್ಡುವಾದವನ್ನ ಮಾಡ್ತಾಯಿದ್ದಾರೆ. ಸುಪ್ರೀಂಗೆ ಹೋಗಬಾರದು‌.. ಇದು ಇಲ್ಲಿಗೆ ಕೊನೆಯಾಗಬೇಕು ಎಂದು ಹೇಳಿದರು.

ಎಲ್ಲರೂ ನ್ಯಾಯಾಲಯದ ತೀರ್ಪನ್ನ ಪಾಲಿಸಬೇಕು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದ್ದಾರೆ. ಮಕ್ಕಳಲ್ಲಿ ರಾಜಕೀಯ ಮನೋಭಾವ ಬೆಳಸಬಾರದು. ಶಾಲಾ, ಕಾಲೇಜು ದೇಗುಲಗಳು ಇದ್ದಂತೆ.. ಅಂತಹ ಜಾಗದಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು. ಬಿಜೆಪಿ, ಕಾಂಗ್ರೆಸ್ ಪ್ರಾಯೋಜಿತ ವಿವಾದ ಎನ್ನುವುದಕ್ಕಿಂತಲೂ ಕೋಮು ಭಾವನೆ ಕೆರಳಿಸಬಾರದು. ಎಲ್ಲರೂ ವಸ್ತ್ರ ನಿಯಮವನ್ನ ಪಾಲಿಸಬೇಕು. ಹೊರಗಡೆ ನಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನ ಅನುಸರಿಸೋಣ. ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ತರಬಾರದು ಎಂದು ಅವರು ಮನವಿ ಮಾಡಿಕೊಂಡರು.

Share