Connect with us


      




ದೇಶ

ಪುದುಚೇರಿಗೆ ತಲುಪಿದ ಕರ್ನಾಟಕ ಹಿಜಾಬ್ ಗಲಾಟೆ!

Iranna Anchatageri

Published

on

ಆರ್ಯಂಕುಪ್ಪಂ: ಫೆಬ್ರವರಿ 09 (ಯು.ಎನ್.ಐ.) ಕರ್ನಾಟಕದ ನಂತರ ಹಿಜಾಬ್ ವಿವಾದದ ಬಿಸಿ ಪುದುಚೇರಿಗೆ ತಲುಪಿದೆ. ಇಲ್ಲಿನ ಅರಿಯಾಂಕುಪ್ಪಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಸ್ಕಾರ್ಫ್ ತೆಗೆಯುವಂತೆ ಹೇಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಬಳಿಕ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ), ತಂಥೈ ಪೆರಿಯಾರ್ ದ್ರಾವಿಡ ಕಳಗಂ ಪ್ರತಿನಿಧಿಗಳು ಹಾಗೂ ಡಿಎಂಕೆ ಪದಾಧಿಕಾರಿಗಳು ಶಾಲೆಗೆ ತಲುಪಿದ್ದಾರೆ. ವಿದ್ಯಾರ್ಥಿನಿ ತರಗತಿಯೊಳಗೆ ಸ್ಕಾರ್ಫ್ ಧರಿಸಲು ಅವಕಾಶ ನೀಡದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ಘಟನೆ ಫೆಬ್ರವರಿ 7ರಂದು ನಡೆದಿದೆ ಎನ್ನಲಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಬಾಲಕಿ ತರಗತಿಯಲ್ಲಿ ಹಿಜಾಬ್ ಧರಿಸಿದ್ದಳು. ಆದರೆ ಈಗ ಅದರ ಬಗ್ಗೆ ಏಕೆ ಪ್ರಶ್ನೆ ಮಾಡಲಾಗುತ್ತಿದೆ ಎಂದು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಆರೋಪಿಸಿದರು. ಫೆಬ್ರವರಿ 4ರ ಶುಕ್ರವಾರದಂದು ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ವಿದ್ಯಾರ್ಥಿನಿ ಹೇಳಿದ್ದಳು. ಮತ್ತೊಂದೆಡೆ, ಶಾಲೆಯ ಕ್ಯಾಂಪಸ್‌ನಲ್ಲಿ ಬಾಲಕಿ ಸ್ಕಾರ್ಫ್ ಧರಿಸುತ್ತಿದ್ದಳು ಆದರೆ ಶುಕ್ರವಾರ ತರಗತಿಯೊಳಗೆ ಹೋದ ಬಳಿಕ ಹಿಜಾಬ್ ಅನ್ನು ಧರಿಸಿದ್ದಳು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಈ ಮಧ್ಯೆ, ಶಾಲೆಯ ಹೊರಗೆ ಪ್ರತಿಭಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಳಿಕ ಪ್ರತಿಭಟನಾಕಾರರು ಶಾಲೆಯ ಆಡಳಿತದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ಘಟನೆ ನಡೆದ ಬಳಿಕ ಶಾಲಾ ಶಿಕ್ಷಣ ನಿರ್ದೇಶನಾಲಯ, ಪುದುಚೇರಿ ಸರ್ಕಾರವು ಅರಿಯಾಂಕುಪ್ಪಂ ಸರ್ಕಾರಿ ಶಾಲೆಯ ಮುಖ್ಯಸ್ಥರನ್ನು ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ.

Share