Connect with us


      




ಅಪರಾಧ

ಮುಸ್ಲಿಂ ಯುವತಿಯೊಂದಿಗಿನ ಪ್ರೇಮ: ಹಿಂದೂ ಯುವಕನ ಹತ್ಯೆ

Vanitha Jain

Published

on

ಬೆಂಗಳೂರು: ಮೇ 27 (ಯು.ಎನ್.ಐ.) ಮುಸ್ಲಿಂ ಯುವತಿಯೊಂದಿಗಿನ ಪ್ರೇಮ ಪ್ರಕರಣ ಸಂಬಂಧ 25 ವರ್ಷದ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಶಹಾಬುದ್ದೀನ್ (19) ಮಹಿಳೆಯ ಸಹೋದರ ಮತ್ತು ಇನ್ನೊಬ್ಬ ನವಾಜ್ (19) ಎಂದು ತಿಳಿದು ಬಂದಿದೆ. ವಾಡಿ ಪಟ್ಟಣದ ಭೀಮಾನಗರ ಬಡಾವಣೆಯ ನಿವಾಸಿ ವಿಜಯ ಕಾಂಬಳೆ ಅವರನ್ನು ಸೋಮವಾರ ರಾತ್ರಿ ರೈಲ್ವೇ ಬ್ರಿಡ್ಜ್ ಬಳಿ ಕೆಲವರ ಗುಂಪು ಅಡ್ಡಗಟ್ಟಿ ಕೊಂದಿದೆ.

ಹಲ್ಲೆ ನಡೆಸುವ ಮುನ್ನ ವಾಗ್ವಾದ ನಡೆದಿದ್ದು, ತದನಂತರ ಹರಿತವಾದ ಆಯುಧಗಳಿಂದ ಇರಿದ ಕಾರಣ ತೀವ್ರ ರಕ್ತಸ್ರಾವವಾಗಿದೆ. ಗಾಯಗೊಂಡ ವಿಜಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಜಯಾ ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಬಯಸಿದ್ದರು. ಆದರೆ ಅವರ ಸಂಬಂಧವನ್ನು ಕುಟುಂಬವು ವಿರೋಧಿಸಿತು. ಆದ ಕಾರಣ ಈ ಹತ್ಯೆ ನಡೆದಿದೆ ಎಂಬ ಅನುಮಾನ ಮೂಡಿದೆ.

Share