Connect with us


      
ವಾಣಿಜ್ಯ

ಈ ವರ್ಷದ ಮೊದಲ ಯುನಿಕಾರ್ನ್ ಆಗಿ ಹೊನಸಾ

UNI Kannada

Published

on

ನವದೆಹಲಿ, ಜ 3(ಯುಎನ್‌ ಐ) – ಮಾಮಾ ಅರ್ಥ್‌ನಂತಹ ಬ್ರಾಂಡ್‌ಗಳ ಅಡಿಯಲ್ಲಿ ವೈಯಕ್ತಿಕ ಸೌಂದರ್ಯ ಉತ್ಪನ್ನಗಳ ಮಾರಾಟ ಮಾಡುವ ಇ-ಕಾಮರ್ಸ್ ಸಂಸ್ಥೆ ಹೊನಾಸಾ ಕನ್ಸ್ಯೂಮರ್ ಈಗ 1.2 ಬಿಲಿಯನ್ ಡಾಲರ್‌ ಮೌಲ್ಯದೊಂದಿಗೆ 52 ಮಿಲಿಯನ್ ಡಾಲರ್‌ ಸಂಗ್ರಹಿಸಿದೆ. ಇದರಿಂದಾಗಿ ಈ ವರ್ಷದ ಯುನಿಕಾರ್ನ್ ಸ್ಥಾನಮಾನ ಪಡೆದ ಮೊದಲ ಸಂಸ್ಥೆಯಾಗಿದೆ. ಸಿಕ್ವೊಯಾ, ಸೋಫಿನಾ ವೆಂಚರ್ಸ್, ಎವಾಲ್ವ್ ಕ್ಯಾಪಿಟಲ್ ಮತ್ತಿತರ ಸಂಸ್ಥೆಗಳು ಈ ಕಂತಿನಲ್ಲಿ ಹೂಡಿಕೆ ಮಾಡಿವೆ. ಸಂಸ್ಥೆ ಈಗಾಗಲೇ ಫೈರ್‌ಸೈಡ್ ವೆಂಚರ್ಸ್, ಸ್ಟೆಲ್ಲಾರಿಸ್ ವೆಂಚರ್ ಪಾರ್ಟ್‌ನರ್ಸ್ ಮುಂತಾದವುಗಳಿಂದ ಹೂಡಿಕೆ ಪಡೆದುಕೊಂಡಿದೆ. ಹೊಸದಾಗಿ ಸಂಗ್ರಹಿಸಿದ ನಿಧಿಯನ್ನು ಪರ್ಸನಲ್ ಕೇರ್ ಬ್ರ್ಯಾಂಡ್‌ಗಳು, ನಾವೀನ್ಯತೆಗಳು, ಪೂರೈಕೆ , ಮಾರುಕಟ್ಟೆ ವ್ಯವಸ್ಥೆ ಮತ್ತಷ್ಟು ವಿಸ್ತರಿಸಲು ಬಳಸಲಾಗುವುದು ಎಂದು ಹೊನಸಾದ ಸಹ ಸಂಸ್ಥಾಪಕ, ಸಿಇಓ ವರುಣ್ ಅಲಗ್ ಹೇಳಿದ್ದಾರೆ.

ಮಾಮಾಅರ್ಥ್‌, ದಿ ಡೆರ್ಮಾ ಸಂಸ್ಥೆಗಳ ಜೊತೆಗೆ ಹೊಸದಾಗಿ ಅಕ್ವಾಲಾಜಿಕಾ ಬ್ರಾಂಡ್ ಹೆಸರಿನಲ್ಲಿ ಸ್ಕಿನ್‌ಕೇರ್ ವಿಭಾಗಕ್ಕೆ ಪ್ರವೇಶಿಸಿದೆ ಎಂದು ಅವರು ವಿವರಿಸಿದ್ದಾರೆ. ಮಾಮಾ ಅರ್ಥ್ ಬ್ರಾಂಡ್‌ನ ಅಡಿಯಲ್ಲಿ 40 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಹೆಡ್ ಕೇರ್, ಸ್ಕಿನ್‌ಕೇರ್ ಹಾಗೂ ಕಾಸ್ಮೆಟಿಕ್ಸ್ ಸೇರಿವೆ. ದಿ ಡರ್ಮಾ ಕಂಪನಿ ಬ್ರಾಂಡ್‌ನ ಅಡಿಯಲ್ಲಿ. ಐದು ವರ್ಷಗಳ ಹಿಂದೆ ಸ್ಥಾಪಿತವಾದ ಹೊನಾಸಾ ದೇಶೀಯವಾಗಿ 1,000 ನಗರಗಳಲ್ಲಿ ಉತ್ಪನ್ನಗಳನ್ನು ಒದಗಿಸುತ್ತದೆ. ಎಂದು ಹೊನಾಸಾದ ಮತ್ತೊಬ್ಬ ಸಹ-ಸಂಸ್ಥಾಪಕ, ಸಿಇ ಓ ಗಜಲ್ ಅಲಗ್ ಹೇಳಿದ್ದಾರೆ.

Share