Connect with us


      
ಗ್ಯಾಜೆಟ್‌

ಮೊದಲ ಮಡಚಬಹುದಾದ ಫೋನ್ ಬಿಡುಗಡೆ ಮಾಡಲು ಸಜ್ಜಾದ ಹಾನರ್ ಕಂಪೆನಿ

Vanitha Jain

Published

on

ದಿನಕ್ಕೊಂದು ಹೊಸ ತಂತ್ರಜ್ಞಾನ, ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುವ ಸ್ಮಾರ್ಟ್ ಫೋನ್ ಕಂಪೆನಿಗಳು ಇದೀಗ ಮಡಚಬಹುದಾದ ಫೋನ್‍ಗಳತ್ತ ತಮ್ಮ ಚಿತ್ತ ನೆಟ್ಟಿದೆ. ಹೌದು ಇದೀಗ ಮಾರುಕಟ್ಟೆಯಲ್ಲಿ ಮಡಚಬಹುದಾದದ ಫೋನುಗಳದ್ದೇ ಹವಾ ಆಗಿದೆ.

ಸ್ಯಾಮ್ ಸಂಗ್ ಕಂಪೆನಿ ಮೊದಲು ಮಡಚಬಹುದಾದ ಫೋನ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಚೀನೀ ಬ್ರಾಂಡ್ ಒಪ್ಪೊ ಸ್ಮಾರ್ಟ್ ಫೋನ್ ಕಂಪೆನಿ ಕೂಡ ಫೈಂಡ್ ಎನ್ ಎಂಬ ಮಡಚುವ ಫೋನನ್ನು ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಿದೆ. ಇದರ ಜೊತೆಗೆ ಹಾನರ್ ಕಂಪೆನಿಉ ಪೈಪೋಟಿ ನಡೆಸಲು ಸಜ್ಜಾಗಿದೆ.
ಹೌದು ಹಾನರ್ ಕಂಪೆನಿಯು ಮೊದಲ ಮಡಚಬಹುದಾದ ಫೋನನ್ನು ಮಾರುಕಟ್ಟೆಯಲ್ಲಿ ರಾರಾಜಿಸುವಂತೆ ಮಾಡಲು ಸಿದ್ಧತೆ ನಡೆಸುತ್ತಿದೆ. ಬ್ರಾಂಡ್‍ನ ಮೊದಲ ಫೋಲ್ಡಬಲ್ ಸ್ಮಾರ್ಟ್‍ಫೋನ್ ‘ಹಾನರ್ ಮ್ಯಾಜಿಕ್ ವಿ’ ಅನ್ನು ಜನವರಿ 10 ರಂದು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಹಾನರ್ ಅಧಿಕೃತವಾಗಿ ಘೋಷಿಸಿದೆ.

ಮುಂಬರುವ ಹಾನರ್ ಫೋನ್ ಸಂವೇದಕಗಳು ಲಂಬವಾಗಿದ್ದು, ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಇರಲಿದೆ. ಹಾನರ್ ಮ್ಯಾಜಿಕ್ ವಿ 8 ಇಂಚಿನ ಮುಖ್ಯ ಪರದೆಯನ್ನು ಎಫ್ ಎಚ್ ಡಿ+ ರೆಸಲ್ಯೂಶನ್ ಜೊತೆಗೆ 108 ಎಂಪಿ ಮುಖ್ಯ ಶೂಟರ್ ಮತ್ತು 4,500ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದೆ.

ಫೋನಿನ ಒಳಗಿನ ಮೇಲಿನ ಬಲ ಮೂಲೆಯಲ್ಲಿ ಪಂಚ್-ಹೋಲ್ ಕಟೌಟ್ ಅನ್ನು ಹೊಂದಿದ್ದು, ಬಾಹ್ಯ ಕವರ್ ಡಿಸ್ಪ್ಲೇ ಕೇಂದ್ರಿತ ಪಂಚ್ ಹೋಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮ್ಯಾಜಿಕ್ ವಿ ನ ಮುಂಭಾಗವು 90Hz ರಿಫ್ರೆಶ್ ದರ, ಒಳ ಪರದೆಯು 120Hz ರಿಫ್ರೆಶ್ ದರ ಹೊಂದಿದೆ.

ದಿನೇ ದಿನೇ ಮಡಚಬಹುದಾದ ಸ್ಮಾರ್ಟ್‍ಫೋನ್ ಗಳ ಜನಪ್ರಿಯತೆ ಹೆಚ್ಚುತ್ತಿವೆ. ಟೆಕ್‍ಎಆರ್‍ಸಿ ಪ್ರಕಾರ, ಫೋಲ್ಡಬಲ್ ಸ್ಮಾರ್ಟ್‍ಫೋನ್ ಗಳು 2021ರಲ್ಲಿ ಭಾರತದಲ್ಲಿ 638 ಪ್ರತಿಶತದಷ್ಟು ಮಾರಾಟಕ್ಕೆ ಸಾಕ್ಷಿಯಾಗಲಿವೆ ಮತ್ತು 2022ರಲ್ಲಿ ದಾಖಲೆಯ ಮೂರು ಲಕ್ಷ ಯುನಿಟ್ ಮಾರಾಟವನ್ನು ಮುಟ್ಟಲಿದೆ

Share