Published
5 months agoon
By
Vanitha Jainಔರಾದಾಬಾದ್, ಡಿಸೆಂಬರ್ 6 (ಯು.ಎನ್.ಐ): ಇಲ್ಲಿನ ವೈಜಾಪುರ ತಹಸಿಲ್ನ ಗೋಯ್ಗಾಂವ್ ಎಂಬ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಮರ್ಯಾದಾ ಹತ್ಯೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಅಕ್ಕನ ತಲೆಯನ್ನು ಕುಡುಗೋಲಿನಿಂದ ಕತ್ತರಿಸಿ, ಸೆಲ್ಫಿ ಕ್ಲಿಕ್ಕಿಸಿ ಮತ್ತು ಗುಂಪುಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ 18 ವರ್ಷದ ಯುವಕ ಮತ್ತು ಆತನ ತಾಯಿಯನ್ನು ಮಹಾರಾಷ್ಟ್ರ ಪೆÇಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸಂಕೇತ್ ಎಸ್. ಮೋಟೆ (18) ಶೋಭಾ ಎಸ್ ಮೋಟೆ(40), ಮೃತ ಸಹೋದರಿಯನ್ನು ಕೀರ್ತಿ (19) ಎಂದು ಗುರುತಿಸಲಾಗಿದೆ. ಇಂತಹ ಭೀಕರ ಹತ್ಯೆಗೈದ ತಾಯಿ ಮತ್ತು ಮಗ ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಮೃತ ಕೀರ್ತಿಯು ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ ತನ್ನ ಪ್ರಿಯಕರ ಥೋರ್ (23) ಎಂಬುವನ ಜೊತೆ ಜೂನ್ 21ರಂದು ಓಡಿಹೋಗಿದ್ದಳು. ಪುಣೆಯ ಆಳಂದಿ ಎಂಬಲ್ಲಿ ವಿವಾಹವಾದ ಇವರಿಬ್ಬರು ಕೆಲವು ದಿನಗಳ ನಂತರ ಊರಿಗೆ ವಾಪಾಸ್ಸಾಗಿದ್ದರು. ಈ ವಿಷಯ ತಿಳಿದ ತಾಯಿ, ಮಗ ಸಂಧಾನದ ನೆಪ ಮಾಡಿಕೊಂಡು ಮಗಳು ಕೀರ್ತಿ ಮನೆಗೆ ಹೋದರು. ನಂತರ ಇವರಿಬ್ಬರಿಗೆ ಟೀ ಮಾಡಲು ಕೀರ್ತಿ ಅಡುಗೆ ಮನೆಗೆ ಹೋದ ವೇಳೆ ಆಕೆಯನ್ನು ಹಿಂಬಾಲಿಸಿ ತಾಯಿ ಆಕೆಯ ಕಾಲನ್ನು ಹಿಡಿದುಕೊಂಡರೆ ಮಗ ಆಕೆಯ ಕತ್ತನ್ನು ಕುಡುಗೋಲಿನಿಂದ ಕತ್ತರಿಸಿಹಾಕಿದ್ದಾರೆ. ಬಳಿಕ ಅವಳ ತಲೆಯನ್ನು ಮನೆಯ ಹೊರಗೆ ಎಸೆದು ಪೊಲೀಸರಿಗೆ ಶರಣಾಗಿದ್ದಾರೆ. ನಂತರ ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ಗೋಯಗಾಂವ್ ಪೊಲೀಸ್ ಪಾಟೀಲ್ (ಪಿಪಿ) ಸೂರ್ಯಕಾಂತ್ ಆರ್. ಮೋಟೆ ಮಾಹಿತಿ ನೀಡಿದರು.
ಸಮಯಪ್ರಜ್ಷೆ ಮೆರೆದು ಯುವಕನ ಪ್ರಾಣ ರಕ್ಷಿಸಿದ ಪೊಲೀಸ್
10, 12ನೇ ತರಗತಿಗೆ ಆಫ್ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಿದ ಮಹಾರಾಷ್ಟ್ರ
ಇಂದಿನಿಂದ ವಿಶ್ವಪ್ರಸಿದ್ಧ ಅಜಂತಾ ಎಲ್ಲೋರಾ ಗುಹೆಗಳು ಪ್ರವಾಸಿಗರಿಗೆ ಪ್ರವೇಶ ಮುಕ್ತ
ವೈನ್ ಮದ್ಯವಲ್ಲ; ರೈತರ ಆದಾಯ ದ್ವಿಗುಣದ ಮೂಲ: ಸಂಜಯ್ ರಾವುತ್
ಮಹಿಳೆಯರ ರಕ್ಷಣೆಗಾಗಿ ಕಾರ್ಯಪ್ರವೃತ್ತವಾಗುತ್ತಿವೆ 91 ನಿರ್ಭಯಾ ಸ್ಕ್ವಾಡ್ ಗಳು
75 ನಿಮಿಷಗಳಲ್ಲಿ 292 ಕಿಲೋಮೀಟರ್ ಕ್ರಮಿಸಿ ಮಹಿಳೆಗೆ ಕೈ ಕಸಿ ಮಾಡಿದ ವೈದ್ಯರು