Published
7 months agoon
By
prathamಬೆಂಗಳೂರು, ಅ 28 (ಯುಎನ್ಐ) ರಾಜಧಾನಿ ಬೆಂಗಳೂರಿನಲ್ಲಿ ಕುದುರೆಗೆ ವಿಷ ಪ್ರಾಷಾಣ ಮಾಡಿ, ಹತ್ಯೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಕುದುರೆ ಮಾಲೀಕ ನೀಡಿದ ದೂರಿನನ್ವಯ ಕೊತ್ತನೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕುದುರೆ ಮಾಲೀಕರಾದ ಸುರೇಖಾ ಪಾಲ್, ಬೆಂಗಳೂರಿನ ಅಶ್ವ ನಿರ್ವಹಣಾ ಕೇಂದ್ರದ ಮೇಲೆ ಈ ಆರೋಪ ಮಾಡಿದ್ದು, ಕುದುರೆಗೆ ವಿಷ ಪ್ರಾಷಾಣ ಮಾಡಿಸಿ ಹತ್ಯೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಾಲೀಕ ಸುರೇಖಾ ಪಾಲ್ ತನ್ನ ಫ್ರೆಂಚ್ ಮನ್ ಹಾಗೂ ವಿಜಯ್ ಚಾಂಪ್ ಹೆಸರಿನ ಎರಡು ಕುದುರೆಗಳನ್ನು ಸಾಕಲು ಯುನೈಟೆಡ್ ರೈಡರ್ ಬ್ರಾನ್ ಫಾರ್ಮ್ ಗೆ ಬಿಟ್ಟಿದ್ದರು. ಫಾರ್ಮ್ ಮಾಲೀಕನ ಯಡವಟ್ಟಿನಿಂದಾಗಿ ಕುದುರೆ ಮೃತ ಪಟ್ಟಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನಲೆ ಕೊತ್ತನೂರು ಪೊಲೀಸ್ ಠಾಣೆಗೆ ತೆರಳಿದ ಮಾಲೀಕ ಸುರೇಖಾ ಪಾಲ್, ಯುನೈಟೆಡ್ ರೈಡರ್ ಬ್ರಾನ್ ಫಾರ್ಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಎಫ್ ಐ ಆರ್ ದಾಖಲಿಸಿಕೊಂಡಿಸಿರುವ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಮುಂಡ್ಕಾ ಬೆಂಕಿ ದುರಂತ; ೨೭ ಸಾವು, ೧೯ ಮಂದಿ ಕಾಣೆ
ಮಧ್ಯ, ಪೂರ್ವ ಯುರೋಪ್ನಲ್ಲಿ ಮಾನವ ಕಳ್ಳಸಾಗಣೆ ಗ್ಯಾಂಗ್ ಪತ್ತೆ
ಕಸ್ಟಡಿ ಸಾವು: 6 ಪೊಲೀಸರ ಬಂಧನ
ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ ಕೇಸ್; ಅಪರಾಧಿಗಳ ಪರ ನಿಲ್ಲುವುದಿಲ್ಲ ಎಂದ ಓವೈಸಿ
ಆನೆಬೇಟೆ ಪ್ರಕರಣಗಳು; ತನಿಖಾ ತಂಡ ರಚಿಸಿದ ಮದ್ರಾಸ್ ಹೈಕೋರ್ಟ್
‘ಘೋಸ್ಟ್ ಗನ್’ಗಳ ನಿಯಂತ್ರಣಕ್ಕೆ ನೂತನ ಎಟಿಎಫ್ ಮುಖ್ಯಸ್ಥರ ನೇಮಕ; ಬಿಡೆನ್ ಕ್ರಮ