Connect with us


      




ಸಿನೆಮಾ

ಪುನೀತ್ ರಾಜ್ ಕುಮಾರ್ ಅಪ್ಪು ಆಗಿದ್ಹೇಗೆ ?

pratham

Published

on

ಬೆಂಗಳೂರು, ಅ 30 (ಯುಎನ್ಐ) ಪುನೀತ್ ನನ್ನು ಕನ್ನಡಿಗರು ಇಷ್ಟ್ಯಾಕೆ ಹಚ್ಚಿಕೊಂಡ್ರು. ಆರು ಕೋಟಿಗೂ ಅಧಿಕ ಜನ್ರ ಹೃದಯದಲ್ಲಿ ಯಾವ ಕಾರಣಕ್ಕೆ ಪುನೀತ್ ಗೂಡು ಕಟ್ಟಿದ. ನಿಶ್ಕಳಂಕ ಕಂಗಳು.. ಅತ್ಯದ್ಭುತ ಸಾಹಸ.. ಸಾಂಸಾರಿಕ ಚಿತ್ರಗಳಿಗೆ ಒತ್ತು.. ಅಶ್ಲಿಲತೆಗೆ ಇಲ್ಲ ಆಸ್ಪದ.. ಅಮೋಘ ಡ್ಯಾನ್ಸ್.. ಜನ್ರ ಸಂಕಷ್ಟಕ್ಕೆ ಮಿಡಿಯುವ ನಟ.. ಒಂದೆ ಎರಡೇ ಆತನ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನೆ.

ಅಪ್ಪಾಜಿ ಅಂತಾನೇ ಗುರಿತಿಸಿಕೊಳ್ಳುವ ರಾಜ್ ಕುಮಾರ್ ಕಿರಿಯ ಪುತ್ರ ಪುನೀತ್, ಥೇಟ್ ಆತನ ತಂದೆ ಹಾಗೆ.. ಅಪ್ಪಾಜಿಯವರು ಹಾಕಿಕೊಟ್ಟ ದಾರಿಯಲ್ಲಿ ನಡೆದಿದ್ದರು. ಪುಟ್ಟ ಪುಟ್ಟ ಮಕ್ಕಳು ಆತನ ಡ್ಯಾನ್ಸ್ ಇಷ್ಟಪಟ್ಟರೆ.. ಹಿರಿಯರು, ವೃದ್ಧರು ಆತನ ಕಲೆಗೆ ಮನಸೋಲುತ್ತಿದ್ದರು. ಇನ್ನೂ ಮಹಿಳೆಯರ ಪಾಲಿಗಂತೂ ಈ ಪುನೀತ.. ಪ್ರೀತಿಯ ಕೃಷ್ಣನಾಗುತ್ತಿದ್ದ. ಆದ್ರೆ, ಈಗೆಲ್ಲ ಅದು ನೆನಪು ಮಾತ್ರ. ಈ ನಿಷ್ಕಳಂಕ ನಟ ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ ಹೊರತು ಮಾನಸಿಕವಾಗಿ ಅಲ್ಲ.. ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರನ್ನು ಬಾಲ ನಟನಾಗಿ ತೆರೆ ಮೇಲೆ ಕಂಡಿದ್ದೇವೆ. ಆದರೆ ಯುವಕರಿಗೆ, ಕಲಾ ಪ್ರೇಮಿಗಳಿಗೆ ಹುಚ್ಚು ಹಿಡಿಸಿದ ಚಿತ್ರ “ಅಪ್ಪು”. 2002ರಲ್ಲಿ ಪಕ್ಕಾ ಮಾಸ್ ಕಥೆಯೊಂದಿಗೆ ಪವರ್ ಸ್ಟಾರ್ ಬೆಳ್ಳಿ ತೆರೆಗೆ ಅಪ್ಪು ಹೆಸರಲ್ಲಿ ಕಾಣಿಸಿಕೊಂಡರು. ನಿರ್ದೇಶಕ ಪುರಿ ಜಗನ್ನಾಥ್ ಅವರ ಕಾಣಿಕೆಯಾಗಿ “ಅಪ್ಪು” ಚಿತ್ರಮಂದಿರಗಳಲ್ಲಿ 200 ದಿನ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಪುನೀತ್ ಅವರ ಪವರ್ ಫುಲ್ ನೋಟ.. ನಗು.. ಸಂಭಾಷಣೆ, ಡ್ಯಾನ್ಸ್.. ಸಂಗೀತ, ರಾಜಕುಮಾರ್ ಅವರ ಕಂಠಸಿರಿ ಚಿತ್ರರಸಿಕರಿಗೆ ಹುಚ್ಚು ಹಿಡಿಸಿತು. ಯುವಕರಂತೂ ಅಪ್ಪುನನ್ನು ಕಲಾಭಿಮಾನಿಗಳಾಗಿ ಆರಾಧಿಸಲು ಆರಂಭಿಸಿದರು. ಈ ಚಿತ್ರದ ಮೂಲಕವೇ ಪುನೀತ್, ಅಪ್ಪು ಆಗಿದ್ದ. ಅಪ್ಪು ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಬಳಗವನ್ನು ಹಿಗ್ಗಿಸಿತು. ಪುನೀತ್ ಅವರ ಒಂದೇ ಒಂದು ಹಿಟ್ ಚಿತ್ರಕ್ಕೆ ಗಾಂಧಿನಗರ ಗರಬಡಿದಂತಾಗಿತ್ತು.

ಲೇಖನ: ಈರಣ್ಣ ಅಂಚಟಗೇರಿ

Share