Connect with us


      
ಸಿನೆಮಾ

ಕತ್ರಿನಾ ಕೈಫ್ ಧರಿಸಿರುವ ನಿಶ್ಚಿತಾರ್ಥದ ಉಂಗುರ ಬೆಲೆ ಕೇಳಿದ್ರೆ ಹೌಹಾರ್ತೀರಾ! ಅಷ್ಟೊಂದು ದುಬಾರಿ

Vanitha Jain

Published

on

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್

ಮುಂಬೈ, ಡಿಸೆಂಬರ್ 11(ಯು.ಎನ್.ಐ) ಬಾಲಿವುಡ್ ಸ್ಟಾರ್‍ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9ಕ್ಕೆ ರಾಜಸ್ಥಾನದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆಯಾಗಿ ಎರಡು ದಿನಗಳು ಕಳೆದರೂ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.

ಇದೀಗ ಕತ್ರಿನಾ ಕೈಫ್ ಧರಿಸಿರುವ ಉಂಗುರ ಭಾರೀ ಚರ್ಚೆಯಲ್ಲಿದೆ. ಹೌದು ಕತ್ರಿನಾ ಅವರು ಬೆರಳಿಗೆ ಹಾಕಿಕೊಂಡಿರುವ ಪ್ಲಾಟಿನಂನ ಟಿಫಾನಿ ಸೋಲೆಸ್ಟ್ ನಿಶ್ಚಿತಾರ್ಥದ ಉಂಗುರದ ಬೆಲೆ ಕೇಳಿದರೆ ಹೌಹಾರುವುದು ಮಾತ್ರ ಗ್ಯಾರಂಟಿ. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಈ ವಿಚಾರವೇ ಹರಿದಾಡುತ್ತಿದೆ.

ಕತ್ರಿನಾ ಕೈಫ್ ಕೈಯಲ್ಲಿನ ಉಂಗುರದ ಬೆಲೆ ಬರೋಬ್ಬರಿ 7.5 ಲಕ್ಷ. ಎ ಫ್ಯಾಶನ್ ಆಸ್ ಡೈರಿಸ್ ಕತ್ರಿನಾ ಮತ್ತು ವಿಕ್ಕಿ ಹಾಕಿರುವ ಪ್ಲಾಟಿನಂ ಉಂಗುರ ಕಂಪೆನಿ ಟಿಫಾನಿ ಆ್ಯಂಡ್ ಕೋ. ವಿಕ್ಕಿ ಕೌಶಲ್ ಪ್ಲಾಟಿನಂನಲ್ಲಿ ಟಿಫಾನಿ ಕ್ಲಾಸಿಕ್ ವೆಡ್ಡಿಂಗ್ ಬ್ಯಾಂಡ್ ರಿಂಗ್ ಅನ್ನು ಧರಿಸಿದ್ದರೆ, ವಧು ಕತ್ರಿನಾ ಕೈಫ್ ಪ್ಲಾಟಿನಂನಲ್ಲಿ ಟಿಫಾನಿ ಸೊಲೆಸ್ಟೆ ನಿಶ್ಚಿತಾರ್ಥದ ಉಂಗುರವನ್ನು ಧರಿಸಿದ್ದಾರೆ. ಎಂದು ಹೇಳಿದೆ.

ಕತ್ರಿನಾ ಕೈಫ್ ಪ್ಲಾಟಿನಂ ನಿಶ್ಚಿತಾರ್ಥದ ಉಂಗುರದ ಮಧ್ಯದಲ್ಲಿ ಬೃಹತ್ ಟಾಂಜಾನೈಟ್ ಕಲ್ಲು ಇದ್ದು ಅದರ ಸುತ್ತ ವಜ್ರಗಳಿಂದ ಆವೃತವಾಗಿದೆ. ಟಾಂಜಾನೈಟ್ ಒಂದು ಅಪರೂಪದ ರತ್ನ. ಇದು ಅತ್ಯಂತ ದುಬಾರಿ ಆಭರಣಗಳಲ್ಲಿ ಒಂದು. ಇದು ವಿಭಿನ್ನ ನೀಲಿ ಬಣ್ಣದ ನೈಸರ್ಗಿಕ ರತ್ನ ಮತ್ತು ಬಹಳಷ್ಟು ಮೌಲ್ಯವನ್ನು ಹೊಂದಿದೆ. ಅದರ ರಾಯಲ್ ಬಣ್ಣ ಮತ್ತು ಗಡಸುತನದಿಂದಾಗಿ, ರತ್ನವು ಹೆಚ್ಚು ಅಪೇಕ್ಷಣೀಯ ರತ್ನ ಎಂದೆನಿಸಿಕೊಂಡಿದೆ.

ಮದುವೆಯ ಖುಷಿಯಲ್ಲಿರುವ ಜೋಡಿ ಮುಂಬೈನಲ್ಲಿ ಔತಣಕೂಟ ಏರ್ಪಡಿಸುವ ಯೋಚನೆಯಲ್ಲಿದೆ. ಈ ಮುದ್ದಾದ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Share