Connect with us


      
ಕರ್ನಾಟಕ

“ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಾದಯಾತ್ರೆ ಎಷ್ಟರ ಮಟ್ಟಿಗೆ ಸರಿ”

Iranna Anchatageri

Published

on

ಬೆಂಗಳೂರು : ಜನೆವರಿ 08, (ಯು.ಎನ್.ಐ) ರಾಜ್ಯ ಕೋವಿಡ್ ಭೀತಿಯಲ್ಲಿರುವಾಗ ಕಾಂಗ್ರೆಸ್ನವರು 25 ಸಾವಿರ ಜನರನ್ನು ಕರೆದುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಹಕ್ಕಿದೆ. ಆದ್ರೆ ಸಮಯ ಸಂದರ್ಭದಲ್ಲಿ ನೋಡಿ ಹೋರಾಟ ಮಾಡಬೇಕಾಗುತ್ತೆ. 25 ಸಾವಿರ ಜನರನ್ನ ಕರೆದು ಹೋರಾಟ ಮಾಡ್ತೀವಿ ಅಂತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ. ಸ್ವಲ್ಪ ಅಲೋಚನೆ ಮಾಡಬೇಕು ಎಂದರು.

ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಪಾದಯಾತ್ರೆ”

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಕೆಲಸ ಮಾಡಲಿಲ್ಲ. ಅವರು ಯೋಜನೆ ಅನುಷ್ಠಾನ ತರೋಕೆ ಯಾವ ಕೆಲಸ ಮಾಡಲಿಲ್ಲ. ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಅಧಿಕಾರದಲ್ಲಿಲ್ಲ ಈಗ ಹೋರಾಟ ಮಾಡ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಓಟ್ ಬ್ಯಾಂಕ್ ಗಾಗಿ ಹೋರಾಟ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡ್ತೀನಿ. ಕೋವಿಡ್ ಹೆಚ್ಚಳವಾಗ್ತಿರುವ ಸಮಯದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿ ಹೋರಾಟ ಮಾಡೋದು ಎಷ್ಟು ಸರಿ ಎಂದು ಸಚಿವರು ಪ್ರಶ್ನೆ ಮಾಡಿದರು.

ಕರ್ನಾಟಕದ ಯೋಜನೆಗಳಿಗೆ ಪ್ರತಿಬಾರಿ ಅಣ್ಣಾಮಲೈ ವಿರೋಧ ಮಾಡ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ಅಣ್ಣಾಮಲೈ ಚುನಾಯಿತ ಪ್ರತಿನಿಧಿಯಲ್ಲ. ಪಕ್ಷದ ಅಧ್ಯಕ್ಷರು ಅಷ್ಟೇ ಅವರು ಸರ್ಕಾರದ ಭಾಗಿಯಲ್ಲ. ಸರ್ಕಾರದ ಭಾಗಿಯಲ್ಲಿರೋದು ಕಾಂಗ್ರೆಸ್ ನವರು. ವಿನಾಕಾರಣ ಹಂಚಿಕೆಯಾದ ನೀರಿನ ಬಗ್ಗೆ ಖ್ಯಾತೆ ತಗೆಯಬೇಡಿ ಅಂತ ಅವರ ಪಕ್ಷದ ಶಾಸಕರಿಗೆ ಹೇಳಲಿ. ಅದ್ರ ಮೂಲಕ ರಾಜ್ಯದ ಜನರಿಗೆ ಉಪಕಾರವಾಗಲಿ ಎಂದರು.

ನಾವು ಏನ್ ಮಾಡಿಲ್ಲ ಅಂತ ಹೇಳೋದು ಸರಿಯಲ್ಲ

ಬಿಜೆಪಿಯವರು ಏನೂ ಮಾಡಿಲ್ಲ ಎಂದು ಕಾಂಗ್ರೆಸ್ನವರು ಆರೋಪ ಮಾಡುತ್ತಿದ್ದಾರೆ. ಆದರೆ ನಾವು ಲೀಗಲ್ ಟೀಂ ಜೊತೆ ಸಂಪರ್ಕದಲ್ಲಿದ್ದು ಕಾನೂನು ಹೋರಾಟ ಮಾಡ್ತಿದ್ದೇವೆ. ಕೇಂದ್ರ ಜಲಶಕ್ತಿ ಮಂತ್ರಿ ಜೊತೆ ಚರ್ಚೆ ಮಾಡಿ ಕ್ಲಿಯರ್ ಮಾಡಿಸಲು ಪ್ರಯತ್ನ ಮಾಡ್ತಿದ್ದೇವೆ. ಅಲ್ದೇ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಗೂ ಸಹ ಪ್ರಯತ್ನ ಪಡುತ್ತಿದ್ದೇವೆ. ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಿದೆ. ನಾವು ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿ ಎದರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದ್ದೇವೆ.

ವೀಕೆಂಡ್ ಕರ್ಪ್ಯೂ ಗೆ ಸಾರ್ವಜನಿಕರು ವಿರೋಧ

ರಾಜ್ಯದಲ್ಲಿ ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ಗೆ ಜನರು ಸಹಕರಿಸಬೇಕು. ಇಡೀ ವಿಶ್ವದದಲ್ಲಿ ಕೋವಿಡ್ ನಿಂದ ಸಾವು ನೋವು ಸಂಭವಿಸಿದೆ. ರಾಜ್ಯದಲ್ಲೂ ಸಮಸ್ಯೆ ಆಗಿತ್ತು. ಮತ್ತೆ ಆ ಸಮಸ್ಯೆ ಆಗಬಾರೆದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಏನ್ ಕ್ರಮ ತಗೆದುಕೊಳ್ಳಬೇಕೋ ಅದನ್ನ ನಾವು ತಗೆದುಕೊಂಡಿದ್ದೇವೆ. ಜನರ ರಕ್ಷಣೆ ಮಾಡೋದು ಕೋವಿಡ್ ನಿಯಂತ್ರಣ ಮಾಡೋದು ಸರ್ಕಾರದ ಜವಾಬ್ದಾರಿ ಆಗಿದೆ ಎಂದು ಸಚಿವರು ತಿಳಿಸಿದರು.

Share