Published
5 months agoon
By
Vanitha Jainಹೈದರಾಬಾದ್, ಡಿಸೆಂಬರ್ 10 (ಯು.ಎನ್.ಐ) ಗಂಡ ಹೆಂಡತಿ ನಡುವೆ ಅನುಮಾನ ಇರಕೂಡದೂ, ಹಾಗೇನಾದರು ಇದ್ದರೇ ಪ್ರತಿ ವಿಷಯದಲ್ಲೂ ಗಂಡ ಹೆಂಡತಿ ಜಗಳವಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ,ಅಷ್ಟಕ್ಕೆ ನಿಲ್ಲದೆ ಕೊಲೆ ಮಾಡುವ ಹಂತಕ್ಕೂ ದಾರಿ ಮಾಡಿಕೊಡುತ್ತದೆ.
ಇದೇ ವಿಚಾರವಾಗಿ ಹೈದರಾಬಾದಿನ ರಾಜೇಂದ್ರ ನಗರ ಇಂತಹದ್ದೇ ಘಟನೆಗೆ ಸಾಕ್ಷಿಯಾಗಿದೆ, ಹೆಂಡತಿಯ ಮೇಲೆ ಅನುಮಾನಗೊಂಡ ಗಂಡ ರಾತ್ರಿ ನಿದ್ರಿಸುವ ಸಮಯದಲ್ಲಿ ಅತಿ ಅಮಾನುಷವಾಗಿ ಕೊಂದು ದೇಹದಿಂದ ತಲೆಯನ್ನು ಬೇರ್ಪಡಿಸಿ ತುಂಡರಿಸಿದ ತಲೆಯೊಂದಿಗೆ ಪಕ್ಕದ ಪೊಲೀಸ್ ಸ್ಟೇಷನ್ ಗೆ ಹೋಗಿ ಶರಣಾಗಿದ್ದಾನೆ.
ಘಟನೆ ಹಿನ್ನೆಲೆ:
14 ವರ್ಷಗಳ ಹಿಂದೆ ಸಮ್ರಿನ್ ಬೇಗಂ ಎನ್ನುವ ಯುವತಿಯನ್ನು ಫರ್ವೇಜ್ ವಿವಾಹವಾಗಿದ್ದನು. ಆದರೆ ಗಂಡನ ಹಿಂಸೆ ತಾಳಲಾಗದೆ ಈ ಮೊದಲೇ ವಿಚ್ಚೇದನೆ ಪಡೆದು ಬೇರೆಯಾಗಿದ್ದರು. ಈ ನಡುವೆ ಕಳೆದ ವರ್ಷವೇ ಹೆಂಡತಿಗೆ ತಿಳಿಹೇಳಿ ಮತ್ತೆ ಇಬ್ಬರೂ ಬಾಳಬೇಕೆಂದು ಪುನಃ ಮದುವೆ ಮಾಡಿಕೊಂಡಿದ್ದರು.
ಅಂದಿನಿಂದಲೇ ಹೆಂಡತಿ ಮೇಲೆ ಅನುಮಾನ ಶುರುವಾಗಿತ್ತು. ಇದೇ ವಿಚಾರವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದರೆ ಇಂದು ಬೆಳ್ಳಂಬೆಳಗ್ಗೆ 4ಗಂಟೆಗೆ ಮನೆಗೆ ಹೋದ ಫರ್ವೇಜ್ ಹೆಂಡತಿ ನಿದ್ರೆಯಲ್ಲಿದ್ದ ವೇಳೆ ಕತ್ತಿಯಿಂದ ದಾಳಿ ಮಾಡಿದ್ದಾನೆ. ಆದರೂ ಆತನ ಕೋಪತೀರದೆ ಆಕೆಯ ದೇಹದಿಂದ ತಲೆಯನ್ನು ಬೇರ್ಪಡಿಸಿ ಪಕ್ಕದಲ್ಲೆ ಇದ್ದ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ವಿಷಯ ತಿಳಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ವಿಚಾರಣೆಯಲ್ಲಿ ಪೊಲೀಸರಿಗೆ ಹೆಂಡತಿ ಮೇಲೆ ಅನುಮಾನದಿಂದ ಈ ರೀತಿ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಸ್ಥಳವನ್ನು ಬಂದ್ ಮಾಡಿ: ಕೋರ್ಟ್ ಆದೇಶ
ಜ್ಞಾನವಾಪಿ ಮಸೀದಿಯ ಕೊಠಡಿಯಲ್ಲಿ ಶಿವಲಿಂಗ ಪತ್ತೆ: ವಿಎಚ್ಪಿ ಸಂತಸ
ಜೆಡಿಯು ಶಾಸಕ ನೃತ್ಯ ; ಪಕ್ಷದ ಎಚ್ಚರಿಕೆ
1402 ವರ್ಷಗಳ ನಂತರ ವೈಶಾಖ ಪೂರ್ಣಿಮೆಯಂದು ಪೂರ್ಣ ಚಂದ್ರಗ್ರಹಣ
ಕೇರಳದಲ್ಲಿ ಟ್ವೆಂಟಿ-20 ಜೊತೆ ಎಎಪಿ ರಾಜಕೀಯ ಮೈತ್ರಿ!
ಕೇರಳ ಮಳೆ ಎಚ್ಚರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ