Published
6 months agoon
By
Vanitha Jainಹೈದರಾಬಾದ್, ಡಿಸೆಂಬರ್ 6 (ಯು.ಎನ್.ಐ): ಚಾಲನಾ ಪರವಾನಗಿ ಪಡೆದ ದೇಶದ ಮೊದಲ ಕುಬ್ಜ ಎಂಬ ಹಿರಿಮೆಗೆ ಹೈದರಾಬಾದಿನ ಗಟ್ಟಿಪಲ್ಲಿಯ ಶಿವಪಾಲ್ ಎಂಬುವವರು ಪಾತ್ರರಾಗಿದ್ದಾರೆ.
ಮೂರು ಅಡಿ ಎತ್ತರವಿರುವ ಶಿವಪಾಲ್ ವಯಸ್ಸು 42. ಇವರು ತಮ್ಮ ಜಿಲ್ಲೆಯ ಕರೀಂನಗರದಲ್ಲಿ 2004ರಲ್ಲಿ ಪದವಿಯನ್ನೂ ಪೂರ್ಣಗೊಳಿಸಿದ್ದಾರೆ.
ಎತ್ತರದ ಕಾರಣದಿಂದ ತುಂಬಾ ಅವಮಾನ ಎದುರಿಸಿದರೂ ಶಿವಪಾಲ್ ಇವೆಲ್ಲಾವನ್ನು ಮೀರಿ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ನಾಮನಿರ್ದೇಶನಗೊಂಡಿದ್ದಾರೆ. ಜೊತೆಗೆ ಅನೇಕ ಜನರಿಗೆ ಡ್ರೈವಿಂಗ್ ತರಬೇತಿಯನ್ನು ನೀಡುತ್ತಿದ್ದು, ಮುಮದಿನ ವರ್ಷ ತಮ್ಮ ಸ್ವಂತ ಡ್ರೈವಿಂಗ್ ಶಾಲೆ ಆರಂಭಿಸುವ ಆಲೋಚನೆಯಲ್ಲಿದ್ದಾರೆ.
2000ರಲ್ಲಿ ಹೈದರಾಬಾದಿಗೆ ಉದ್ಯೋಗದ ನಿಮ್ಮಿತ್ತ ಬಂದ ಶಿವಪಾಲ್ ಆರಂಭದಲ್ಲಿ ಚಲನಚಿತ್ರ ಮತ್ತು ದೈನಂದಿನ ಸಾಬೂನು ಜಾಹೀರಾತು ಕಂಪೆನಿಯಲ್ಲಿ ಕೆಲಸ ಮಾಡಿದರು. ಇದೀಗ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಂಗವಿಕಲ ಎಂಬ ಕಾರಣಕ್ಕೆ ಜನರು ನನಗೆ ಕೆಲಸ ನೀಡುತ್ತಿರಲಿಲ್ಲ. ನಾನು ಕ್ಯಾಬ್ ಗಳನ್ನು ಬುಕ್ ಮಾಡಿದಾಗ, ಅವರು ರೈಡ್ ಅನ್ನು ರದ್ದುಗೊಳಿಸುತ್ತಿದ್ದರು. ಪತ್ನಿ ಜೊತೆ ಹೊರಗೆ ಹೋದಾಗಲೂ ಸಾಕಷ್ಟು ಅವಮಾನಗಳನ್ನು ಎದುರಿಸಿದೆ. ಆಗ ನಾನು ಸ್ವಂತ ಕಾರು ಖರೀದಿಸಲು, ಡ್ರೈವಿಂಗ್ ಕಲಿಯಲು ಯೊಚಿಸಿದೆ. ಕೆಲವೊಂದು ವಿಡಿಯೋಗಳ ಮೂಲಕ ಕಾರಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ಸ್ನೇಹಿತನ ಸಹಾಯದಿಂದ ಕಾರು ಚಲಾಯಿಸಲು ಕಲಿತೆ. ತದನಂತರ ಹಲವು ಸವಾಲುಗಳನ್ನು ಕೊನೆಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅಧಿಕಾರಿಯೊಬ್ಬರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾರು ಚಲಾಯಿಸಿ ಕೊನೆಗೂ ಪರವಾನಿಗೆ ಪಡೆದುಕೊಂಡೆ ಎಂದು ವಿವರಿಸಿದರು.
“ಪ್ರತಿಯೊಬ್ಬ ವ್ಯಕ್ತಿಗಳು ಒಂದಲ್ಲಾ ಒಂದು ದೋಷಗಳನ್ನು ಹೊಂದಿದ್ದಾರೆ, ಆದರೆ ನಿಮ್ಮಲ್ಲಿನ ಪ್ರತಿಭೆಯನ್ನು ಕಂಡುಹಿಡಿಯುವುದು ಮತ್ತು ಅವುಗಳನ್ನು ಸಾಧಿಸುವುದು ಮುಖ್ಯ ಎನ್ನುತ್ತಾರೆ ಶಿವಪಾಲ್.
ಟಿಎಸ್ ಆರ್ಟಿಸಿ ಎಂಜಿಬಿಎಸ್ ನಲ್ಲಿ ಪ್ರಯಾಣಿಕರಿಗೆ ಶೌಚಾಲಯ ಬಳಕೆ ಉಚಿತ
ಅಗ್ನಿ ದುರಂತ: ದುಃಖ ವ್ಯಕ್ತಪಡಿಸಿದ ಮೋದಿ 2 ಲಕ್ಷ ಪರಿಹಾರ ಘೋಷಣೆ
ಅಗ್ನಿ ಅವಘಡ: 5 ಲಕ್ಷ ರೂ. ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ
ದೇಶಕ್ಕೆ ಬೇಕಾಗಿರುವುದು ಕಾಶ್ಮೀರಿ ಫೈಲ್ಸ್ ಅಲ್ಲ ಡೆವಲಪ್ಮೆಂಟ್ ಫೈಲ್ಸ್: ಕೆಸಿಆರ್
ಯುದ್ದ ಕೊನೆಯಾಗಲಿ ಎಂದು ಹೈದರಬಾದ್ ನಲ್ಲಿ ಉಕ್ರೇನ್ ವಧು ಜೊತೆ ಹೈದರಬಾದ್ ವರನ ಮದುವೆ
ಹೈದರಾಬಾದ್ ಎರಡನೇ ಅತ್ಯಂತ ದುಬಾರಿ ವಸತಿ ಮಾರುಕಟ್ಟೆ!