Connect with us


      




ರಾಜಕೀಯ

ಕ್ಷೇತ್ರದ ಜನ ಹೇಳಿದರೆ ನಾನು ಬಾವಿಗೆ ಬೀಳುವುದಕ್ಕೂ ಸಿದ್ಧ

UNI Kannada

Published

on

MP RENUKACHARYA

ಬೆಂಗಳೂರು,ಜನವರಿ 11(ಯು.ಎನ್.ಐ) ಕ್ಷೇತ್ರದ ಜನರು ಹೇಳಿದರೆ ಬಾವಿಗೆ ಬೀಳುವುದಕ್ಕೂ ಸಿದ್ಧ. ನನ್ನ ಕ್ಷೇತ್ರದ ಜನರು ಹೇಳಿದ್ದನ್ನು ಮಾಡಲು ಸಿದ್ಧ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ,ಕರ್ಫ್ಯೂ ಸಂದರ್ಭದಲ್ಲಿ ನಿಯಮ‌ ಮೀರಿ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಗ್ಗೆ ಸ್ಪಷ್ಟೀಕರಣ ನೀಡಿದರು.

ಈ ಕಾರ್ಯಕ್ರಮ ದಿಢೀರ್ ಆಗಿದ್ದಲ್ಲ, 20ದಿನಗಳ ಹಿಂದೆ ಆಯೋಜನೆ ಮಾಡಿದ್ದಾಗಿತ್ತು.ಕರ್ಫ್ಯೂ ಇದ್ದಿದ್ದರಿಂದ ಕಾರ್ಯಕ್ರಮ ಮುಂದೂಡಬೇಕಾಗಿತ್ತು.ಕಾರ್ಯಕ್ರಮ ಮುಂದೂಡಿ ಎಂದು ಹೇಳಿದ್ದರೂ ಯುವಕರು ಕೇಳಲಿಲ್ಲ

ನಾಡಿನ ಜನತೆ, ಪಕ್ಷದ ಮುಖಂಡರು ಎಲ್ಲರೂ ಹೇಳಿದ್ದರು.ಒಳ್ಳೆಯ ಕೆಲಸಗಳೆಲ್ಲ ಹೊಳೆಯಲ್ಲಿ ಹೊಮ ಮಾಡಿದಂತಾಗತ್ತದೆ.ಹೀಗಾಗಿ ನನ್ನ ತಪ್ಪಿನ ಅರಿವು ಆಗಿ ಕ್ಷಮೆ ಕೇಳಿರುವುದಾಗಿ ಎಂ.ಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ರಾಜಕಾರಣ ಮಾಡುವ ಸಂದರ್ಭದಲ್ಲಿ ನಾನೂ ರಾಜಕಾರಣ ಮಾಡುತ್ತೇನೆ.ಸರ್ಕಾರ ಬೇಕಿದ್ದರೆ ನನ್ನ ಮೇಲೂ ಕೇಸ್ ಹಾಕಲಿ.ನನ್ನ ಮೇಲೆ ಕೇಸ್ ಹಾಕಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ.ನನ್ನಿಂದ ಸರ್ಕಾರಕ್ಕೂ ಪಕ್ಷಕ್ಕೂ ಮುಜುಗರ ಆಗುವುದು ಬೇಡ.ಹೊನ್ನಾಳಿ ಜನ ನನ್ನನ್ನು ಹೊನ್ನಾಳಿ ಹುಲಿ ಎಂದು ಕರೆಯುತ್ತಾರೆ. ನಿಯಮ ಉಲ್ಲಂಘಿಸಿದ್ದಕ್ಕೆ ಪನನ್ನ ಮೇಲೆ ಗೃಹ ಸಚಿವರು ಕೇಸ್ ಹಾಕಿಸಲಿ ಎಂದರು.

ನಿಯಮ ಉಲ್ಲಂಘಿಸಿದ್ದಕ್ಕೆ ನನಗೂ ಮುಜುಗರ ಆಗಿದೆ. ವಿಷಯ ಗೊತ್ತಾದ ತಕ್ಷಣ ನಾನು ನಾಡಿನ ಸಮಸ್ತ ಜನತೆಗೆ ಬಹಿರಂಗ ಕ್ಷಮೆ ಯಾಚಿಸಿದ್ದೇನೆ.ಎಸ್.ಪಿ ಕೂಡ ನಿನ್ನೆ ಫೋನ್ ಮಾಡಿದ್ದರು. ಪಕ್ಷಕ್ಕೆ ಮುಜುಗರ ಆಗಬಾರದೆಂದು ಕ್ಷಮೆ ಕೇಳಿರುವುದಾಗಿ ಹೇಳಿದರು.

ಡಿ.ಕೆ.ಶಿವಕುಮಾರ್ ತಮ್ಮ ಸ್ವಾರ್ಥಕ್ಕೋಸ್ಕರ, ಅಧಿಕಾರಕ್ಕೋಸ್ಕರ, ಹೈಕಮಾಂಡ್ ಮೆಚ್ಚಿಸೋದಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ.ಆದರೆ ನಾನು ರಾಜಕೀಯ ಲಾಭಕ್ಕೋಸ್ಕರ ಕಾರ್ಯಕ್ರಮದಲ್ಲಿ ಭಾಗಿ ಆಗಲಿಲ್ಲ.ಶಿವಕುಮಾರ್ ನೀವು ಅಧಿಕಾರದಲ್ಲಿದ್ದಾಗ ಅನೇಕ ಸಲ ನಮ್ಮ ಮೇಲೆ ಕೇಸ್ ಹಾಕಿದ್ದಾರೆ.ಹಿಂದೆ ನೀವು ಅಧಿಕಾರದಲ್ಲಿ ಇದ್ದಾಗ ನನ್ನ ಬೆಂಕಿ ಹಚ್ಚಿ ಸುಡೋಕೇ ಬಂದಿದ್ದರು.ಭಂಡತನದಿಂದ ಖುರ್ಚಿಗೋಸ್ಕರ ನೀವು ಕಾನೂನು ಉಲ್ಲಂಘಿಸಿದ್ದೀರಿ.ಮೇಕೆದಾಟು ಪಾದಯಾತ್ರೆಗೆ ಹೊರಗಿನಿಂದೆಲ್ಲ ಜನ ಬಂದಿದ್ದಾರೆ.ನಿಮ್ಮ ತರಹ ಸಿದ್ದರಾಮಯ್ಯ ನಡುವಿನ ಕಂದಕ ಮರೆಮಾಚುವುದಕ್ಕೆ ಅಧಿಕಾರಕ್ಕೆ ಪಾದಯಾತ್ರೆ ಮಾಡುತ್ತಿಲ್ಲ.ನಿಮ್ಮ ತರಹ ಭಂಡತನಕ್ಕೆ ಬಿದ್ದು ಅಧಿಕಾರಕ್ಕೋಸ್ಕರ ಭಂಡತನ ಪ್ರದರ್ಶನ ಮಾಡುವುದಿಲ್ಲ. ವೀರಾವೇಶ ಪೌರುಷದ ಬಗ್ಗೆ ಮಾತನಾಡುವ ಡಿ.ಕೆ.ಶಿವಕುಮಾರ್ ನನ್ನ ತರಹ ಕ್ಷಮೆ ಕೇಳಲಿ ಎಂದು ರೇಣುಕಾಚಾರ್ಯ ಸವಾಲೆಸೆದರು.

Share