Connect with us


      




ಕರ್ನಾಟಕ

ಹಲಾಲ್, ಜಟ್ಕಾ ಕಟ್ ಅಂದರೆ ಏನು ಅಂತನೇ ನನಗೆ ಗೊತ್ತಿಲ್ಲ: ಕೆ.ಎಸ್ ಈಶ್ವರಪ್ಪ

Vanitha Jain

Published

on

ಬೆಂಗಳೂರು: ಮಾರ್ಚ್ 31 (ಯು.ಎನ್.ಐ.) ರಾಜ್ಯದಲ್ಲಿ ಹಲಾಲ್ ವಿವಾದ ಹಿನ್ನೆಲೆ ಈ ಹಲಾಲ್, ಜಟ್ಕಾ ಕಟ್ ಅಂದರೆ ಏನು ಅಂತನೇ ನನಗೆ ಗೊತ್ತಿಲ್ಲ ನಾನೂ ಈ ವಿಷಯದ ಬಗ್ಗೆ ಪತ್ರಿಕೆಯ ಮೂಲಕ ನೋಡಿದ್ದೇನೆ ಎಂದು ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

ಹಿಂದೂ ಸಂಪ್ರದಾಯದಂತೆ ಪ್ರಾಣಿ ಹತ್ಯೆಯಾಗಲಿ ಎಂಬುದು ನನ್ನ ಅಭಿಪ್ರಾಯ. ಆದರೆ ಮುಸಲ್ಮಾನರಿಗೆ ಪ್ರಾಣಿ ಹತ್ಯೆ ವಿಚಾರದಲ್ಲಿ ಅಭಿಪ್ರಾಯ ಇದೆ. ಅದನ್ನು ನಡೆಸಿಕೊಂಡು ಹೋಗಲಿ. ಹಿಂದೂಗಳು ಅಷ್ಟೇ ಅವರ ಅಭಿಪ್ರಾಯದಂತೆ ಮುಂದುವರೆಯಲಿ. ಮುಸಲ್ಮಾನರು ಹಿಂದೂಗಳ ಬಳಿ ಹೋಗಿ ಖರೀದಿ ಮಾಡಬೇಡಿ ಅನ್ನೋಕೆ ಅವರಿಗೆ ಏನು ಹಕ್ಕು ಇಲ್ಲ ಎಂದು ಹೇಳಿದರು.

ಸಿಎಂ ಬಸವರಾಜ್ ಬೊಮ್ಮಾಯಿ ಗಂಡಸ್ತನದ ಬಗ್ಗೆ ಕುಮಾರಸ್ವಾಮಿ ಮಾಡಿದ ಪ್ರಶ್ನೆಯನ್ನು ಖಂಡಿಸಿದ ಅವರು, ಒಬ್ರು ಮುಖ್ಯಮಂತ್ರಿ ಯಾದಂತವರು, ಮತ್ತೊಬ್ಬ ಮುಖ್ಯಮಂತ್ರಿ ಗಂಡಸ್ತನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ, ಅವ್ರು ಒಬ್ರು ಹಿರಿಯ ರಾಜಕಾರಣಿ ಎಂದರು.

Share