Published
5 months agoon
By
Vanitha Jainಹೈದರಾಬಾದ್, ಡಿಸೆಂಬರ್ 11(ಯು.ಎನ್.ಐ) ಟಾಲಿವುಡ್ ತಾರೆಗಳಾದ ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ವಿಚ್ಛೇದನ ತೆಗೆದುಕೊಳ್ಳುವುದಾಗಿ ಘೋಷಿಸಿ ಪ್ರತ್ಯೇಕವಾಗಿಯೇ ಜೀವಿಸುತ್ತಿದ್ದಾರೆ. ಇವರಿಬ್ಬರು ಬೇರೆಯಾಗಿರುವುದಕ್ಕೆ ಸಾಕಷ್ಟು ಸುಳ್ಳು ವದಂತಿಗಳು ಹರಿದಾಡಿದವು. ಅದೆಲ್ಲದರ ಹೊರತಾಗಿ ಇವರಿಬ್ಬರು ಅಕ್ಟೋಬರ್ 2ರಂದು ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದರು. ಆದರೆ ಈ ಪ್ರತ್ಯೇಕತೆಯ ವಿಚಾರ ಒಂದಲ್ಲಾ ಒಂದು ಸಮಯದಲ್ಲಿ ಮುನ್ನೆಲೆಗೆ ಬರುತ್ತಲೇ ಇದೆ.
ಇದೀಗ ಇದೇ ವಿಚಾರವಾಗಿ ಮತ್ತೆ ಪ್ರತಿಕ್ರಿಯಿಸಿರುವ ಸಮಂತಾ ಅಕ್ಕಿನೇನಿ, ‘ನಾನು ಈ ವಿಚಾರದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದೇನೆ ಎಂದು ಭಾವಿಸುತ್ತೇನೆ. ಆಗ ಮಾತನಾಡುವುದು ಮುಖ್ಯವಾಗಿತ್ತು. ಮಾತನಾಡಿದ್ದೇನೆ. ಆದರೆ ಅದೇ ಮಾತನ್ನು ಪುನರಾವರ್ತಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವಿಚ್ಛೇದನದ ಪ್ರಸ್ತಾಪ ಇನ್ನು ಮುಂದೆ ಬೇಡ’ ಎಂದು ನಯವಾಗಿಯೇ ತಿಳಿಸಿದ್ದಾರೆ.
‘ಫ್ಯಾಮಿಲಿ ಮ್ಯಾನ್ 2’ ಚಿತ್ರದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ನಾನು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಈ ಸಿನಿಮಾದಲ್ಲಿ ದೊರೆತಿರುವ ಅದ್ಭುತ ಪಾತ್ರವನ್ನು ನಿರ್ವಹಿಸುತ್ತಿರವ ನಾನೇ ಅದೃಷ್ಟವಂತೆ. ನನ್ನ ನಂಬಿ ಕೊಡುತ್ತಿರುವ ಪಾತ್ರಗಳಿಗೆ ನಾನು ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರು ಟ್ರೋಲ್ಗಳಿಗೂ ಪ್ರತಿಕ್ರಿಯಿಸಿರುವ ಸಮಂತಾ, ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಜನರನ್ನು ನಾನು ಪ್ರೋತ್ಸಾಹಿಸುತ್ತೇನೆ. ನಾವು ಪರಸ್ಪರ ಪ್ರೀತಿಸಬಹುದು, ಸಹಾನುಭೂತಿ ತೋರಬಹುದು. ಆದರೆ ಅಭಿಪ್ರಾಯಗಳನ್ನು ಸುಸಂಸ್ಕೃತ ನಡೆಯಲ್ಲಿ ವ್ಯಕ್ತಪಡಿಸಲು ನಾನು ವಿನಂತಿಸುತ್ತೇನೆ ಎಂದರು.